devotional story:
ಭಾರತದಲ್ಲಿ ಅನೇಕ ಮಹಾಮಹಿಮರು ಹನುಮಂತನ ವೈಶಿಷ್ಟತೆಯನ್ನು ಗುಣಗಾನ ಮಾಡಿದ್ದಾರೆ ಹನುಮರ ಆಶೀರ್ವಾದವನ್ನು ಪಡೆಯಲು ಕೋಟಿ ಕೋಟಿ ಜನರು ಹನುಮಾನ್ ಚಾಲೀಸವನ್ನು ಪಠಿಸುತ್ತಾರೆ ಹನುಮಾನ್ ಚಲಿಸಾವನ್ನು ಸಂತ ತುಳಸಿದಾಸರು ಹಿಂದಿ ಸಾಹಿತ್ಯದಲ್ಲಿ ರಚಿಸಿದ್ದಾರೆ ಇದರಲ್ಲಿ 40 ಸ್ತೋತ್ರಗಳಿದ್ದು ಹನುಮಾನ್ ಚಲಿಸಾವನ್ನು ಯಾರು ಭಕ್ತಿ ಮನೋಭಾವಗಳಿಂದ ಪಠಿಸುತ್ತಾರೋ ಅವರಿಗೆ ಭಗವಾನ್ ಹನುಮರಿಂದ ಯಾವ ಪ್ರಯೋಜನಗಳು ಸಿಗುತ್ತವೆ ಎಂದು ಹನುಮಾನ್ ಚಾಲಿಸಾದಲ್ಲಿ ಹೇಳಲಾಗಿದೆ ಪದ್ಯ 37ರಲ್ಲಿ ಹೇಳಿರುವಂತೆ ಯಾರು ಹನುಮಾನ್ ಚಾಲೀಸವನ್ನು 100 ದಿನದಲ್ಲಿ100 ಬಾರಿ ಪಠಿಸುತ್ತಾರೋ ಅವರು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತರಾಗಿ ದಿವ್ಯವಾದ ಮಹಾಸುಖವನ್ನು ಅನುಭವಿಸುತ್ತಾರೆ ಎಂಬ ನಂಬಿಕೆ ಇದೆ .ಹನುಮಾನ್ ಚಾಲೀಸಾದಲ್ಲಿ ಅದ್ಬುತವೇನೆಂದರೆ ವಿಜ್ಞಾನಿಗಳು ಭೂಮಿಯ ಮತ್ತು ಸೂರ್ಯನ ನಡುವಿನ ಅಂತರ ಕುರಿತು 17 ನೇ ಶತಮಾನದಲ್ಲಿ ಸಂಶೋಧನೆ ನಡೆಸಿ ತಿಳಿದುಕೊಂಡಿದ್ದಾರೆ, ತುಳಸೀದಾಸರು ಈ ಕುರಿತು 15 ನೇ ಶತಮಾನದಲ್ಲೆ ಹನುಮಾನ್ ಚಾಲಿಸದಲ್ಲಿ ಬರೆದಿದ್ದಾರೆ .
ಹಾಗಾದರೆ ಎಲ್ಲರು ಭಕ್ತಿಯಿಂದ ಸ್ತುತಿಸುತ್ತಿರುವ ಜಯಾ ಹನುಮಾನ ಜ್ಞಾನಗುಣ ಸಾಗರ ಎಂಬ ಹನುಮಾನ್ ಚಾಲಿಸ ಹುಟ್ಟಿದ್ದಾದರೂ ಹೇಗೆ ಗೊತ್ತಾ…? ಹನುಮಾನ್ ಚಾಲೀಸಾಗೆ ಸಂಬಂಧಿಸಿದ ಕೆಲವೊಂದು ಅದ್ಭುತ ಸಂಗತಿಗಳನ್ನು ನಾವಿಂದು ತಿಳಿದುಕೊಳ್ಳೋಣ ಬನ್ನಿ .
ಒಮ್ಮೆ ತುಳಸಿದಾಸರು ಮರಣಿಸಿರುವ ಮನುಷ್ಯನನ್ನು ಶ್ರೀರಾಮರ ಅನುಗ್ರಹದಿಂದ ಬದುಕಿಸುತ್ತಾರೆ ಆದಕಾರಣ ಹಿಂದುಗಳೇ ಅಲ್ಲದೆ ಅನ್ಯ ಮತದವರು ಸಹ ರಾಮ ದೀಕ್ಷೆ ಪಡೆಯಲು ಪ್ರಾರಂಭಿಸುತ್ತಾರೆ .ಈ ವಿಷಯ ಮೊಘಲ್ ಚಕ್ರವರ್ತಿ ಅಕ್ಬರನಿಗೆ ತಿಳಿದು ತುಳಸೀದಾಸರನು ತನ್ನ ನಿವಾಸದ ಸ್ಥಳಕ್ಕೆ ಕರೆಸಿಕೊಂಡು ಹೀಗೆ ಪ್ರಶ್ನೆ ಮಾಡುತ್ತಾರೆ ಮರಣಿಸುವವರನ್ನು ಬದಿಕಿಸುವ ಶಕ್ತಿ ನಿಮ್ಮ ರಾಮನಾಮಕ್ಕಿದಿಯಾ..? ಹಾಗಾದರೆ ಇಲ್ಲಿ ನಾನು ಒಂದು ಶವವನ್ನು ತರಿಸಿದ್ದೇನೆ ನಿಮ್ಮ ರಾಮ ಮಹಿಮೆ ಇಂದ ಬದುಕಿಸು ಎಂದು ಹೇಳುತ್ತಾನೆ, ಹಾಗ ತುಳಸೀದಾಸರು ಶ್ರೀರಾಮನಾಮವು ಮರಣಿಸುವ ವ್ಯಕ್ತಿಯನ್ನು ಬದುಕಿಸುತದ್ದೆ ಆದರೆ ಜನನ ಮರಣಗಳು ನಮ್ಮ ಕೈಯಲ್ಲಿಇಲ್ಲ ಎಲ್ಲ ದೈವ ನಿರ್ಣಯಗಳು ನಾನು ಈ ಕೆಲಸವನ್ನು ಮಾಡಲಾರೆ ಎಂದು ಹೇಳುತ್ತಾನೆ. ಆಗ ಅಕ್ಬರನು ಕೋಪಗೊಂಡು ತುಳಸೀದಾಸರನ್ನು ಹಿಂಸಿಸಲು ಪ್ರಾರಂಭಿಸುತ್ತಾನೆ ಹಾಗು ಕಾರಾಗೃಹದಲ್ಲಿ ಬಂದಿಸುತ್ತಾನೆ .ಬಂದಿಯಲ್ಲಿದ್ದ ತುಳಸಿದಾಸ ಪ್ರತಿದಿನ ಶ್ರೀರಾಮ ಮತ್ತು ಹನುಮನನ್ನು ಸ್ವಮರಣೇ ಮಾಡುತ್ತ ಕಾಲ ಕಾಲಕಳೆಯುತ್ತಾರೆ ಹಾಗೆಯೆ 40 ದಿನಗಳು ಕಳೆದು ಹೋದವು 40ನೇ ದಿನ , ಗುಂಪು ಗುಂಪಾಗಿ ಎಲಿದಲ್ಲೋ ಸಾವಿರ ಸಾವಿರ ಸಂಖ್ಯೆಯಲ್ಲಿ ಮಂಗಗಳು ಬಂದು ,ಸೈನಿಕರ ಮೇಲೆ ಆಕ್ರಮಣ ಮಾಡತೊಡಗಿತು, ಆ ಸಮಯದಲ್ಲಿ ಸಭೆಯಲ್ಲಿ ಕಲಕಲ ಉಂಟಾಗುತದ್ದೆ ,ಆ ಶಬ್ದಕ್ಕೆ ಕಣ್ಣು ತೆರೆದ ತುಳಸೀದಾಸರಿಗೆ ,ಅವು ಮಂಗಗಳಲ್ಲ “ರಾಮದಂಟ್ಟು” ಎಂದು ತಿಳಿಯುತ್ತದೆ ,ಹಾಗು ಎದುರಿನಲ್ಲಿ ಸಿಂಹದ್ಯಾರದ ಮೇಲೆ ಕುಳಿತುಕೊಂಡು ಅಭಯಾಸ್ತವನ್ನು ತೋರಿಸುತೀರುವ ಹನುಮರ ದರ್ಶನ ವಾಗುತ್ತದೆ .ಹಾಗ ತುಳಸಿದಾಸರು ಭಕ್ತಿ ಭಾವದಿಂದ ತನ್ಮಯರಾಗಿ ಹನುಮಾನ್ ಸ್ತುತಿ ಹೇಳುತ್ತಾರೆ ಅದೆ ಹನುಮಾನ್ ಚಾಲೀಸಾ ,ತುಳಸೀದಾಸರ ಈ ಸ್ತುತಿಗೆ ಹನುಮಂತರು ಪ್ರಸನ್ನರಾಗಿ ಯಾವ ವರ ಬೇಕೆಂದು ಕೇಳುತ್ತರೆ ಹಾಗ ತುಳಸಿದಾಸರು ಹನುಮಾನ್ ಚಾಲಿಸದಲ್ಲಿ ನಿಮನ್ನು ಯಾರು ಸ್ತುತಿಸುತ್ತಾರೋ ಅವರಿಗೆ ಪ್ರಸನ್ನರಾಗಿ ಎಂದು ಹೇಳುತ್ತಾರೆ ಹೀಗೆ ಹನುಮಾನ್ ಚಾಲಿಸವು ಉದ್ಭವವಾಯಿತು .
ಮೇಲೆ ತಿಳಿಸಿರುವ ಪ್ರಕಾರ ಹನುಮಾನ್ ಚಾಲೀಸವನ್ನು ಯಾರು ಭಕ್ತಿಯಿಂದ ಶುದ್ಧ ಮನಸ್ಸಿನಿಂದ ಪಠಿಸುತ್ತಾರೋ ಅವರನ್ನು ಹನುಮರು ಸದಾ ಕಾಲ ರಕ್ಷಿಸುತ್ತಾರೆ.