Friday, September 12, 2025

Latest Posts

ದಲಿತ ಮಹಿಳೆಗೆ ಕಿರುಕುಳ AAP ಶಾಸಕನೇ ಅಪರಾಧಿ

- Advertisement -

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ, ಪಂಜಾಬ್‌ನ ಎಎಪಿ ಶಾಸಕ ಮಂಜಿಂದರ್ ಸಿಂಗ್ ಲಾಲ್ಪುರ್‌ಗೆ ಸಂಕಷ್ಟ ಎದುರಾಗಿದೆ. 2013ರಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹಲ್ಲೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ತರಣ್‌ನ ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ, 13 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ. ಒಟ್ಟು 10 ಮಂದಿ ದೋಷಿಗಳೆಂದು ಸಾಬೀತಾಗಿದ್ದು, ಸೆಪ್ಟೆಂಬರ್‌ 12ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ಈಗಾಗಲೇ ಖಾದೂರ್ ಸಾಹಿಬ್ ಕ್ಷೇತ್ರದ ಶಾಸಕ ಮಂಜಿಂದರ್ ಸಿಂಗ್ ಲಾಲ್ಪುರ್, ಪೊಲೀಸರು ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ. 2013ರಲ್ಲಿ ಘಟನೆ ನಡೆದ ಸಮಯದಲ್ಲಿ, ಶಾಸಕ ಲಾಲ್ಪುರ್ ಟಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ರು. 2022ರಲ್ಲಿ ಮಂಜಿಂದರ್, ಖಾದೂರ್ ಸಾಹೀಬ್ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ರು. 55,756 ಮತಗಳ ಅಂತರದಿಂದ ಕಾಂಗ್ರೆಸ್‌ ಶಾಸಕ ರಮಣ್‌ಜಿತ್ ಸಿಂಗ್ ಸಿಕ್ಕಿ ವಿರುದ್ಧ ಗೆಲುವು ಸಾಧಿಸಿದ್ದರು.

ಈ ಲೈಂಗಿಕ ದೌರ್ಜನ್ಯ ಪ್ರಕರಣ 2013ರ ಸೆಪ್ಟೆಂಬರ್ 4ರಂದು ನಡೆದಿತ್ತು. ಆಗ 19 ವರ್ಷದವಳಾಗಿದ್ದ ದಲಿತ ಮಹಿಳೆ ಮೇಲೆ, ಟಾಕ್ಸಿ ಚಾಲಕನಾಗಿದ್ದ ಮಂಜಿಂದರ್ ಸಿಂಗ್ ಹಾಗೂ ಇತರರು ಲೈಂಗಿಕ ದೌರ್ಜನ್ಯವೆಸಗಿದ್ದರು. ಸಂತ್ರಸ್ತ ಮಹಿಳೆ ಹಾಗೂ ಕುಟುಂಬಸ್ಥರು, ಪೊಲೀಸರಿಗೆ ದೂರು ನೀಡಿದ್ರು.

12 ಆರೋಪಿಗಳಲ್ಲಿ ಒಬ್ಬನಾದ ಪರಮ್‌ಜಿತ್ ಎಂಬಾತ, ವಿಚಾರಣೆ ಸಮಯದಲ್ಲೇ ಸಾವನ್ನಪ್ಪಿದ್ದಾನೆ. ಶಾಸಕ ಮಂಜಿಂದರ್ ಸಿಂಗ್ ಲಾಲ್ಪುರ್, ರವೀಂದರ್ ಸಿಂಗ್, ಕವಲ್ದೀಪ್ ಸಿಂಗ್ ಮತ್ತು ಮಾಜಿ ಪೊಲೀಸ್ ಅಧಿಕಾರಿಗಳಾದ ದವೀಂದರ್‌ ಕುಮಾರ್, ಸರಜ್‌ ಸಿಂಗ್, ಅಶ್ವನಿ ಕುಮಾರ್, ತರ್ಸೆಮ್ ಸಿಂಗ್ ಹಾಗೂ ಹರ್ಜಿಂದರ್‌ ಸಿಂಗ್‌ರನ್ನ ಈಗಾಗಲೇ ಬಂಧಿಸಲಾಗಿದೆ. ಇತರ ಮೂವರು ಅಪರಾಧಿಗಳಾದ ಗುರುದೀಪ್ ರಾಜ್, ಗಗನ್‌ ದೀಪ್ ಸಿಂಗ್, ನರಿಂದರ್ಜಿತ್ ಸಿಂಗ್ ಬಂಧನ ಇನ್ನೂ ಆಗಿಲ್ಲ.

- Advertisement -

Latest Posts

Don't Miss