ಮಕ್ಕಳನ್ನು ನೋಡಲು ಬಿಡಲಿಲ್ಲವೆಂದು ಪತ್ನಿ, ಮಕಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿದ ಪತಿ

ಹಾಸನ: ಮಕ್ಕಳನ್ನು ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಕೊಪಗೊಂಡ ಪತಿ, ಪತ್ನಿ ಮಕ್ಳಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಂಪತಿಗಳಿಬ್ಬರು ದೂರವಾಗಿದ್ದರೂ ಪತಿ ಆಗಾಗ ಮಕ್ಕಳನ್ನು ನೋಡಲು ಮನೆಗೆ ಬರುತ್ತಿದ್ದ. ನಿನ್ನೆ ಮಕ್ಕಳನ್ನು ನೋಡಲು ಪತ್ನಿ ಬಿಡಲಿಲ್ಲ ಎಂದು ಎಲ್ಲರನ್ನೂ ಸೇರಿಸಿ ಮೆನಗೆ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಪತ್ನಿ ಗೀತಾ, ಮಕ್ಕಳು ಚಿರಂತನ್(7) ಮತ್ತು ನಂದನ್(5) ಗಾಯಗೊಂಡಿದ್ದಾರೆ. ಇವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಲಕ್ಷ್ಮೀ ಸದಾ ನಿಮ್ಮ ಮನೆಯಲ್ಲಿರಬೇಕು ಅಂದ್ರೆ ನೀವು ಈ ಕೆಲಸವನ್ನು ಮಾಡಬೇಕು..

ಇನ್ನು ಮನೆಯಲ್ಲಿರುವ ಸಾಮಾಗ್ರಿಗಳು, ಪಿಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಅಂಕನಹಳ್ಳಿ ರಂಗಸ್ವಾಮಿ ಮತ್ತು ಗೀತಾ ದಂಪತಿಗಳಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಜಮೀನು ವಿಚಾರವಾಗಿ ಜಗಳವಾಡಿ ಇಬ್ಬರು ಬೇರೆಯಾಗಿದ್ದರು. ಮಕ್ಕಳನ್ನು ಆಗಾಗ ನೋಡಲು ಬರುತ್ತಿದ್ದರಿಂದ ನಿನ್ನೆ ಮಕ್ಕಳನ್ನು ನೋಡಲು ಬಂದಿದ್ದಾನೆ ಆದರೆ ಪತ್ನಿ ಮಕ್ಕಳನ್ನು ನೋಡಲು ಬಿಡಲಿಲ್ಲ ಎಂದು ಕೋಪಗೊಂಡು ಪೆಟ್ರೋಲ್ ಸುರಿದು ಮಧ್ಯರಾತ್ರಿ ಎಲ್ಲರೂ ನಿದ್ರೆ ಮಾಡುವಾಗ ಮನೆಗೆ  ಬೆಂಕಿ ಹಚ್ಚಿದ್ದಾನೆ. ಪ್ರಕರಣ ದಾಖಲಿಸಿಕೊಂಡು ರಂಗಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ2

ಈ ಮೂರು ಜನರಿಂದ ದೂರವಿರಿ.. ಇಲ್ಲದಿದ್ದಲ್ಲಿ, ನಿಮ್ಮ ಜೀವನವೇ ಹಾಳಾಗುತ್ತದೆ..

About The Author