ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಎನ್ನಲಾಗುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತೆ ಸುದ್ದಿಯಲ್ಲಿದೆ. ಹಲವು ತಿಂಗಳಿಂದ ಹಣ ಬರದೇ ಕಾಯುತ್ತಿದ್ದ ಲಕ್ಷಾಂತರ ರೈತರಿಗೆ ಇಂದು ದೊಡ್ಡ ಮಟ್ಟದ ಗುಡ್ ನ್ಯೂಸ್ ಸಿಕ್ಕಿದೆ. ನವೆಂಬರ್ 19, 2025 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಈ ಬಾರಿ ಮಾತ್ರವೇ 9 ಕೋಟಿಗೂ ಹೆಚ್ಚು ರೈತರಿಗೆ 18,000 ಕೋಟಿ ರೂ. ಜಮಾ ಆಗಿದೆ.
ನಿಮಗೆ ನೆನಪಿರಲಿ, ಆಗಸ್ಟ್ ತಿಂಗಳಲ್ಲಿ 20ನೇ ಕಂತಿನ ಹಣ ಜಮಾ ಮಾಡಲಾಗಿತ್ತು. ಆಗ 9.8 ಕೋಟಿ ರೈತರಿಗೆ, ಅದರಲ್ಲೂ 2.4 ಕೋಟಿ ಮಹಿಳಾ ರೈತರಿಗೆ ಹಣ ತಲುಪಿತ್ತು. ಈಗಾಗಲೇ 20 ಕಂತುಗಳಲ್ಲಿ 3,90,000 ಕೋಟಿ ರೂಪಾಯಿಗಿಂತ ಹೆಚ್ಚು ಹಣ ರೈತರ ಖಾತೆಗೆ ಹೋಗಿದೆ. ಇದರ ಮೇಲೆ ಇದೀಗ 21ನೇ ಕಂತಿನ 2,000 ರೂಪಾಯಿಯೂ ಬಿಡುಗಡೆ ಆಗಿರುವುದರಿಂದ ರೈತರು ತಮ್ಮ ಖಾತೆಗೆ ಹಣ ಬಂದಿದ್ಯಾ ಎಂದು ಟ್ರಾಕ್ ಮಾಡುತ್ತಿದ್ದಾರೆ.
ಹಾಗಾದರೆ ನಿಮ್ಮ ಖಾತೆಗೆ ಈ 2,000 ರೂಪಾಯಿ ಬಂದಿದ್ಯಾ ಎಂಬುದನ್ನು ಚೆಕ್ ಮಾಡುವ ವಿಧಾನ ಬಹಳ ಸಿಂಪಲ್. pmkisan.gov.in ಗೆ ಹೋಗಿ ‘Know Your Status’ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಪಿಎಂ ಕಿಸಾನ್ ಐಡಿ ಅಥವಾ ಮೊಬೈಲ್ ನಂಬರ್ ನಮೂದಿಸಿ ‘Get Status’ ಒತ್ತಿದರೆ ನಿಮ್ಮ 21ನೇ ಕಂತು ಜಮಾ ಆಗಿದೆಯಾ? ಯಾವ ದಿನಾಂಕಕ್ಕೆ ಜಮಾ ಆಯಿತು? ಎಂಬ ಡೀಟೈಲ್ಸ್ ತಕ್ಷಣ ಕಾಣುತ್ತದೆ. ಇದೇಕೆ, ಗೂಗಲ್ ಪ್ಲೇ ಸ್ಟೋರ್‌ನಿಂದ ಪಿಎಂ ಕಿಸಾನ್ ಆಪ್ ಡೌನ್‌ಲೋಡ್ ಮಾಡಿದರೂ ಇದೇ ಮಾಹಿತಿ ಸಿಗುತ್ತದೆ.
ಸಾಮಾನ್ಯವಾಗಿ ಹಣ ಜಮಾ ಆದ ತಕ್ಷಣ ರೈತರಿಗೆ ಬ್ಯಾಂಕ್‌ನಿಂದ SMS ಬರುತ್ತದೆ. ಒಂದು ವೇಳೆ SMS ಬರದಿದ್ದರೂ ಟೆನ್ಷನ್ ಬೇಡ, ನಿಮ್ಮ ಬ್ಯಾಂಕ್ ಬ್ರಾಂಚ್‌ಗೆ ಹೋಗಿ ಪಾಸ್‌ಬುಕ್ ಎಂಟ್ರಿ ಮಾಡಿಸಿದರೂ ಮಾಹಿತಿ ಸಿಗುತ್ತದೆ. ಅಥವಾ ನಿಮ್ಮ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಇದ್ದರೆ ಅದರಲ್ಲಿ ಕೂಡಾ ಟ್ರಾನ್ಸಾಕ್ಷನ್ ಹಿಸ್ಟರಿ ನೋಡಬಹುದು. ಆದ್ದರಿಂದ ನೀವೂ ಕೂಡಾ ತಕ್ಷಣ ಸ್ಟೇಟಸ್ ಚೆಕ್ ಮಾಡಿ, ನಿಮ್ಮ ಪಿಎಂ ಕಿಸಾನ್ 21ನೇ ಕಂತಿನ ಹಣ credited ಆಗಿದೆಯಾ ಅನ್ನೋದನ್ನು ದೃಢಪಡಿಸಿಕೊಳ್ಳಿ.
ವರದಿ : ಗಾಯತ್ರಿ ಗುಬ್ಬಿ

