- Advertisement -
ಹಾಸನ: ಕೊಬ್ಬರಿಯ ಬೆಲೆ ಕುಸಿತವಾದ ಹಿನ್ನೆಲೆ, ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಇಂದು ಅರಸೀಕೆರೆ ಬಂದ್ ಮಾಡಲಾಗಿದೆ. ಬಂದ್‌ಗೆ ಅರಿಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಕರೆ ನೀಡಿದ್ದಾರೆ. ಇನ್ನು ಬಂದ್ ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಬೆಳಿಗ್ಗೆಯಿಂದಲೇ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿದೆ. ವಾಹನ ಸಂಚಾರ ಎಂದಿನಂತೆ ಇದೆ. 12 ಗಂಟೆ ನಂತರ ಅರಸೀಕೆರೆ ಪಟ್ಟಣದಲ್ಲಿ ಶಾಸಕರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಮುರುಘಾ ಮಠದ ಶ್ರೀಗಳ ವಿರುದ್ಧ ಪಿತೂರಿ ಪ್ರಕರಣ : ಸೌಭಾಗ್ಯ ಬಸವರಾಜನ್ ಬಂಧನ
ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ರೈತರು ಭಾಗಿಯಾಗಲಿದ್ದಾರೆ. ಅರಿಸೀಕೆರೆ ಪಟ್ಟಣದ ವರ್ತಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
- Advertisement -