ಕರ್ನಾಟಕ ಟಿವಿ ಹಾಸನ : ರಾಜ್ಯ ಸರ್ಕಾರ ರೈತರ ಸಮಸ್ಯೆ ಆಲಿಸಲು ನಿರ್ಲಕ್ಷ್ಯ ತೋರುತ್ತಿದೆ.. ಇದೇ ರೀತಿ ರೈತರ ಸಮಸ್ಯೆ ಆಲಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪತಿಭಟನೆ ಮಾಡುವುದಾಗಿ ಮಾಜಿ ಸಚಿವ ರೇವಣ್ಣ ಎಚ್ಚರಿಕೆ ನೀಡಿದ್ದಾರೆ.. ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ ಸಿಎಂ ಪರಿಹಾಋ ನಿಧಿಗೆ ಬಂದಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು, ಅಲ್ಲದೇ ಇನ್ನು ನಾಲ್ಕೈದು ದಿನ ನೋಡಿ ಪ್ರತಿಭಟನೆ ಮಾಡಲು ನಿರ್ಧಾರ ಮಾಡುವುದಾಗಿ ಹೇಳಿದ್ರು.
ಕುಮಾರಸ್ವಾಮಿ ಮೇಲಿನ ವೈರತ್ವ ಮರೆತು ಹೋರಾಟ ಮಾಡುವಂತೆ ಸಿದ್ದುಗೆ ಕರೆ
ಇನ್ನು ಸಿದ್ದರಾಮಯ್ಯ ಎಲ್ಲಾ ವಿಪಕ್ಷ ನಾಯಕರನ್ನ ಕರೆದು ಸಭೆ ಮಾಡಿ ಹೋರಾಟ ಮಾಡೋಣ.. ನಿಮಗೂ ಕುಮಾರಸ್ವಾಮಿಗೂ, ರೇವಣ್ಣನಿಗೂ ವೈರತ್ವ ಇದ್ರೆ ಆಮೇಲೆ ಇಟ್ಟುಕೊಳ್ಳೋಣ, ಈಗ ರೈತರಿಗಾಗಿ ನೀವು ಎಲ್ಲಾ ವಿಪಕ್ಷದವರನ್ನ ಕರೆದು ಹೋರಾಟ ಮಾಡುವಂತೆ ಸಿದ್ದರಾಮಯ್ಯಗೆ ಹೆಚ್ಡಿ ರೇವಣ್ಣ ಒತ್ತಾಯ ಮಾಡಿದ್ದಾರೆ..
ಕುಮಾರಸ್ವಾಮಿ ಘೋಷಿಸಿದ್ದ ಎಲ್ಲಾ ಕಾಮಗಾರಿಗಳನ್ನ ಯಡಿಯೂರಪ್ಪ ನಿಲ್ಲಿಸಿದ್ದಾರೆ
ಯಡಿಯೂರಪ್ಪ ವಿಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ, ಮುಖ್ಯಮಂತ್ರಿಗಳೆ ಕುಮಾರಸ್ವಾಮಿಘೋಷಣೆ ಮಾಡಿದ್ದ ಯೋಜನೆಗಳನ್ನ ನಿಲ್ಲಿಸಿ ದ್ವೇಷದ ರಾಜಕಾರರಣ ಮಾಡಿದ್ದಾರೆ ಅಂತ ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ರು. ಸುಮ್ಮನೆ ಸುಳ್ಳು ಹೇಳಿಕೊಂಡು ಕಾಲ ಕಳೆಯ ಬೇಡಿ ಲಾಕ್ ಡೌನ್ ಘೋಷಣೆ ಮಾಡಿ 29 ದಿನವಾಯ್ತು ನಾನೇ ಖುದ್ದಾಗಿ ಸಿಎಂ ಭೇಟಿಯಾಗಿ ರೈತರ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದೇನೆ ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.. ನಾನೇ ರೈತರಿಂದ 25 ಟನ್ ತರಕಾರಿಯನ್ನ 10 ಲಕ್ಷ ರೂಪಾಯಿಗೆ ಖರೀದಿಸಿ ಕಡಿಮೆ ದರದಲ್ಲಿ ಜನರಿಗೆ ಹಂಚಿಸಿದ್ದೇನೆ. ರೈತರ ವಸ್ತುಗಳನ್ನ ಖರೀದಿಸುವವರೆ ಇಲ್ಲದಂತಾಗಿದೆ. ಅಡುಗೆ ಎಣ್ಣೆ ಪ್ರತೀ ಲೀಟರ್ 80 ರೂಪಾಯಿಯಿಂದ 130 ರೂಪಾಯಿ ಮಾರಾಟ ಮಾಡ್ತಿದ್ದಾರೆ.. ನಾನೇ ಮಂಗಳೂರಿನಿಂದ 5 ಲೋಡ್ ಅಡುಗೆ ಎಣ್ಣೆ ತರಿಸುತ್ತೇನೆ ಅಂತ ರೇವಣ್ಣ ಸರ್ಕಾರ್ದ ವಿರುದ್ಧ ಹರಿಹಾಯ್ದರು..
ರಾಹುಲ್, ಕರ್ನಾಟಕ ಟಿವಿ, ಹಾಸನ