ಹಾಸನ: ನಗರದ ಡೈರಿ ವೃತ್ತದ ಬಳಿ ಸರಕಾರಿ ಇಂಜಿನಿಯರಿಂಗ್ ಆವರಣದಲ್ಲಿರುವ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ವಿದ್ಯುನ್ಮಾನ ಮತಯಂತ್ರಗಳ ನೂತನ ಉಗ್ರಾಣವನ್ನು ಬುಧವಾರದಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಟೇಪ್ ಕತ್ತರಿಸಿ ಉದ್ಘಾಟಿಸಿದರು. ನಂತರ ಕಟ್ಟಡ ವೀಕ್ಷಣೆ ಮಾಡುತ್ತಾ, ಇನ್ನೂ ವಿಸ್ತಾರವಾದ ಜಾಗದ ಅವಶ್ಯಕತೆ ಇದೆ ಎಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣದ ಕಟ್ಟಡ ನಿರ್ಮಾಣ ಕೆಲ ದಿನಗಳ ಹಿಂದಯೇ ಆಗಿದ್ದು, ಇವಿಎಂಗಳು ಹೈದ್ರಬಾದ್ ನಿಂದ ಬರುತ್ತಿರುವದರಿಂದ ಈ ಕಟ್ಟಡವನ್ನು ನಮ್ಮ ಉಸ್ತುವಾರಿಗೆ ತೆಗೆದುಕೊಂಡು ಉದ್ಘಾಟನೆ ಮಾಡಲಾಗಿದೆ ಎಂದರು.
ಮಕ್ಕಳಿಗೆ ಪಠ್ಯದ ಜೊತೆ ಸಾಮಾಜಿಕ ಪ್ರಜ್ಞೆ ಕೂಡ ಇರಲಿ : ಎಸ್ಪಿ ಹರಿರಾಮ್ ಶಂಕರ್
ಈ ಕಟ್ಟಡವು ಚುನಾವಣಾ ಆಯೋಗದ ಹಣದಿಂದ ಅಂದಾಜು 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಬರುವ ಇವಿಎಂ ಮತ್ತು ಇವಿ ಪ್ಯಾಟ್ ಗಳನ್ನು ಇಲ್ಲಿ ಶೇಖರಣೆ ಮಾಡಿ ಅದನ್ನು ಪರಿಶೀಲಿಸಲಾಗವುದು. ಚುನಾವಣೆ ಮುಗಿದ ಮೇಲೆ ಕಾಲೇಜು ಜಾಗವನ್ನು ಉಪಯೋಗಿಸಿಕೊಳ್ಳಲಾಗುವುದು ಎಂದ ಹೇಳಿದರು.
ವಿಭಿನ್ನ ಕಥಾಹಂದರವುಳ್ಳ ಚಿತ್ರ ‘2ND ಲೈಫ್’
ನಮ್ಮಲ್ಲಿ ಒಟ್ಟು 1997 ಬೂತ್ ಗಳಿದ್ದು, ಅದಕ್ಕೆ ತಕ್ಕಂತೆ ಮತಯಂತ್ರಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ಪರಿಕರಣಗಳು ಬರುತ್ತಿದೆ. ಹೈದ್ರಬಾದಿನಿಂದ ಮತಯಂತ್ರಗಳು ಬರಲಿದ್ದು, ಇನ್ನೆರಡು ದಿನಗಳಲ್ಲಿ ಸ್ಟೋರೆಜ್ ಮಾಡಲಾಗುವುದು. ನಮ್ಮ ಜಿಲ್ಲೆಗೆ 3624 ಬ್ಯಾನೆಟ್ ಯುನಿಟ್, 2245 ಕಂಟ್ರೋಲ್ ಯೂನಿಟ್ ಗಳು ಬರುತ್ತಿದ್ದು, ಮುಂದೆ ನಡೆಯುವ ಚುನಾವಣೆಗಳ ಪೂರ್ವ ತಯಾರಿಗಳು ಎಲ್ಲಾ ಇಲ್ಲೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಇಲ್ಲಿ ಮೊದಲೇ ಸ್ಟೋರೆಜ್ ಸ್ಥಳ ಇದ್ದು, ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿರುವದರಿಂದ ಮತ ಪೆಟ್ಟಿಗೆಯನ್ನು ಒಂದು ಕಡೆ ಸ್ಟೋರೆಜ್ ಮಾಡಲಾಗಿದೆ. ಹಿಂದೆ ನಡೆದಿರುವ ಮತಯಂತ್ರ ಇದ್ದರೂ ಕೂಡ ಈಗ ಹೊಸ ಮಾಡಲ್ ಯಂತ್ರಗಳು ಬಂದಿರುವುದರಿಂದ ಎಲೆಕ್ಷನ್ ಕಮಿಷನರ್ ಹೊಸದಾಗಿ ಆದೇಶ ಮಾಡಿರುವುದರಿಂದ ನೂತನವಾಗಿ ಬಂದಿರುವ ಇವಿಎಂಗಳು ಇಲ್ಲಿಗೆ ಬರುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಡಿಸಿ ಅವರು ಉತ್ತರಿಸಿದರು.
ಮಕ್ಕಳಿಗೆ ಪಠ್ಯದ ಜೊತೆ ಸಾಮಾಜಿಕ ಪ್ರಜ್ಞೆ ಕೂಡ ಇರಲಿ : ಎಸ್ಪಿ ಹರಿರಾಮ್ ಶಂಕರ್