ಇಂಡಿಯನ್ ಕ್ರಿಕೇಟ್ ಟೀಮ್‌ನ ಸ್ಪಿನ್ನರ್ ಹರ್‌ಭಜನ್ ಸಿಂಗ್ ನಿವೃತ್ತಿ ಘೋಷಿಸಿದ್ದಾರೆ. ಎಲ್ಲ ಆಟಗಳಿಂದಲೂ ನಿವೃತ್ತಿ ಘೋಷಿಸಿರುವ ಭಜ್ಜಿ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿದಾಯ ಭಾಷಣ ಮಾಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಭಜ್ಜಿ, ಎಲ್ಲ ಒಳ್ಳೆಯ ವಿಷಯಗಳಿಗೂ ಅಂತ್ಯವಿರುತ್ತದೆ. ಅಂತೆಯೇ ಇಂದು ನಾನು ನನಗೆ ಎಲ್ಲ ಕೊಟ್ಟ ಕ್ರಿಕೇಟ್ ಜಗತ್ತಿದೆ ವಿದಾಯ ಹೇಳುತ್ತಿದ್ದೇನೆ. ಈ 23 ವರ್ಷಗಳ ಸುದೀರ್ಘ ಪ್ರಯಾಣವನ್ನು ಸುಂದರ ಮತ್ತು ಸ್ಮರಣೀಯವಾಗಿ ಮಾಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.
ಇನ್ನು ಈ ಬಗ್ಗೆ ವಿದಾಯ ಭಾಷಣ ಮಾಡಿರುವ ಭಜ್ಜಿ, ಜಲಂಧರ್‌ನ ಗಲ್ಲಿಯಿಂದ ಶುರುವಾದ ನನ್ನ ಕ್ರಿಕೇಟ್ ಪ್ರಯಾಣ, 23 ವರ್ಷ ನಡೆದುಕೊಂಡು ಬಂದಿದ್ದು, ಇಂದು ಆ ಪ್ರಯಾಣಕ್ಕೆ ವಿದಾಯ ಹೇಳಲಿದ್ದೇನೆ. ನಾನು ಎಂದಿಗೋ ನಿವೃತ್ತಿ ತೆಗೆದುಕೊಂಡಿದ್ದೆ. ಆದ್ರೆ ಅದನ್ನ ಘೋಷಣೆ ಮಾಡಿರಲಿಲ್ಲ. ನಿಜವಾಗ್ಲೂ ಈ ಪ್ರಯಾಣ ತುಂಬ ಸುಂದರವಾಗಿತ್ತು. ನಾನು ಇಂಡಿಯಾದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿಯುವುದಕ್ಕಿಂತ ದೊಡ್ಡ ಪ್ರೇರಣೆ ಮತ್ತೊಂದಿಲ್ಲ ಎಂದಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲಿಯೂ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ ಬರುತ್ತದೆ. ಮತ್ತು ಜೀವನದಲ್ಲಿ ಮುಂದುವರಿಯಬೇಕಾಗುತ್ತದೆ. ಅದಕ್ಕಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಎಲ್ಲ ಕ್ರಿಕೇಟಿಗರಂತೆ ನಾನು ಇಂಡಿಯಾ ಜರ್ಸಿಯಲ್ಲೇ ವಿದಾಯ ಹೇಳಬೇಕೆಂದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ ಅಂತಾ ಭಜ್ಜಿ ಬೇಸರ ಪಟ್ಟಿದ್ದಾರೆ.
ನನ್ನ ಗುರುಗಳಾದ ಸಂತ ಹರಿಚರಣ್ ಅವರ ಆಶೀರ್ವಾದದಿಂದಲೇ ನಾನು ಇಲ್ಲಿವರೆಗೆ ಬಂದಿದ್ದು, ನನ್ನ ಅಪ್ಪ ಅಮ್ಮ ಕೂಡ ನನ್ನ ಏಳಿಗೆಗಾಗಿ ತುಂಬ ಸಂಘರ್ಷ ಮಾಡಿದ್ದಾರೆ. ದೇವರಲ್ಲಿ ನನ್ನದೊಂದು ಮನವಿ ಇದೆ. ನನಗೆ ಮುಂದಿನ ಜನ್ಮವಿದ್ದರೆ, ಅಲ್ಲೂ ಕೂಡ ನಾನು ಇದೇ ತಂದೆ ತಾಯಿ ಹೊಟ್ಟೆಯಲ್ಲೇ ಹುಟ್ಟಿಬರುವಂತಾಗಲಿ. ನನ್ನ ಸಹೋದರಿಯರು ಕೂಡ ನನ್ನ ಸಲುವಾಗಿ ಎಷ್ಟೆಲ್ಲ ಪ್ರಾರ್ಥಿಸಿದ್ದಾರೆ. ಅವರ ಪ್ರಾರ್ಥನೆಯಿಂದಲೇ ನನಗೆ ಯಶಸ್ಸು ಸಿಕ್ಕಿದೆ ಅಂತಾ ಹೇಳಬಹುದು. ಇನ್ನು ಅವರಿಗಾಗಿಯೇ ನನ್ನ ಸಮಯವನ್ನು ಮೀಸಲಿಡುತ್ತೇನೆಂದು ಭಜ್ಜಿ ಹೇಳಿದ್ದಾರೆ..
ಇನ್ನು ಪತ್ನಿ ಗೀತಾಳಿಗೂ ಧನ್ಯವಾದ ಹೇಳಿದ ಭಜ್ಜಿ, ನಿನ್ನ ಪ್ರೀತಿಯೇ ನನ್ನನ್ನು ಪರಿಪೂರ್ಣಗೊಳಿಸಿದೆ. ನನಗೆ ಟೈಮ್ ಕೊಡುವುದಿಲ್ಲವೆಂದು ಬೇಸರ ಪಡಲು ಬಿಡುವುದಿಲ್ಲ. ನನ್ನ ಮಕ್ಕಳ ಬೆಳವಣಿಗೆಯನ್ನು ನಾನು ಕಾಣುತ್ತಿದ್ದೇವೆ. ಈ ಬಗ್ಗೆ ಖುಷಿಯಿದೆ ನನಗೆ ಎಂದಿದ್ದಾರೆ. ಇದರೊಂದಿಗೆ ಭಜ್ಜಿ ಇನ್ನು ಏನೇನು ಹೇಳಿದ್ದಾರೆ ಅನ್ನೋ ಬಗ್ಗೆ ಈ ವೀಡಿಯೋ ನೋಡಿ ತಿಳಿಯಿರಿ.
video credit: