ಹಾಸನ: ಹಾಡಹಾಗಲೇ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊಯ್ಸಳ ಬಡಾವಣೆಯ ಪಾರ್ಕ್ವೊಂದರ ಬಳಿ ನಡೆದಿದೆ.
ಒಬ್ಬ ವ್ಯಕ್ತಿಯ ಶವ ಕಾರಿನ ಒಳಗೆ ಕಂಡುಬಂದಿದ್ದು, ಕಾರಿನ ಹೊರಗಡೆ ಮತ್ತೊಂದು ಶವ ಪತ್ತೆಯಾಗಿದೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಹಾಸನದ ಶರಾಪರ್ ಅಲಿ ಹಾಗೂ ಬೆಂಗಳೂರಿನ ಆಸೀಫ್ ಅಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶರಾಪರ್ ಅಲಿ ಶುಂಠಿ ವ್ಯಾಪಾರಿ ಆಗಿದ್ದರೆ, ಬೆಂಗಳೂರು ಮೂಲದ ಆಸೀಫ್ ಅಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಇಬ್ಬರ ನಡುವೆ ರಿಯಲ್ ಎಸ್ಟೇಟ್ ವಿಚಾರಕ್ಕೆ ಗಲಾಟೆ ನಡೆದು ಹತ್ಯೆಯಾಗಿರಬಹುದೆಂದು ಶಂಕಿಸಲಾಗಿದೆ. ಬೆಂಗಳೂರು ಮೂಲದ ಆಶಿಫ್, ಶರಾಪರ್‌ನನ್ನು ಹತ್ಯೆಗೈದು ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಶರಣಾಗಿರುವ ಸಾಧ್ಯತೆ ಇದೆ.
ಶೂಟೌಟ್ ಆದ ಜಾಗಕ್ಕೆ ಹಾಸನ ಎಸ್‌ಪಿ ಮಹಮದ್ ಸುಜೇತಾ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.