ಹಾಸನ: ಅರಕಲಗೂಡು ಸಮೀಪದ ಶಂಭುನಾಥಪುರ ಗ್ರಾಮದಲ್ಲಿ ಮೃತಪಟ್ಟ ದಲಿತ ವ್ಯಕ್ತಿ ಶವ ಸಂಸ್ಕಾರ ಮಾಡಲು ಸ್ಮಶಾನ ಜಾಗವಿಲ್ಲದೆ ಮನೆ ಮುಂದೆಯೇ ಹೂಳಲು ಮುಂದಾದ ಮನ ಕಲಕುವ ಘಟನೆ ವರದಿಯಾಗಿದ್ದು ತಾಲೂಕು ಆಡಳಿತಕ್ಕೆ ಮುಜುಗರ ಉಂಟು ಮಾಡಿತು.
ಗ್ರಾಮದ ಗಿಡ್ಡಯ್ಯ 66 ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇಲ್ಲಿ ಸ್ಮಶಾನ ಜಾಗವಿಲ್ಲದೆ, ಮೃತ ದಲಿತ ವ್ಯಕ್ತಿಗೆ ಸ್ವಂತ ಜಮೀನು ಕೂಡ ಇಲ್ಲದೆ ಸಂಬಧಿಕರ ಮನೆ ಮುಂಭಾಗ ಶವ ಸಂಸ್ಕಾರ ಮಾಡಲು ಮುಂದಾಗಿದ್ದಾರೆ.ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅರಕಲಗೂಡಿನಲ್ಲಿ ಸ್ಮಶಾನ ಜಾಗ ಇದೆ, ಅಲ್ಲಿಗೆ ಕೊಂಡೊಯ್ದು ಶವ ಸಂಸ್ಕಾರವಮಾಡುವಂತೆ ತಿಳಿಸಿದರು ಗ್ರಾಮಸ್ಥರು ಪಟ್ಟು ಬಿಡದೆ ನಮಗೆ ಇಲ್ಲಿಯೇ ಸ್ಮಶಾನ ಜಾಗ ನೀಡಬೇಕು ಎಂದರು.
ಗ್ರಾಮದಲ್ಲಿರುವ ಸ್ಮಶಾನ ಜಾಗಕ್ಕೆ ತೆರಳಲು ದಾರಿಯಿಲ್ಲ. ಇಲ್ಲಿ ಕೆಲ ದಲಿತ ಕುಟುಂಬಗಳು ನೆಲೆಸಿದ್ದು ಸ್ಮಶಾನ ಜಾಗ ನೀಡಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.ಇನ್ನು ಮುಂಧಾದರೂ ದಲಿತರ ಕಷ್ಟಕ್ಕೆ ಕಂದಾಯ ಇಲಾಖೆ ಸ್ಪಂದಿಸಿ ದಲಿತರಿಗೆ ಸ್ಮಶಾನ ಜಾಗ ಕಲ್ಪಸಿಕೊಡಲಿದೆಯಾ ? ಎಂದು ಕಾದು ನೋಡಬೇಕಿದೆ.
Kolara BJP Protest: ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ ಬಿಜೆಪಿ ನಾಯಕರು..!