8 ಸಾವಿರ HAL ನೌಕರರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ

ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ HAL ನೌಕರರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಬೆಂಗಳೂರಿನ 9 ಡಿವಿಷನ್ ಗಳಲ್ಲಿ 8 ಸಾವಿರ ನೌಕರರು ಪ್ರತಿಭಟನೆಗಿಳಿದಿದ್ದಾರೆ. ನಮ್ಮ ಬೇಡಿಕೆ ಈಡೇರದ ಹೊರತು ಪ್ರತಿಭಟನೆ ವಾಪಸ್ ಪಡೆಯೋದಿಲ್ಲ ಅಂತ ನೌಕರ ಸಂಘದವರು ಹೇಳಿದ್ದಾರೆ. ಒಡಿಶಾ, ಹೈದ್ರಾಬಾದ್ ಸೇರಿದಂತೆ ಇತರ HAL ಘಟಕಗಳಲ್ಲಿ ಪ್ರತಿಭಟನೆ ಆರಂಭವಾಗಿದ್ದು ದೇಶಾದ್ಯಂತ ಒಟ್ಟಾರೆ 20 ಸಾವಿರ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

About The Author