ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಡಕನಹಳ್ಳಿ ಗ್ರಾಮದಿಂದ ಗೌಡಗೇರೆ ಮಾರ್ಗವಾಗಿ ಮಾಡಲಾಗಿದ್ದ ಡಾಂಬರ್ ರಸ್ತೆ ಒಂದೇ ದಿನದಲ್ಲಿ ಕಿತ್ತು ಹೋಗಿರುವ ಘಟನೆ ನಡೆದಿದೆ.
ಗ್ರಾಮಗಳಲ್ಲಿ ಡಾಂಬರೀಕರಣ ಮಾಡಿ ರಸ್ತೆಗಳನ್ನು ಅಭಿವೃದ್ದಿಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಲೋಕೋಪಯೋಗಿ ಇಲಾಖೆ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿತ್ತು. ಆದರೆ ಕಳಪೆ ರಸ್ತೆ ಕಾಮಗಾರಿ ಮಾಡಿದ್ದಕ್ಕಾಗಿ ರಸ್ತೆ ಮಾಡಿದ ಒಂದೇ ದಿನದಲ್ಲಿ ಕಿತ್ತು ಹೋಗುತ್ತಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ತರು ರಸ್ತೆಯನ್ನು ಇನ್ನಷ್ಟು ಕಿತ್ತು ಹಾಕಿ ಲೋಕೋಪಯೋಗಿ ಇಲಾಖೆ ವಿರುದ್ದ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಸುಮಾರು 60 ಲಕ್ಷ ರೂಗಳ ವೆಚ್ಚದಲ್ಲಿ ಸಿದ್ದಪಡಿಸಿರುವ ಎರಡು ಕಿಲೋಮೀಟರ್ ರಸ್ತೆ ಒಂದೇ ದಿನದಲ್ಲಿ ಕಿತ್ತುಹೋಗಿರುವುದನ್ನು ಖಂಡಿಸಿ ಗ್ರಾಮಸ್ತರು ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ದ ಆಕ್ರೋಶ ಹೊರಹಾಕಿದರು.
BJP: ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೇ ಶುರುವಾಯ್ತಾ ರಾಜೀನಾಮೆ ಪರ್ವ?
Lokayukta: ಮಿನಿ ವಿಧಾನಸೌಧದ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ದಾಳಿ..!
National Highway: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ..!