“ಎಚ್.ಡಿ.ಕೆಯವರದ್ದು ಅಡ್ಜೆಸ್ಟ್ಮೆಂಟ್ ರಾಜಕೀಯ” : ಸಿ.ಪಿ.ಯೋಗೇಶ್ವರ್

Banglore News:

ಸಿ.ಪಿ.ಯೋಗೇಶ್ವರ್ ರವರು ಕಾಂಗ್ರೆಸ್  ಗೆ ಸೇರುತ್ತಾರೆ ಎಂಬ ವದಂತಿ ಹಬ್ಬುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಪಿವೈ ಇದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.ಜೊತೆಗೆ ಎಚ್.ಡಿ.ಕೆ ಬಗ್ಗೆಯೂ  ರಾಮನಗರದಲ್ಲಿ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.

ಎಲ್ಲಾ ಸರ್ಕಾರದಲ್ಲಿಯೂ ಮಾಜಿ ಸಿಎಂ ಎಂಬ ಟ್ಯಾಗ್‌ ಎಚ್.ಡಿ. ಕುಮಾರಸ್ವಾಮಿಗಿದೆ. ಸಿಎಂ ಆದರೆ ಚೆನ್ನಪಟ್ಟಣವನ್ನು ಚಿನ್ನದ, ಚೆಂದದ ಪಟ್ಟಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರತಿ ಊರಿನಲ್ಲಿಯೂ ಮುಗ್ದ ಜನರಿಗೆ ಮೋಸ ಮಾಡಿದ್ದಾರೆ. ಸಾಲ ಮನ್ನಾ ಮಾಡುವುದಾಗಿ ಹೇಳಿ ಪಾಸ್‌ಬುಕ್ ಜೆರಾಕ್ಸ್‌ ಪಡೆದು ಅನ್ಯಾಯ ಮಾಡಿದ್ದಾರೆ. ಅವರದ್ದು ಅಡ್ಜೆಸ್ಟ್ಮೆಂಟ್ ರಾಜಕೀಯ ಎಂದು ಟೀಕಿಸಿದರು.

ನಮ್ಮ ಮುಖ್ಯಮಂತ್ರಿಯವರು ಎಚ್.ಡಿ. ಕುಮಾರಸ್ವಾಮಿಯ ಸ್ನೇಹಿತರಾಗಿರುವುದರಿಂದ ಅವರಿಗೆ ಫೇವರ್‍ ಮಾಡುತ್ತಿದ್ದಾರೆ. ನನಗೆ ತೊಂದರೆಯಾಗುತ್ತಿರುವ ಬಗ್ಗೆ ನಾನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಾಗುವುದಿಲ್ಲ,. ಆದರೆ ಸಮಯ ಬಂದಾಗ ಬೇರೆಡೆ ಹೇಳಿಕೊಳ್ಳುತ್ತೇನೆ ಎಂದು ಸಿಪಿವೈ ತಿಳಿಸಿದರು.

ಕಾಂಗ್ರೆಸ್ ಸೇರ್ತಾರಾ ಸಿ.ಪಿ.ಯೋಗೇಶ್ವರ್…!? ಸಚಿವರ ಉತ್ತರವೇನು…?!

ಇಂದಿನಿಂದ 3 ದಿನ ಕೊಡಗು ನಿಶಬ್ಧ…!

ನಾನು ಕಾನೂನನ್ನು ಉಲ್ಲಂಘಿಸುವ ತಪ್ಪು ಮಾಡಲ್ಲ, ಮಡಿಕೇರಿ ಪ್ರತಿಭಟನೆ ಮುಂದೂಡಿಕೆ – ಸಿದ್ಧರಾಮಯ್ಯ

About The Author