National Political News: ಹರ್ಯಾಣಾ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದಿದ್ದು, ಇಲ್ಲಿನ ಜುಲಾನಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ, ಕುಸ್ತಿಪಟು, ಕಾಂಗ್ರೆಸ್ ಅಭ್ಯರ್ಥಿ ವಿನೀಶ್ ಫೋಗಟ್ ಗೆಲುವು ಸಾಧಿಸಿದ್ದಾರೆ.
ಜುಲಾನಾದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಯೋಗೇಶ್ ಬೈರಾಗಿ, ಆಪ್ನ ಅಭ್ಯರ್ಥಿ ಮಾಜಿ ವೃತ್ತಿಪರ ಕುಸ್ತಿಪಟು ಕವಿತಾ ದಲಾಲ್ ಅವರ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದು ಜನರ ಹೋರಾಟವಾಗಿದ್ದು, ಮುಖ ನನ್ನದಾಗಿತ್ತು ಅಷ್ಟೇ. ನನಗೆ ಸಿಕ್ಕ ಪ್ರೀತಿ ಗೌರವಕ್ಕೆ ನಾನು ಆಭಾರಿಯಾಗಿದ್ದೆ ಎಂದು ವಿನೀಶ್ ಫೋಗಟ್ ಹೇಳಿದ್ದಾರೆ.
ಈ ಬಾರಿಯ ಓಲಂಪಿಕ್ಸ್ನಲ್ಲಿ ವಿನೀಶ್ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿ, ಚಿನ್ನ ಅಥವಾ ಬೆಳ್ಳಿ ಪದಕ ತರುವುದು ಗ್ಯಾರಂಟಿ ಅಂತಲೇ ಹೇಳಲಾಗಿತ್ತು. ಆದರೆ, ಅಗತ್ಯಕ್ಕಿಂತ ಹೆಚ್ಚು ತೂಕ ಹೆಚ್ಚಾದ ಕಾರಣ, ಅವರು ಸ್ಪರ್ಧಿಸುವಂತಿಲ್ಲವೆಂದು ನಿಷೇಧ ಹೇರಲಾಗಿತ್ತು. ಈ ಕಾರಣಕ್ಕೆ, ಕುಸ್ತಿಯಲ್ಲಿ ಭಾರತಕ್ಕೆ ಚಿನ್ನ- ಬೆಳ್ಳಿ ಎರಡೂ ಕೈತಪ್ಪಿತ್ತು. ತೂಕ ಇಳಿಸಲು ಹೇರ್ ಕಟ್ ಮಾಡಿ, ವ್ಯಾಯಾಮ ಮಾಡಿ, ಎಷ್ಟೇ ಕಸರತ್ತು ಮಾಡಿದರೂ ಕೂಡ ವಿನೀಶ್ ಪ್ರಯತ್ನ ಫಲಿಸಲಿಲ್ಲ.
ಇದಾದ ಬಳಿಕ ಸೆಪ್ಟೆಂಬರ್ 6ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದು, ಕೆಲ ದಿನಗಳಲ್ಲೇ ಅವರಿಗೆ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಟಿಕೇಟ್ ಸೇಕ್ಕಿತ್ತು. ಇದೀಗ ಹರಿಯಾಣಾದ ಜುಲಾನಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಾರೆ.




