ಇವತ್ತು ನಾವು ನಮ್ಮ ಕೂದಲನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು.. ಕೂದಲ ಬುಡ ಗಟ್ಟಿಗೊಳ್ಳಲು ಯಾವ ಟ್ರಿಕ್ಸ್ ಉಪಯೋಗಿಸಬೇಕು.. ಇತ್ಯಾದಿ ವಿಷಯದ ಬಗ್ಗೆ ಟಿಪ್ಸ್ ನೀಡಲಿದ್ದೇವೆ..
ಇಂದಿನ ಯುವ ಪೀಳಿಗೆಯವರಲ್ಲಿ ಕಾಣ ಸಿಗುವ ಹೆಚ್ಚಿನ ಆರೋಗ್ಯ ಸಮಸ್ಯೆ ಅಂದ್ರೆ ಅದು ಕೂದಲು ಉದುರುವ ಸಮಸ್ಯೆ. ಕಲುಶಿತ ವಾತಾವರಣ, ನಾವು ತೆಗೆದುಕೊಳ್ಳುವ ಕೆಲ ಆಹಾರದಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಇತ್ತೀಚಿಗಂತೂ ನೂರಾರು ಹೇರ್ ಕೇರ್ ಪ್ರಾಡಕ್ಟ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದ್ರೆ ಇದ್ಯಾವುದರಿಂದಲೂ ಕೂದಲು ಮರಳಿ ಬರುತ್ತಿಲ್ಲ. ದುಡ್ಡಷ್ಟೇ ಖರ್ಚಾಗುತ್ತಿದೆ. ಹಾಗಾಗಿ ಈ ಸಮಸ್ಯೆಗೆ ನಾವು ಆಹಾರ ಮತ್ತು ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಸ್ನಾನ ಮಾಡುವ ಎರಡು ಗಂಟೆ ಮುಂಚೆ ಎಣ್ಣೆಯಿಂದ ತಲೆಯನ್ನು ಚೆನ್ನಾಗಿ ಮಸಾಜ್ ಮಾಡಿ. ಹೀಗೆ ಮಸಾಜ್ ಮಾಡುವುದರಿಂದ ರಕ್ತ ಸಂಚಲನೆ ಸರಾಗವಾಗಿ ಆಗುತ್ತದೆ. ಇದರಿಂದ ಕೂದಲಿನ ಬುಡ ಗಟ್ಟಿಗೊಳ್ಳುತ್ತದೆ. ಪ್ರತಿದಿನ ಡ್ರೈಫ್ರೂಟ್ಸ್, ಸೊಪ್ಪು, ಹಾಲು, ಸಿಹಿ ಗೆಣಸನ್ನ ನಿಯಮಿತವಾಗಿ ಸೇವಿಸಿ. ಆದಷ್ಟು ನೀರು ಕುಡಿಯಿರಿ. ಇದರ ಜೊತೆ ಸರ್ವಾಂಗಾಸನ, ಹಸ್ತ ಪಾದಾಸನ ಮಾಡಿ. ಕೊನೆಯದಾಗಿ ಯಾವಾಗಲೂ ಖುಷಿ ಖುಷಿಯಾಗಿರಿ. ಎಲ್ಲ ವಿಷಯಕ್ಕೂ ಟೆನ್ಶನ್ ತೆಗೆದುಕೊಳ್ಳಬೇಡಿ. ನೆನಪಿರಲಿ ಟೆನ್ಶನ್ ತೆಗೆದುಕೊಂಡಷ್ಟು ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.
ಇನ್ನು ಈ ಮೇಲೆ ತಿಳಿಸಿದಂಥ ವಸ್ತುಗಳನ್ನು ಬಳಸಿದಲ್ಲಿ ನಿಮಗೆ ಅಲರ್ಜಿ ಎಂದಾದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ಸಲಹೆ ಪಡೆದು ನಂತರ ಬಳಸಿ. ಇನ್ನು ಪ್ರತಿದಿನ ಸ್ಟ್ರೇಟ್ನರ್, ಹೇರ್ ಡ್ರೈಯರ್, ಹೇರ್ ಸೇರಮ್ ಬಳಸುವುದು ತುಂಬಾ ಅಪಾಯಕಾರಿ. ಅಲ್ಲದೇ ಪ್ರತಿದಿನ ತಲೆ ಸ್ನಾನ ಕೂಡ ಮಾಡಬಾರದು. ವಾರದಲ್ಲಿ ಎರಡರಿಂದ ಮೂರು ಬಾರಿ ತಲೆ ಸ್ನಾನ ಮಾಡಿದರೆ ಸಾಕು. ಅಲ್ಲದೇ, ಕೂದಲಿಗೆ ಶ್ಯಾಂಪೂ ,ಸೋಪ್ ಬಳಕೆ ಕಡಿಮೆ ಮಾಡಿ. ಇದರ ಬಳಕೆ ಹೆಚ್ಚಾದಷ್ಟು ಕೂದಲು ತೇವಾಂಶ ಕಳೆದುಕೊಂಡು ಒಣಗುತ್ತದೆ. ಆಗ ಕೂದಲು ಉದುರುವ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ.