ಹಾಸನ: ಹಾಸನದಲ್ಲಿ ಕಾಡಾನೆ ಹಾವಳಿ ಬಗೆಹರಿಯದ ಸಮಸ್ಯೆಯಾಗಿ ಕಾಡುತ್ತಿದ್ದು, ಹಗಲು, ರಾತ್ರಿಯನ್ನದೆ ಗ್ರಾಮದೊಳಗೆ ಕಾಡಾನೆಗಳು ನುಗ್ಗುತ್ತಿವೆ. ಕಳೆದ ರಾತ್ರಿ ಸಕಲೇಶಪುರ ತಾಲ್ಲೂಕಿನ, ಗುಮ್ಮನಹಳ್ಳಿ ಗ್ರಾಮಕ್ಕೆ ಒಂಟಿಸಲಗ ಬಂದಿದೆ. ಕಾಡಾನೆಯನ್ನು ಹಿಂಬಾಲಿಸಿ ಗ್ರಾಮಸ್ಥರು ಮನೆಯಿಂದ ಹೊರಗೆ ಬಾರದಂತೆ ಟಾಸ್ಕ್ ಫೋರ್ಸ್ ಸಿಬ್ಬಂದಿ ಎಚ್ಚರಿಕೆ ನೀಡಿದೆ. ಯಾವುದೆ ಭಯವಿಲ್ಲದೆ ಗ್ರಾಮದೊಳಗೆ ಕಾಡಾನೆ ಹಾದುಹೋಗಿದೆ.
ಯುಪಿಯ ಸಾನಿಯಾ ಮಿರ್ಜಾ ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್
ಇನ್ನು ಹೊಳಲು ಗ್ರಾಮದ ಸಮೀಪ ಕಾಫಿ ತೋಟದೊಳಗೆ ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ. ರಾತ್ರಿ ವೇಳೆ ಮನೆಯಿಂದ ಹೊರಬಾರದಂತೆ ಹಾಗೂ ಹಗಲು ವೇಳೆ ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದೆ. ಇನ್ನೊಂದೆಡೆ ಆಹಾರ ಅರಸಿ ದೊಡ್ಡದೀಣೆ ಗ್ರಾಮಕ್ಕೆ ಒಂಟಿ ಸಲಗ ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೆಲಕಾಲದವರೆಗೂ ಗ್ರಾಮದೊಳಗೆ ಕಾಡಾನೆ ಓಡಾಡುತ್ತಿತ್ತು. ಕಾಡಾನೆ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಯನ್ನು ಅರಣ್ಯ ಇಲಾಖೆ ಆರ್‌ಆರ್‌ಟಿ ಸಿಬ್ಬಂದಿ ಹಿಮ್ಮೆಟ್ಟಿಸಿದೆ. ಹೆಬ್ಬನಹಳ್ಳಿ ಗ್ರಾಮದಲ್ಲಿ ರಸ್ತೆ ದಾಟಿ ಕಾಫಿ ತೋಟದೊಳಗೆ ಒಂಟಿಸಲಗ ಹೋಗಿದೆ.
ಇಂದಿನಿಂದ ಮೂಗಿನ ಲಸಿಕೆ ಪ್ರಾರಂಭ : ಕೊರೊನಾ ವೈರಸ್ ನಾಸಲ್ ಲಸಿಕೆಗೆ ಕೇಂದ್ರ ಅನುಮೋದನೆ