ಹಾಸನ: ಪ್ರತಿಷ್ಟಿತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಯೂನಿಯನ್ ಎಲೆಕ್ಷನ್ ನಲ್ಲಿ ಗುಂಪು ಗುಂಪುಗಳ ನಡುವೆ ಭಾರೀ ಗಲಾಟೆ ನಡೆದಿದ್ದು, ಒಬ್ಬನಿಗೆ 50 ರಿಂದ 100 ವಿದ್ಯಾರ್ಥಿಗಳು ಬಡಿದಿರುವ ಘಟನೆ ನಡೆದಿದೆ. ಇದೆಲ್ಲವು ಕಣ್ಣ ಮುಂದೆ ನಡೆದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿರುವುದು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಶಿಕ್ಷಣ ಸಂಸ್ಥೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಕಾಲೇಜಿನ ಯೂನಿಯನ್ ಲೀಡರ್ ಆಗಿ ಮೆಕಾನಿಕ್ ಲ್ ಬ್ರಾಂಚ್ ನ ೫ನೇ ಸೆಮಿಸ್ಟರ್ ಪ್ರಜ್ವಲ್ ಆಯ್ಕೆಯಾಗಿದ್ದು. ಗುಂಪು ಗುಂಪುಗಳ ನಡುವೆ ದೊಬ್ಬಿ ಗಲಾಟೆ ಎಬ್ಬಿಸಿ ಜಗಳ ನಡೆಸಿದ್ದಾರೆ.
ನಿಮ್ಮ ತ್ವಚೆಯು ಹೂವಿನಂತೆ ಮೃದುವಾಗಬೇಕೆ..? ಹಾಗಾದರೆ ಈ 5 ಹೂವುಗಳಿಂದ ಮಾಡಿದ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚಿ
ರಸ್ತೆ ಮಧ್ಯದಲ್ಲಿಯೇ ಕೇಕೆ ಶಿಳ್ಳೆ ಹಾಕುತ್ತಾ ತಾವು ವಿದ್ಯಾರ್ಥಿಗಳು ಅನ್ನೋದೇ ಮರೆತು ಹೋಗಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಇಷ್ಟೆಲ್ಲ ನಡೀತಾ ಇದ್ರೂ ತಮ್ಮ ಕಾರಿನಲ್ಲಿ ಇದೆಲ್ಲ ನೋಡುತ್ತಾ ತಮಗೆ ಇದೆಲ್ಲ ಸಂಬಂಧವಿಲ್ಲ ಅನ್ನುವ ಹಾಗೇ ಕಾರಿನಲ್ಲಿ ಹೋಗಿದ್ದಾರೆ. ಒಂದು ಶಿಕ್ಷಣ ಸಂಸ್ಥೆಯಲ್ಲಿ ಈ ತರಹದ ದೊಬ್ಬಿ ಗಲಾಟೆಯಿಂದ ಸಾಕಷ್ಟು ತೊಂದರೆ ಇದ್ದರೂ ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಯಾವುದೇ ರೀತಿಯಾದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದು ಕಾಲೇಜು ಆಡಳಿತದ ವಿಪಲತೆಯನ್ನು ಎತ್ತಿ ತೋರಿಸುತ್ತದೆ.
ಚೀನಾ ಶೂನ್ಯ ಕೋವಿಡ್ ನೀತಿಯನ್ನು ಬದಲಾಯಿಸಿದರೆ 1.3 ರಿಂದ 2.1 ಮಿಲಿಯನ್ ಜನರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ..!