ಹಾಸನ: ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್ ಡಿಡಿ ಆಮಂತ್ರಣ ಚರ್ಚೆ ವಿಚಾರವಾಗಿ ಮಾತನಾಡಿದ ಗೌಡರು, ನಾನು ಈ ವಿಚರವಾಗಿ ಏನೂ ಮಾತನಾಡುವುದಿಲ್ಲ. ಯಾರ್ಯಾರು ಏನೇನು ಮಾಡಿದ್ದಾರೆ ಎಂದು ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹಾಸದಲ್ಲಿ ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು.
ಮುಂದಿನ ವಾರದಿಂದ ಹಾಸದಲ್ಲಿ ಪ್ರವಾಸ ಕೈಗೊಳ್ಳುತ್ತೇನೆ : ದೇವೇಗೌಡ ಹೇಳಿಕೆ
ಹಿರಿಯ ಪತ್ರಕರ್ತರಾದ ಸುಗತ ಶ್ರೀನಿವಾಸ್ ಒಂದು ಟ್ವೀಟ್ ಮಾಡಿದ್ದಾರೆ, ಅದು ದೇಶದಾದ್ಯಂತ ಚರ್ಚೆ ಆಗಿದೆ. ಅದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳಲು ಭಯಸುವುದಿಲ್ಲ. ಹಾಸನ ಜಿಲ್ಲೆ ಪ್ರವಾಸದ ಬಳಿಕ ರಾಜ್ಯ ಪ್ರವಾಸವನ್ನು ಮಾಡುತ್ತೇನೆ ರಾಜ್ಯವನ್ನು ಮರೆಯುವುದಿಲ್ಲ ಪ್ರವಾಸ ಮುಗಿಸಿ ಪಾರ್ಲಿಮೆಂಟ್ ಗೂ ಹೋಗುತ್ತೇನೆ ಮತ್ತು ರಾಜ್ಯದಲ್ಲಿ ಪಕ್ಷ ಸಂಘಟನೆ ಪ್ರವಾಸವನ್ನೂ ಮಾಡುತ್ತೇನೆ ಎಂದು ಹೆಚ್ ಡಿ ದೇವೇಗೌಡರು ಘೋಷಣೆ ಮಾಡಿದರು. ಹುಟ್ಟೂರು ಹರದನಹಳ್ಳಿಯಲ್ಲಿ ಮನೆದೇವರು ದೇವೇಶ್ವರನ ಪೂಜೆಗೆ ಆಗಮಿಸಿದ ವೇಳೆ ಹೇಳಿಕೆ ನೀಡಿದರು. ಇಂದು ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ಮನೆದೇವರು ಈಶ್ವರನಿಗೆ ಪೂಜೆ ಸಲ್ಲಿಸಲು ಆಗಮಿಸಿದ್ದರು.
ಮುಂದಿನ ವಾರದಿಂದ ಹಾಸದಲ್ಲಿ ಪ್ರವಾಸ ಕೈಗೊಳ್ಳುತ್ತೇನೆ : ದೇವೇಗೌಡ ಹೇಳಿಕೆ