ಜ್ಞಾವಾಪಿ: ವಾರಣಾಸಿಯ ಜ್ಞಾವನಾಪಿ ಮಸೀದಿಯ ವಿವಾದವನ್ನು ಬಗೆಹರಿಸಲು ಅಲಹಾಬಾದ್ ಹೈಕೋರ್ಟ್ ಜ್ಞಾನವಾಪಿ ಮಸೀದಿಯ ಕುರಿತು ಮಹತ್ವದ ತೀರ್ಪನ್ನು ನೀಡಿದೆ. ಎರಡು ಕಡೆಗಳ ತೀರ್ಪುಗಳ ನಂತರ ಕೆಲ ದಿನಗಳ ಕಾಲ ತೀರ್ಪನ್ನು ಕಾಯ್ದಿರಿಸಿದ್ದು ಇದೀಗ ತೀರ್ಪು ಹೊರಬಿದ್ದಿದೆ. ಎಎಸ್ ಐ ತಂಡಕ್ಕೆ ವೈಜ್ಞಾನಿಕ ಸಮೀಕ್ಷಗೆ ಅನುಮತಿ ನೀಡಿದೆ.
ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ, ಸರ್ವೆ ನಡೆಸಲು ಪುರಾತತ್ವ ಇಲಾಖೆಗೆ ಅನುಮತಿ ನೀಡಿ ತೀರ್ಪು ನೀಡಿದೆ. ಸರ್ವೆಗೆ ತಡೆ ನೀಡುವಂತೆ ಕೋರಿದ್ದ ಮಸೀದಿ ಮಂಡಳಿ ಅರ್ಜಿ ವಜಾಗೊಳಿಸಿದೆ. ಹಲವು ಷರತ್ತು ವಿಧಿಸಿ ಸರ್ವೆ ನಡೆಸಲು ಅನುಮತಿ ನೀಡಲಾಗಿದೆ.
ಜ್ಞಾನವಾಪಿ ಸರ್ವೆ ಪ್ರಕರಣದಲ್ಲಿ ಹಿಂದೂ ಪರವಾಗಿ ವಿಷ್ಣು ಶಂಕರ್ ಜೈನ್ ಸುದ್ದಿಗಾರರೊಂದಿಗೆ ಮಾತನಾಡಿ ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್‌ಐ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದು ಹೇಳಿದರು.
Grama Panchayath : ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧ ಆಯ್ಕೆ