ಹರಿಯಾಣ: ನಾವೆಲ್ಲ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಕಾಣಿಕೆ ಡಬ್ಬಿಯಲ್ಲಿ ಹಣ ಹಾಕಿ ನಮ್ಮ ಬೇಡಿಕೆ ಗಳನ್ನು ಇಡುತ್ತೇವೆ ಆದರೆ ಇಲ್ಲೊಬ್ಬ ಭಕ್ತ ಹನುಮನ ದರ್ಶನ ಮಾಡಿ ಪುಸ್ತಕದಲ್ಲಿರುವ ಮಂತ್ರವನ್ನು ಪಠಿಸಿ ಕಾಣಿಕೆಗೆ ಹತ್ತು ರೂ ಹಣವನ್ನು ಹಾಕಿದ್ದಾನೆ ಆದರೆ ಮಂದೆ ಏನು ಮಾಡಿದ್ದಾನೆ ಕೇಳಿ
ಹರಿಯಾಣದ ರೇವಾರಿ ಜಿಲ್ಲೆಯ ಧರುಹೇರಾದಲ್ಲಿ ಭಕ್ತನೊಬ್ಬ ಹನುಮಂತನ ದೇವಸ್ಥಾನದಲ್ಲಿ ಮೂರ್ತಿ ಎದುರು ಕುಳಿತು ಕೆಲವು ನಿಮಿಷಗಳ ಕಾಲ ಹನುಮಾನ್ ಚಾಲಿಸು ಪಠಿಸಿ ನಂತರ ಹತ್ತು ರೂಪಾಯಿ ಕಾಣಿಕೆ ಹಾಕಿ ನಂತರ ಅದೇ ಹುಂಡಿಯಿಂದ ಬರೋಬ್ಬರಿ 5000 ರೂ ಹಣವನ್ನು ಕದ್ದು ಪರಾರಿಯಾಗಿದ್ದಾನೆ.
ದೇವಸ್ಥಾನದಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಈ ಕಳ್ಳತನ ಪ್ರಕರಣ ದಾಖಲಾಗಿದೆ.ರಾತ್ರಿ ವೇಳೆ ಬೀಗ ಹಾಕಿಕೊಂಡು ಹೋಗಿರುವ ಅರ್ಚಕರಿಗೆ ಬೆಳಿಗ್ಗೆ ದೇವಸ್ಥಾನದ ಬೀಗ ತೆರೆದಾಗ ಆರ್ಶರ್ಯವಾಗಿದೆ. ನಂತರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಕಳ್ಳನ ಹುಡುಕಾಟದಲ್ಲಿದ್ದಾರೆ.
ಈ ವಿಡಿಯೋ ನೊಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ .
Naleen Kumar Kateel : ಹತ್ಯೆ ಹಿಂದಿರುವ ಯಾವುದೇ ಶಕ್ತಿಯ ಬಂಧನ, ಕಠಿಣ ಶಿಕ್ಷೆ ಆಗಬೇಕು : ಕಟೀಲ್
Fake Record : ನಕಲಿ ದಾಖಲೆ ಸಿದ್ದಪಡಿಸುತ್ತಿದ್ದ ಜಾಲ ಬೇಧಿಸಿದ ಪೊಲೀಸರು