- Advertisement -
ಹರಿಯಾಣದಲ್ಲಿ ಕಾಂಗ್ರೆಸ್ನ ಮತ್ತೊಂದು ಆಘಾತವಾಗಿದೆ. ನಾಲ್ಕು ಬಾರಿಯ ಶಾಸಕರಾಗಿರುವ ತೋಷಮ್ ಕ್ಷೇತ್ರದ ನಾಯಕಿ ಕಿರಣ್ ಚೌಧರಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಮನೋಹರಲಾಲ್ ಖಟ್ಟರ್ ಮತ್ತು ಹಾಲಿ ಸಿಎಂ ನಯಾಬ್ ಸಿಂಗ್ ಸೈನಿ ಅವರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶಾಸಕಿ ಕಿರಣ್ ಚೌಧರಿ ಅವರು ಮಾಜಿ ಸಿಎಂ ಬನ್ಸಿ ಲಾಲ್ ಅವರ ಸೊಸೆಯಾಗಿದ್ದಾರೆ.
ಶಾಸಕಿ ಕಿರಣ್ ಚೌಧರಿ ಅವರ ಮಗಳು ಶ್ರುತಿ ಚೌಧರಿಗೆ ಭಿವಾನಿ- ಮಹೇಂದ್ರಗಢ ಕ್ಷೇತ್ರದಿಂದ ಲೋಕಸಭೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಮಂಗಳವಾರವಷ್ಟೇ ಅಮ್ಮ ಮತ್ತು ಮಗಳು ಕಾಂಗ್ರೆಸ್ ತೊರೆದಿದ್ದರು
- Advertisement -