Friday, December 13, 2024

Latest Posts

ಹಾಸನದ ಕೋರಿಯರ್ ಅಂಗಡಿಯಲ್ಲಿ ಸ್ಫೋಟ

- Advertisement -

ಹಾಸನ: ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದ ಕೋರಿಯರ್ ಅಂಗಡಿಯೊoದರಲ್ಲಿ ನಿನ್ನೆ ಸಂಜೆ ಸ್ಫೋಟ ಸಂಭವಿಸಿ, ಅಲ್ಲಿದ್ದ ಹಲವು ವಸ್ತುಗಳಿಗೆ ಹಾನಿಯಾಗಿದೆ. ವೀಣಾ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಡಿಟಿಡಿಸಿ ಕೋರಿಯರ್ ಡೀಲರ್‌ಶೀಪ್ ನಡೆಸಲಾಗುತ್ತಿತ್ತು. ಕಳೆದ ಶುಕ್ರವಾರ ಬಂದಿದ್ದ ಪಾರ್ಸಲೊಂದನ್ನು ಅಲ್ಲಿನ ಸಿಬ್ಬಂದಿ ನಗರದ ಆಕ್ಸ್ಫರ್ಡ್ ಶಾಲೆ ಸಮೀಪದ ಮನೆಯೊಂದಕ್ಕೆ ಡಿಲೆವರಿ ಮಾಡಿದ್ದರು. ಆದರೆ ಅದನ್ನು ಪಡೆದಿದ್ದವರು ಅದು ತಮ್ಮದಲ್ಲ ಎಂದು ಹೇಳಿ ಮೂರು ದಿನಗಳ ಬಳಿಕ (ಘಟನೆ ನಡೆದ ದಿನ) ವಾಪಸ್ ತಂದು ಅಂಗಡಿಯಲ್ಲಿದ್ದ ಶಶಿ ಎಂಬುರಿಗೆ ಒಪ್ಪಿಸಿ ಅಲ್ಲಿಂದ ತೆರಳಿದ್ದರು.

ಅಭಿವೃದ್ಧಿ ಹೆಸರಲ್ಲಿ ಬೃಹತ್ ಮರಗಳ ಮಾರಣಹೋಮ

ಆ ಪಾರ್ಸಲ್ ಯಾರು ಕಳಿಸಿದ್ದರು ಎಂಬ ವಿಳಾಸ ಅದರಲ್ಲಿ ನಮೂದಾಗಿರಲಿಲ್ಲ. ಗ್ರಾಹಕರು ವಾಪಸ್ ತಂದು ಕೊಟ್ಟಿದ್ದ ಬಾಕ್ಸ್ ಓಪನ್ ಆಗಿತ್ತು ಎಂದು ಹೇಳಲಾಗಿದ್ದು ಅದನ್ನು ಗಮನಿಸಲು ಸಿಬ್ಬಂದಿ ಶಶಿ ಮುಂದಾದಾಗ ಇದ್ದಕ್ಕಿದ್ದಂತೆ ಅದು ಬ್ಲಾಸ್ಟ್ ಆಗಿದ್ದು ಅವರ ಕೈ, ಕಾಲು, ಮುಖ ಹಾಗೂ ಇನ್ನಿತರ ಭಾಗಗಳಿಗೆ ಗಾಯಗಳಾಗಿ ಕೆಳಗೆ ಬಿದ್ದು ನಿತ್ರಾಣರಾಗಿದ್ದರು. ಬ್ಲಾಸ್ಟ್ ನಿಂದ ಭಾರಿ ಸದ್ದು ಹೊರ ಹೊಮ್ಮಿದ್ದು, ಅದನ್ನು ಗಮನಿಸಿದ ಸುತ್ತಲಿನ ವರ್ತಕರು ಹಾಗೂ ಮನೆಗಳಲ್ಲಿದ್ದವರು ಗಾಬರಿಯಿಮದ ಹೊರಗೆ ಓಡಿ ಬಂದು ಅಂಗಡಿ ಮುಂದೆ ಜಮಾಯಿಸಿದರು. ಕೂಡಲೇ ಗಾಯಾಳುವನ್ನು ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆತನಿಗೆ ಗಂಭೀರ ಸ್ವರೂಪದ ಪೆಟ್ಟುಗಳಾಗಿದ್ದರಿಂದ ಅಲ್ಲಿಂದ ತುರ್ತು ಚಿಕಿತ್ಸೆಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಮುಂದಿನ ವರ್ಷ 2023 ರಲ್ಲಿ ಯಾವಾಗ ಮತ್ತು ಎಷ್ಟು ಸೂರ್ಯ ಮತ್ತು ಚಂದ್ರ ಗ್ರಹಣಗಳು ಸಂಭವಿಸುತ್ತವೆ…

ಬ್ಲಾಸ್ಟ್ ತೀವ್ರತೆಗೆ ಅಂಗಡಿಗೆ ಅಳವಡಿಸಿದ್ದ ಗಾಜುಗಳು ಚೂರು ಚೂರಾಗಿವೆ. ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಒಳಗಿದ್ದ ಕಂಪ್ಯೂಟರ್, ಜೆರಾಕ್ಸ್ ಯಂತ್ರ, ಪೀಠೋಪಕರಣಗಳು ಸೇರಿ ಬಹುತೇಕ ವಸ್ತುಗಳು ಛಿದ್ರವಾಗಿ ಚಲ್ಲಾಡಿವೆ. ವಿಷಯ ತಿಳಿದೊಡನೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶಿಲಿಸಿದರು. ಬ್ಲಾಸ್ಟ್ ಆದ ಬಾಕ್ಸ್ ನಲ್ಲಿ ಏನಿತ್ತು, ಅದನ್ನು ವಾಪಸ್ ತಂದು ಕೊಟ್ಟವರಾರು, ಮೂರು ದಿನದ ಬಳಿಕ ಅವರು ಯಾಕೆ ಅದನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂಬ ವಿಷಯಗಳನ್ನು ಬಯಲಿಗೆಳೆಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗಾಯಾಳು ಶಶಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವ ಕಾರಣ ಘಟನೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಧ್ಯಕ್ಕೆ ಲಭ್ಯವಾಗಿಲ್ಲ. ಪೊಲೀಸರೂ ಸಹ ಸ್ಪಷ್ಟತೆ ಸಿಗುವವರೆಗೆ ಯಾವುದನ್ನೂ ಹೇಳಲಾಗದು ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಜನರನ್ನು ಬೆಚ್ಚಿ ಬೀಳಿಸಿದ ಕುಕ್ಕರ್ ಬ್ಲಾಸ್ಟ್ ಪ್ರಕರಣದ ನೆನಪು ಮಾಸದ ನಡುವೆಯೇ ಕೋರಿಯರ್ ಮೂಲಕ ಬಂದಿದ್ದ ವಸ್ತುವೊಂದು ಬ್ಲಾಸ್ಟ್ ಆಗಿದೆ. ಅಲ್ಲದೇ ಅದನ್ನು ಯಾರು ಕಳಿಸಿದರು ಎಂಬ ಮಾಹಿತಿ ಇಲ್ಲದಿರುವ ಕಾರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟು ಆತಂಕಕ್ಕೆ ಕಾರಣವಾಗಿದೆ.

ಗರುಡ ಪುರಾಣದ ಪ್ರಕಾರ ಈ 5 ಅಭ್ಯಾಸಗಳಿಂದ ಬಡತನ ಹೆಚ್ಚಾಗುತ್ತದೆ..!

ಬ್ರಹ್ಮ, ,ವಿಷ್ಣು ,ಮತ್ತು ಮಹೇಶ್ವರರು ಒಟ್ಟಿಗೆ ಇರುವ ಏಕೈಕ ದೇವಾಲಯ ಎಲ್ಲಿದೆ ಗೊತ್ತಾ..?

- Advertisement -

Latest Posts

Don't Miss