Friday, November 22, 2024

Latest Posts

ಕರವೇ ಕಾರ್ಯಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಕಾರಿಗೆ ಮುತ್ತಿಗೆ ಯತ್ನ..!

- Advertisement -

ಹಾಸನ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಾಸನಾಂಬ ಉತ್ಸವದ ಕುರಿತು ಪೂರ್ವಭಾವಿ  ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಆಗಮಿಸಿದ್ದರು. ಈ ವೇಳೆ ಬರಪಿಡಿತ ಪ್ರದೇಶವೆಂದು ಘೋಷಣೆ ಮಾಡದ ಹಿನ್ನೆಲೆ ಕರವೇ ಕಾರ್ಯಕರ್ತರು ಸಚಿವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ರಾಜ್ಯಾದ್ಯಂತ ಹಲವಾರು ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದರೂ ಹಾಸನ ಜಿಲ್ಲೆಯನ್ನು ಮಾತ್ರ ಬರಪೀಡಿತ ಪ್ರದೇಶದ ಪಟ್ಟಿಯಲ್ಲಿ ಸೇರಿಸದ ಕಾರಣ ಆಕ್ರೋಶಗೊಂಡ ಜನರು ಕರವೇ ಕಾರ್ಯಕರ್ತರ ಸಮ್ಮುಖದಲ್ಲಿ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಮನುಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಾದರೂ ಕಳೆದ ಎರಡು ತಿಂಗಳಿಂದ ಜಿಲ್ಲೆಗೆ ಭೇಟಿ ನೀಡರಲಿಲ್ಲ. ಆದರೆ ಈಗ ಹಾಸನಕ್ಕೆ ಆಗಮಿಸಿದ ಉತ್ಸವದ ನಿಮಿತ್ತ ಪೂರ್ವ ಭಾವಿ ಸಭೆಗೆ ಆಗಮಿಸಿದ ವೇಳೆ ಕರವೇ ಕಾರ್ಯಕರ್ತರು ಉಸ್ತುವಾರಿ ಸಚಿವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಸುಮಾರು 15 ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.

friend ship: ಪ್ರೇಮಿಗಳಿಗೆ ಸಹಾಯಮಾಡಿದ ಸ್ನೇಹಿತ ; ಆದರೆ ನಂತರ ನಡೆದಿದ್ದೇ ಬೇರೆ..!

ಹತ್ತು ಜಿಲ್ಲೆಗಳಲ್ಲಿ ಬರಪೀಡಿತ ಎಂದು ಅಧ್ಯಯನ ತಂಡ ಘೋಷಿಸಿದೆ; ಜಾರಕಿಹೊಳಿ..!

ರಸ್ತೆಯ ಮಧ್ಯೆ ಎತ್ತಿನಗಾಡಿ ನಿಲ್ಲಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಕೈಗೊಂಡ ರೈತರು..!

- Advertisement -

Latest Posts

Don't Miss