Saturday, May 17, 2025

Latest Posts

ಎರಡು ಚಿರತೆಗಳನ್ನು ಕೊಂದು ಉಗುರುಗಳು ಹಾಗೂ ಮೂಳೆ ಮಾರಾಟಕ್ಕೆ ಯತ್ನ

- Advertisement -

ಹಾಸನ: ಜಿಲ್ಲೆಯಲ್ಲಿ ಚಿರತೆ ಕೊಂದು ಅದರ ಉರುಗು ಮಾರಾಟ ಮಾಡಲು ಯತ್ನಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಒಂದು ಕಡೆ ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದರೆ ಇನ್ನೊಂದೆಡೆ ಚಿರತೆ ಕೊಂದು ಅದರ ಚರ್ಮ ಉಗುರು ಮಾರಾಟ ಜಾಲಗಳು ಅಂತರ್ ರಾಜ್ಯದ ವರೆಗೆ ಹಬ್ಬಿರೋದ ಆತಂಕ ಕಾರಿ ಬೆಳವಣಿಗೆ ಎನ್ನಬಹುದು. ಎರಡು ಚಿರತೆ ಗಳನ್ನ ಕೊಂದು ಅದರ ಉಗುರು ಹಾಗೂ ಮೂಳೆ ಮಾರಾಟ ಯತ್ನಕ್ಕೆ ಸಂಬಂಧಿದಂತೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಹಾಸನ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಹಾಸನ ಡಿವೈಎಸ್ಪಿ ಉದಯ್ಭಾಸ್ಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳು ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಭೋಜನದ ನಂತರ ತಟ್ಟೆಯಲ್ಲಿ ಕೈ ತೊಳೆಯುವುದು ಒಳ್ಳೆಯದೋ ಕೆಟ್ಟದ್ದೋ..?

ಮೊದಲ ಪ್ರಕರಣದಲ್ಲಿ ಬೇಲೂರು ಅರಣ್ಯವ್ಯಾಪ್ತಿಯ ಹಳೇಬೀಡಿನ ಕೋಮಾರನಹಳ್ಳಿಯ ರೈತ ರವಿ ತನ್ನ ಮನೆ ಬಳಿಯೇ ಚಿರತೆಗೆ ಉರುಳು ಒಡ್ಡಿ,ನಂತರ ಚಿರತೆ ಉರುಳಿಗೆ ಸಿಕ್ಕಿಬಿದ್ದಮೇಲೆ ಅದನ್ನ ಕೊಂದು ಚಿರತೆ ಮೂಳೆ ಮಾರಾಟ ಮಾಡುವ ಯತ್ನ ಮಾಡಿದ್ದಾನೆ. ಈ ಕೃತ್ಯಕ್ಕೆ ಅದೇ ಗ್ರಾಮದ ರೈತ ಮೊಹನ ,ಹಾಗು ಎಟಿಎಮ್ ಒಂದರಲ್ಲಿ ಕೆಲಸಕ್ಕಿದ್ದ ಸ್ವಾಮಿ ಎಟಿಎಮ್ ಕೈಜೋಡಿಸಿರೋದು ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಈ ಕೃತ್ಯದ ನಂತರ ಆರೋಪಿ ರವಿ ಚಿರತೆ ಕಳೆಬರವನ್ನ ತಮ್ಮ ಮನೆ ಹಿಂದಿನ ತಿಪ್ಪೆ ಗುಂಡಿಯಲ್ಲಿ ಹೂತಿಟ್ಟಿದ್ದ ವಿಷಯ ತಿಳಿದು ಬಂದಿದೆ..ಹಳೇಬೀಡಿನ ಪ್ರಕರಣದಲ್ಲಿ ಒಟ್ಟು ಒಂದುವರೆ ಕೆಜಿ ಚಿರತೆ ಮೂಳೆ, ಒಟ್ಟು 18 ಉಗುರಲ್ಲಿ 5 ಉಗುರುಗಳನ್ನ ಪೊಲೀಸರು ವಶಪಡಿಸಿಕೊಂಡು, ಪ್ರಕರಣವನ್ನ ಅರಣ್ಯ ಇಲಾಖೆಗೆ ವಹಿಸಿದ್ದಾರೆ.

ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸುತ್ತಿದ್ದೀರಾ..ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ..!

ಹಾಸನದ ಮತ್ತೊಂದು ಆಲೂರು ತಾಲೂಕಿನ ಪ್ರಕರಣದಲ್ಲಿ ಚಿರತೆ ನಾಲ್ಕು ಪಾದಗಳನ್ನ ಮಾರಾಟ ಯತ್ನದಲ್ಲಿ ಮಂಜೇಗೌಡ ಹಾಗೂ ರೇಣುಕುಮಾರ್ ಎಂಬುವರನ್ನ ಬಂದಿಸಿದ್ದಾರೆ. ಆಲೂರು ತಾಲೂಕ್ ಮಾದಿಹಳ್ಳಿ ಗ್ರಾಮದ ಮಂಜೇಗೌಡ ಎಂಬುವನು ಚಿರತೆ ನಾಲ್ಕು ಪಾದಗಳ್ಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಹೊಲದಲ್ಲಿ ಹೂತಿಟ್ಟು ,ನಂತರ ಅವುಗಳನ್ನ ಮಾರಲು ಯತ್ನಸಿದಾಗ ಈ ಪ್ರಕರಣ ಬಯಲಿಗೆ ಬಂದಿದೆ. ಈ ಪ್ರಕರಣದಲ್ಲಿ 15 ದಿನಗಳ ಹಿಂದೆ 7-8 ವರುಷದ ಗಂಡು ಚಿರತೆಯ ಕಳೆಬರವೊಂದು ನಾಲ್ಕು ಪಾದಗಳನ್ನ ಕತ್ತರಿಸಿದ ರೀತಿಯಲ್ಲಿ ಅರಣ್ಯ ಇಲಾಖೆಗೆ ಪತ್ತೆಯಾಗಿತ್ತು,, ಅದನ್ನ ಅರಣ್ಯ ಇಲಾಖೆಯವರು ವಿಧಿ ವಿಧಾನ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದರು. ಈಗ ಅದೇ ಚಿರತೆ ಕಾಲಿನ ಪಾದಗಳು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗುರುತಾಗಿದೆ. ಆದರೆ ಚಿರತೆ ದೇಹ ಸಂಪೂರ್ಣ ಕೊಳೆತು ಹೋಗಿದ್ದ ಕಾರಣ ಚಿರತೆ ಸಾವು ಯಾವ ರೀತಿ ಆಗಿದೆ ಅನ್ನೊ ಬಗ್ಗೆ ತನಿಖೆ ಮುಂದುವರೆದಿದೆ.

ಪ್ರತಿದಿನ ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ನಿಮ್ಮ ಸ್ವಂತ..!

ಈ ಎರಡೂ ಪ್ರಕರಣದದಲ್ಲಿ ಚಿರತೆ ಉಗುರು ಮತ್ತು ಮೂಳೆಯನ್ನ ವ್ಯಾಪಾರ ಮಾಡುವ ಸೋಗಿನಲ್ಲೆ ಆರೋಪಿಗಳನ್ನ ಹಾಸನ ಪೊಲಿಸರು ಬಲೆಗೆ ಬೀಳಸಿದ್ದಾರೆ. ಇನ್ನ ಹಾಸನದಿಂದ ಈ ರೀತಿ ಚಿರತೆ ಉಗುರು ,ಮೂಳೆ ಇಂತಹ ವನ್ಯ ಜೀವಿ ಭಾಗ ಮಾರಾಟ ಜಾಲ ಹೊರ ರಾಜ್ಯದ ವರೆಗು ಹಬ್ಬಿರೋ ಬಗ್ಗೆ ತನಿಖೆ ಮುಂದುವರೆದಿದೆ. ಸಧ್ಯ ಹಾಸನದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿದ್ದು ಅವುಗಳು ನಾಡಿಗೆ ಬರುತ್ತಿರೋದು ಒಂದೆಡೆಯಾದರೆ, ಚಿರತೆಗಳ ಮೇಲೆ ಈಗ ಕಾಡುಗಳ್ಳರ ಮತ್ತು ಸ್ಮಗ್ಲಿಂಗ್ ಗ್ಯಾಂಗ್ಗಳ ಕಣ್ಣು ಬಿದ್ದಿರೋದು ಆತಂಕ ಕಾರಿ ಬೆಳವಣಿಗೆ. ಆದರೆ ಈ ಎರಡು ಪ್ರಕರಣಗಳನ್ನು ಪೊಲೀಸರೇ ಬೇದಿಸಿದ್ದು ಅರಣ್ಯ ಇಲಾಖೆಗೆ ಈ ಸುಳಿವು ಯಾಕೆ ಸಿಗಲಿಲ್ಲ ಅನ್ನೊ ದು ಅರಣ್ಯ ಇಲಾಖೆ ಸಿಬ್ಬಂದಿ ಹಾಸನದಲ್ಲಿ ಹೆಚ್ಚು ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತಿಲ್ಲವೇ ಎಂಬ ಪ್ರೆಶ್ನೆ ಹುಟ್ಟು ಹಾಕಿದೆ.

- Advertisement -

Latest Posts

Don't Miss