Monday, December 23, 2024

Latest Posts

ಹಾಸನಾಂಬೆ ದೇಗುಲದ ಬಾಗಿಲು ಓಪನ್ ಆಯಿತು…!

- Advertisement -

State News:

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ಇಂದು ತೆರೆದಿದೆ. ಈ ನಿಟ್ಟಿನಲ್ಲಿ ದೇವಿ ದರ್ಶನ ಪಡೆಯೋಕೆ ಲಕ್ಷಾಂತರ ಭಕ್ತರ ಕಾಯುತ್ತಾ ಇದ್ದಾರೆ. ಭಕ್ತರ ದಂಡು ದೇವಿಯನ್ನ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇಂದು ಹಾಸನಾಂಬೆ ದೇವಾಲಯದ ಬಾಗಿಲು ತೆರೆದ ಹಿನ್ನೆಲೆ ದೇವಸ್ಥಾನಕ್ಕೆ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ಹಾಗೂ ಸಾವಿರಾರು ಭಕ್ತರು ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಇಂದಿನಿಂದ ಆಕ್ಟೋಬರ್ 27 ರ ತನಕ ಹಾಸನಾಂಬೆ ಜಾತ್ರೆ ನಡೆಯಲಿದ್ದು, ಒಟ್ಟು 12 ದಿನ ದೇವಿ ದರ್ಶನ ಸಿಗಲಿದೆ. ಇವತ್ತು ಮಧ್ಯಾಹ್ನ 12.30ಕ್ಕೆ ಬಾಳೆ ಕಂಬ ಕಡಿದ ಬಳಿಕ ದೇವಿಯ ಬಾಗಿಲು ತೆರೆಯಲಾಗಿದೆ. ಆ ಮೂಲಕ ದರ್ಶನ ಶುರುವಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷದಿಂದ ಹಾಸನಾಂಬೆ ಉತ್ಸವದ ವೈಭವ ತಗ್ಗಿತ್ತು. ಆದ್ರೆ, ಈ ಸಲ ಅದ್ಧೂರಿ ಉತ್ಸವಕ್ಕೆ ಜಿಲ್ಲಾಡಳಿತ ತಯಾರಾಗಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುವ ನಿರೀಕ್ಷೆಯಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡ್ಕೊಂಡಿದ್ದಾರೆ. ಪೊಲೀಸರು ಕೂಡ ಮುಂಜಾಗೃತ ಕ್ರಮಕೈಗೊಂಡಿದ್ದಾರೆ.

ಹಾಸನಾಂಬೆ ದೇಗುಲ ಹಲವು ಪಾವಡಗಳಿಂದಲೂ ಭಕ್ತರನ್ನ ಸೆಳೆಯುತ್ತೆ. ದೇವಿಗೆ ಒಮ್ಮೆ ಹಚ್ಚಿದ ಹಣತೆ ಆರಲ್ಲ. ದೇವರ ಮುಡಿಗಿಟ್ಟ ಹೂ ಬಾಡಲ್ಲ ಎಂಬ ನಂಬಿಕೆ ಹಿಂದಿನಿಂದಲೂ ನಡ್ಕೊಂಡು ಬಂದಿದೆ. ಹೀಗೆ, ಈ ಸಲವೂ ಈ ಪಾವಡ ನೋಡಲು, ದೇವಿಯನ್ನ ಕಣ್ತುಂಬಿಕೊಳ್ಳಲು ಭಕ್ತರು ಎದುರು ನೋಡ್ತಿದ್ದಾರೆ. ಇವತ್ತು, ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂಗೌಡ ಸೇರಿದಂತೆ ಅಧಿಕಾರಿಗಳು, ಅನೇಕ ಗಣ್ಯರು ಹಾಜರಿದ್ದರು.ಇವತ್ತು ಭಕ್ತರಿಗೆ ದರ್ಶನ ವ್ಯವಸ್ಥೆಯಿರಲ್ಲ. ನಾಳೆ(ಅ.13) ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ದರ್ಶನ ಭಾಗ್ಯ ದೊರೆಯಲಿದೆ. ಒಟ್ಟು 12 ದಿನ ಹಾಸನಾಂಬೆ ದರ್ಶನ ಸಿಗಲಿದ್ದು, ಬಲಿಪಾಡ್ಯಮಿಯ ಮಾರನೇ ದಿನ ದೇವಿಯ ಉತ್ಸವಕ್ಕೆ ತೆರೆ ಬೀಳಲಿದೆ.

“ಸೋನಿಯಾ ಕಾಲು ಹಿಡಿದು ಸಿಎಂ ಆಗಿದ್ದ ಸಿದ್ರಾಮಣ್ಣ”: ನಳಿನ್‍ಕುಮಾರ್ ಕಟೀಲ್

ಅ.13 ರಂದು ಮಹಾ ಕುಂಭಮೇಳದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.

‘ಕುಂಭಮೇಳ ಆಯೋಜನೆ ಚುನಾವಣೆ ಗಿಮಿಕ್’: ಶಾಸಕ ಅನ್ನದಾನಿ ವಾಗ್ದಾಳಿ

- Advertisement -

Latest Posts

Don't Miss