ರಾಷ್ಟ್ರೀಯ ಸುದ್ದಿ: ಅಯೋದ್ಯ ರಾಮಮಂದಿರ ವಿವಾದ ಮುಗಿಯುತ್ತಿದ್ದಂತೆ ಜ್ಞಾನವ್ಯಾಪಿ ಕಟ್ಟಡದ ವಿವಾದ ಮುನ್ನೆಲೆಗೆ ಬಂದಿದೆ. ಈಗಾಗಲೆ ಈ ಕಟ್ಟಡವನ್ನು ಹಿಂದೂ ದೇವಾಲಯ ಎನ್ನುವುದಕ್ಕೆ ಹಲವಾರು ಸಾಕ್ಷಿಗಳು ದೊರತಿದ್ದು ಎಎಸ್ ಐ ತಂಡ ತನಿಖೆ ನಡೆಸುತ್ತಿದೆ ಇದರ ಬೆನ್ನಲ್ಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜ್ಞಾನವ್ಯಾಪಿ ಕಟ್ಟಡದ ಬಗ್ಗೆ ನೀಡಿದ ಹೇಳಿಕೆ ಬಹಳ ಚರ್ಚೆಗೆ ಕಾರಣವಾಗಿದೆ.
ಜ್ಞಾನವಾಪಿ ಮಸೀದಿ ವಿವಾದದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ್ದು, ಜ್ಞಾನವಾಪಿ ಗೋಡೆಗಳು ಜೈಕಾರ ಹಾಕುವ ಮೂಲಕ ಕೂಗಿ ಹೇಳುತ್ತಿವೆ. ಅಲ್ಲಿನ ಪರಿಸ್ಥಿತಿಯನ್ನು ತೋರಿಸುತ್ತಿದೆ. ಜ್ಞಾನವಾಪಿ ವಿಚಾರದಲ್ಲಿ ಐತಿಹಾಸಿಕ ಪ್ರಮಾದ ನಡೆದಿದೆ. ಆದ್ದರಿಂದ ಅದನ್ನು ಮಸೀದಿ ಎಂದು ಕರೆಯುವುದು ತಪ್ಪಾಗುತ್ತದೆ ಎಂದಿದ್ದಾರೆ.
ವಾಸ್ತವವಾಗಿ, ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಕ್ಯಾಂಪಸ್‌ನ ವಿವಾದಿತ ವಾಜು ಖಾನಾ ಭಾಗವನ್ನು ಹೊರತುಪಡಿಸಿ ಎಲ್ಲಾ ಪ್ರದೇಶಗಳ ಎಎಸ್‌ಐ ಸಮೀಕ್ಷೆಗೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಮಸೀದಿ ಸಮಿತಿ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ನಂತರ ಸರ್ವೆ ನಿಲ್ಲಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಿತ್ತು. ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಇದರ ತೀರ್ಪನ್ನು ಕಾಯ್ದಿರಿಸಲಿದೆ.
ನ್ಯಾಯಲಯದಿಂದ ತೀರ್ಪು ಯಾರ ಪರ ಆಗುತ್ತೆ ಅಸಲಿಗೆ ಅದು ಮಸಿದಿನಾ ಅಥವಾ ಮಂದಿರನಾ ಎಂಬುದು ತಿಳಿಯುತ್ತದೆ.