ಹಾಸನ: ಕಾಡಾನೆ ಹಾವಳಿ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಕಾರಕ್ಕೆ ರೈತರು ಸೆಡ್ಡು ಹೊಡೆದು ನಿಂತಿದ್ದಾರೆ. ತಮ್ಮ ಬೆಳೆಗಳನ್ನು ಕಾಡಾನೆಯಿಂದ ರಕ್ಷಿಸಿಕೊಳ್ಳಲು ರೈತರು ಖೆಡ್ಡಾ ತೋಡಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಹೋರಾಟ ಮಾಡಿ ರೈತರು ಖೆಡ್ಡಾ ತೋಡುವ ಎಚ್ಚರಿಕೆ ನೀಡಿದ್ದರು. ರೈತರ ಹೋರಾಟದ ಎಚ್ಚರಿಕೆಯ ಬಳಿಕವೂ ಸೂಕ್ತ ಕ್ರಮವನ್ನು ಸರ್ಕಾರ ವಹಿಸದ ಹಿನ್ನೆಲೆಯಲ್ಲಿ ಖೆಡ್ಡಾವನ್ನು ತೋಡಿದ್ದಾರೆ. ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ಖೆಡ್ಡಾ ತೋಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದ ಕೋರಿಯರ್ ಅಂಗಡಿಯಲ್ಲಿ ಸ್ಫೋಟ
20 ಅಡಿ ಆಳ 20 ಅಡಿ ಅಗಲವಾದ ಖೆಡ್ಡಾವನ್ನು ಹೊಸಕೊಪ್ಪಲು ಗ್ರಾಮದ ಅಮೃತ್ ರವರ ಗದ್ದೆ ಸಮೀಪ ರೈತರು ತೋಡಿದ್ದಾರೆ. ಖೆಡ್ಡಾ ತೋಡಿ ಅದರ ಮೇಲೆ ಸೊಪ್ಪು, ಬಿದಿರು ಕಟ್ಟಿಗೆ ಹಾಕಿ ಮುಚ್ಚಿ ಆನೆ ಖೆಡ್ಡಾಗೆ ಬೀಳುವಂತೆ ಪ್ಲಾನ್ ಮಾಡಿದ್ದಾರೆ. ಖೆಡ್ಟಾದಲ್ಲಿ ಬಿದ್ದ ಆನೆಯನ್ನ ಅರಣ್ಯ ಇಲಾಖೆ ಸ್ಥಳಾಂತರ ಮಾಡಿಕೊಳ್ಳಲಿ ಎಂದು ರೈತರ ಆಗ್ರಹಿಸಿದರು. ಆಲೂರು, ಸಕಲೇಶಪುರ, ಬೇಲೂರು ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಕಾಫಿ, ಅಡಿಕೆ, ಬಾಳೆ, ಮೆಣಸು ಬೆಳೆಯನ್ನು ದ್ವಂಸ ಮಾಡಿ ಜನರ ಜೀವಕ್ಕು ಕಾಡಾನೆಗಳು ಸಂಚಕಾರ ತರುತ್ತಿವೆ. ಸರ್ಕಾರ ಏನೂ ಕ್ರಮ ವಹಿಸುತ್ತಿಲ್ಲ ಎಂದು ರೊಚ್ಚಿಗೆದ್ದು ಖೆಡ್ಡಾ ತೋಡಿ ಅರಣ್ಯ ಇಲಾಖೆ ಹಾಗು ಸರ್ಕಾರಕ್ಕೆ ಜನರು ಸೆಡ್ಡು ಹೊಡೆದು ನಿಂತಿದ್ದಾರೆ.
ಮುಂದಿನ ವರ್ಷ 2023 ರಲ್ಲಿ ಯಾವಾಗ ಮತ್ತು ಎಷ್ಟು ಸೂರ್ಯ ಮತ್ತು ಚಂದ್ರ ಗ್ರಹಣಗಳು ಸಂಭವಿಸುತ್ತವೆ…