ಹಾಸನ: ಬುಕ್ ಮಾಡಿದ ಕಾರು ಕೈ ಸೇರುವ ಮುನ್ನವೇ ಮೊದಲ ತಿಂಗಳ ಲೋನ್ ಕಂತಿನ ಬಿಲ್ ಬಂದಿರುವ ವಿಶೇಷ ಪ್ರಕರಣ ನಗರದಲ್ಲಿ ಇಂದು ನಡೆದಿದೆ. ಆಲೂರು ತಾಲೂಕು ಕ್ಯಾತನಹಳ್ಳಿ ಗ್ರಾಮದ ನಿವಾಸಿ ಸಂದೇಶ್ ಎಂಬುವವರು ನಗರದ ಡೈರಿ ವೃತ್ತದಲ್ಲಿ ಇರುವ ಟೊಯೊಟಾ ಶೋ ರೂಂ ನಲ್ಲಿ ಜ. 28 ರಂದು 21, ಲಕ್ಷದ 39 ಸಾವಿರದ ಇನೋವಾ ಕೃಷ್ಟಾ ಕಾರು ಬುಕ್ ಮಾಡಲಾಗಿದ್ದು ಈ ತಿಂಗಳ ಕೊನೆಯಲ್ಲಿ ಕಾರು ತಮ್ಮ ಕೈ ಸೇರುವುದಾಗಿ ಭರವಸೆ ನೀಡಿದ್ದಾರೆ
ಆದರೆ ಕಾರು ಜುಲೈ ತಿಂಗಳ ಅಂತ್ಯದ ಒಳಗೆ ತಮ್ಮ ಕೈ ಸೇರುವುದಾಗಿ ಶೋ ರೂಂ ನ ವ್ಯವಸ್ಥಾಪಕರು ತಿಳಿಸಿದ್ದು ಅದರಂತೆ ತಾನು ಇಷ್ಟ ಪಟ್ಟ ಕಾರು ಕೈ ಸೇರುವ ನಿರೀಕ್ಷೆಯಲ್ಲಿ ಕಾದುಕುಳಿತಿದ್ದರು..ಆದರೆ ನಿನ್ನೆ ಇದ್ದಕ್ಕಿದ್ದಂತೆ ಸಂದೇಶ್ ಅವರ ಮೊಬೈಲ್ ಗೆ 41 ಸಾವಿರ ಇ.ಎಂ.ಐ ಹಣ ಪಾವತಿಸಬೇಕು ಎಂದು ಮೆಸೇಜ್ ಬಂದಿದ್ದು ಮೆಸೇಜ್ ಕಂಡು ಸಂದೇಶ್ ಅವರು ಶಾಕ್ ಆಗಿದ್ದಾರೆಲೋನ್ ಕಟ್ಟುವಂತೆ ಮೆಸೇಜ್ ಬರುತ್ತಲೆ ಇಂದು ನಗರದ ಡೈರಿ ವೃತ್ತದ ಬಳಿ ಇರುವ ಟೊಯೊಟಾ ಶೋ ರೂಂ ಬಳಿ ಸಂದೇಶ್ ಗೆ ಸಂಸ್ಥೆಯ ತಪ್ಪು ಬೆಳಕಿಗೆ ಬಂದಿದೆ
ಇನ್ನು ಈ ಬಗ್ಗೆ ಸಂದೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಜನವರಿ ತಿಂಗಳಿನಲ್ಲಿ ಬುಕ್ ಮಾಡಿದ್ದ ಕಾರು ಇದುವರೆಗೂ ತನ್ನ ಕೈಗೆ ಬಂದಿಲ್ಲ ಆದರೆ ಇ.ಎಂ.ಐ ಕಟ್ಟುವಂತೆ ಸಂದೇಶ ಬಂದಿದೆ ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕರ ಬಳಿ ಮಾತನಾಡಿದ್ದು, ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ರೀತಿ ಬೇರೆ ಯಾರಿಗೂ ಆಗಬಾರದು ಎಂದರು ತಾನು ಈಗಾಗಲೇ ಕಾರು ಖರೀದಿಗೆ ಹಣ ಪಾವತಿ ಮಾಡಿದ್ದು, ತಾನು ಇದೀಗ ತಾನು ಬುಕ್ ಮಾಡಿದ ಕಾರಿಗೆ ಬದಲಾಗಿ ಬೇರೊಂದು ಕಾರು ಕೊಡುವುದಾಗಿ ಇಲ್ಲಿನ ಸಿಬ್ಬಂದಿಗಳು ಹೇಳುತ್ತಿದ್ದಾರೆ
ಈಗಾಗಲೇ ತಾನು 5 ಲಕ್ಷ ಹಣ ಲೋನ್ ಮಾಡಿಸಿರುವ 15 ಲಕ್ಷ ಸೇರಿ ಒಟ್ಟು 20 ಲಕ್ಷ ಹಣ ಪಾವತಿ ಮಾಡಲಾಗಿದ್ದು ಕಾರು ಮಾತ್ರ ಇನ್ನು ಕೈ ಸೇರಿಲ್ಲ, ಸಿಬ್ಬಂದಿಗಳ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಎಂದು ದೂರಿದರುಸಂಸ್ಥೆಯ ನಡವಳಿಕೆ ನೋಡಿದರೆ ಮೋಸ ಮಾಡಿರುವ ಲಕ್ಷಣಗಳು ಕಂಡು ಬರುತ್ತಿವೆ, ಸಂಸ್ಥೆ ಇದೀಗ ತನಗೆ ಪಾವತಿ ಮಾಡಲು ಸಂದೇಶ ರವಾನೆ ಮಾಡಿರುವ ಮೊತ್ತವನ್ನು ಅವರೇ ಕಟ್ಟಿ ಕೊಡಬೇಕು, ಅಲ್ಲದೆ ಮುಂದೆ ಮತ್ತೆ ಯಾರಿಗೂ ಈ ರೀತಿ ಮಾಡಬಾರದು ಎಂದರು.