ಹಾಸನ: ಅರಕಲಗೂಡು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ಮಾಜಿ ಸಚಿವ ಎ.ಮಂಜು ಆರಂಭಿಸಿದ್ದಾರೆ. ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದ ರಂಗನಾಥ ಸ್ವಾಮಿ ದೇವಾಲಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪೂಜೆಸಲ್ಲಿಸಿ ಪ್ರಚಾರವನ್ನು ಆರಂಭಿಸಿದ್ದಾರೆ. ಅರಕಲಗೂಡು ಕ್ಷೇತ್ರದಿಂದ ಎ.ಮಂಜು ಕಾಂಗ್ರಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಸೇರದಿದ್ದರೂ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಇಂದಿನಿಂದ ನನ್ನ ಪರವಾಗಿ ಗ್ರಾಮ ಗ್ರಾಮಗಳಲ್ಲಿ ನನ್ನ ಬಗ್ಗೆ ಮಾತನಾಡಿ ಬೆಂಬಲಕೋರಿ ಎಂದು ಮನವಿ ಮಾಡಿದ್ದಾರೆ.
ಮಂಡ್ಯದಲ್ಲಿ ಇಂದು ಬಿಜೆಪಿ ಜನಸಂಕಲ್ಪ ಯಾತ್ರೆ
ನಾನು ಯಾವ ಪಕ್ಷ ಎಂದು ಕೆಲವರಲ್ಲಿ ಗೊಂದಲವಿದೆ. ನಾನು ಯಾವ ಪಾರ್ಟಿ ಎಂದು ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಾನು ಯಾವದೇ ಪಾರ್ಟಿಗೆ ಸೇರಿದ್ದರೂ ನಿಮ್ಮ ಪಾರ್ಟಿನೇ, ನಿಮ್ಮ ಜೊತೆಯಲ್ಲಿ ಇರುವವನು. ಎಲ್ಲಿದ್ದರೂ ನಿಮ್ಮ ಜೊತೆಯಲ್ಲಿ ಇರುತ್ತೇವೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು. ದೇವರ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ ನಿಮ್ಮ ಅನಿಸಿಕೆಯಂತೆಯೇ ಆಗುತ್ತದೆ.
ಮಲೇಷ್ಯಾದಲ್ಲಿ ಭೂಕುಸಿತ : 8 ಜನರ ಸಾವು, 50ಕ್ಕೂ ಹೆಚ್ಚು ಜನ ನಾಪತ್ತೆ
ಧನುರ್ ಮಾಸ ಇರುವುದರಿಂದ ಇಂದು ಪೂಜೆ ಮಾಡಿ ಪ್ರಚಾರ ಆರಂಭ ಮಾಡಿದ್ದಾರೆ.ಪೂರಕವಾಗಿ ಜನರು ನಿಮ್ಮ ಪರವಾಗಿಯೇ ಇದ್ದಾರೆ ಎಂದು ಮುಖಂಡರಿಗೆ ಮಂಜು ಅವರು ಹೇಳಿದರು. ನಾನು ಈ ಸ್ಥಾನಕ್ಕೆ ಬರಲು ನೀವೇ ಕಾರಣೀಕರ್ತರು. ನಿಮ್ಮ ಆಶೀರ್ವಾದದಿಂದ ದೇವರ ಕೃಪೆಯಿಂದ ಇಲ್ಲಿಯವರೆಗೆ ತಂದಿದ್ದೀರಿ. ಇದು ನನ್ನ ಕೊನೆಯ ಚುನಾವಣೆ ಎಂದು ಮಂಜು ಅವರು ಘೋಷಿಸಿದರು. ನನಗೆ 65 ವರ್ಷ ಆಗಿದೆ, 70 ವರ್ಷ ಆದ್ಮೇಲೆ ಬೇಡ ಅನ್ನುವ ಮೊದಲು ನಾವೇ ರಿಟೈರ್ ಆಗೋದು ಒಳ್ಳೆಯದು ಎಂದು ಹೇಳಿದರು.
ಮುರುಘಾ ಮಠದ ಶ್ರೀಗಳ ವಿರುದ್ಧ ಪಿತೂರಿ ಪ್ರಕರಣ : ಸೌಭಾಗ್ಯ ಬಸವರಾಜನ್ ಬಂಧನ
ಈಗಿರುವ ಶಾಸಕರು ಕೆಲವು ಕೆಲಸಗಳನ್ನು ಮಾಡಿದ್ದಾರೆ. ಅವೆಲ್ಲಾ ನಿಮ್ಮ ಕೃಪೆಯಿಂದ ನನ್ನ ಕೈಯಲ್ಲಿ ಮಾಡಿಸಿದಂತ ಕಾರ್ಯಕ್ರಮಗಳು. ಹಳೆಯ ಕಾರ್ಯಕ್ರಮಗಳನ್ನ ಶಾಸಕರು ಮಾಡಿದ್ದಾರೆ ಅದು ಅವರಿಗೂ ಗೊತ್ತಿದೆ ನಿಮಗೂ ಗೊತ್ತಿದೆ. ನೀವು ಪ್ರತಿಯೊಬ್ಬರೂ ನನ್ನ ಪರವಾಗಿ ಮಾತನಾಡಬೇಕು ಎಂದು ಮನವಿ ಮಾಡಿದರು. ಈ ಚುನಾವಣೆ ಮಂಜಣ್ಣನ ಚುನಾವಣೆ ಅಲ್ಲ ಕಾರ್ಯಕರ್ತರ ಚುನಾವಣೆ. ಮುಂದೆ ಒಳ್ಳೆಯದಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಆಗುತ್ತದೆ. ಬಂದಿರುವ ತಾಲ್ಲೂಕಿನ ಹಿರಿಯರ ಪಾದ ಮುಟ್ಟಿ ಕೇಳುವುದಿಷ್ಟೇ ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಸಾಯೋವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಎ.ಮಂಜು ಹೇಳಿದರು.
ಉದ್ಘೋಷಿತ ಅಪರಾಧಿಗಳ ಮಾಹಿತಿ ಕೊಟ್ಟರೆ ಸರ್ಕಾರದಿಂದ 5 ಲಕ್ಷ ರೂ. ಬಹುಮಾನ