- Advertisement -
ಕನ್ನಡ ಚಿತ್ರರಂಗದ ನಟಿ ಹರ್ಷಿಕಾ ಪೂಣಚ್ಚ ಅವರು ತಾಯಿಯಾಗುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಫೋಟೋಶೂಟ್ ಮಾಡಿಸುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.
ಹರ್ಷಿಕಾ ಹಾಗೂ ಭುವನ್ ಹಲವು ವರ್ಷಗಳಿದ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ, 2023 ಆಗಸ್ಟ್ 24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಸ್ಟಾರ್ ಜೋಡಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.
ತಾವು ಪೋಷಕರಾಗುತ್ತಿರುವ ವಿಚಾರವನ್ನು ಭುವನ್ ಮತ್ತು ಹರ್ಷಿಕಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಹರ್ಷಿಕಾ ಐದು ತಿಂಗಳ ಗರ್ಭಿಣಿ ಆಗಿದ್ದಾರೆ. ಕೊಡಗ ಶೈಲಿಯಲ್ಲಿ ಫೋಟೋಶೂಟ್ ಮಾಡಿದ್ದು, ವಿಭಿನ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- Advertisement -