Sunday, September 8, 2024

Latest Posts

ಮೂರನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಹೋರಾಟ : ಪುರಸಭಾ ಆಡಳಿತದ ವಿರುದ್ದ ಕಾಂಗ್ರೆಸ್ ಮುಖಂಡರ ವಾಗ್ದಳಿ

- Advertisement -

ಹಾಸನ: ಸಕಲೇಶಪುರ ಪುರಸಭಾ ವ್ಯಾಪ್ತಿಯಲ್ಲಿ ಅರ್ಹರಿಗೆ ನಿವೇಶನ ಮತ್ತು ವಸತಿಗಾಗಿ ಪಟ್ಟಿ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ನಿವೇಶನ ರಹಿತರ ಹಾಗೂ ಯೂತ್ ಕಾಂಗ್ರೆಸ್ ವತಿಯಿಂದ ಪ್ರಾರಂಭವಾಗಿರುವ ಅನಿರ್ದಿಷ್ಟಾವಧಿ ಪ್ರತಿಭನಾ ಧರಣಿ ಮಂಗಳವಾರೆ ಎರಡನೇ ದಿನಕ್ಕೆ ಕಾಲಿಟ್ಟಿತ್ತು. ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿವೇಶನ ಮತ್ತು ವಸತಿಗಾಗಿ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದಾರೆ ಆದರೆ ಪ್ರತಿ ವರ್ಷ ನಿವೇಶನ ರಹಿತರ ಪಟ್ಟಿ ಬಿಡುಗಡೆ ಮಾಡುವುದು ಪುರಸಭೆಯವರ ಜವಾಬ್ದಾರಿಯಾಗಿದ್ದು ,ಇದೂವರೆಗೂ ಪುರಸಭೆ ನಿವೇಶನ ರಹಿತರ ಯಾವುದೇ ಪಟ್ಟಿ ಬಿಡುಗಡೆ ಮಾಡುವುದಾಗಲೀ,ನಿವೇಶನ ಹಂಚಿಕೆ ಮಾಡುವ ಕೆಲಸಕ್ಕೆ ಮುಂದಾಗದೆ ನೀರ್ಲಕ್ಷ್ಯ ತೋರಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕರ್ನಾಟಕ ಟಿವಿ ಡಿಸೆಂಬರ್ ಸಮೀಕ್ಷೆ | ದಾವಣಗೆರೆಯ 7 ಕ್ಷೇತ್ರಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ

ಈ ವೇಳೆ ಮಾತನಾಡಿದ ಕಾಂಗ್ರೇಸ್ ಮುಖಂಡ ಮುರುಳಿ ಮೋಹನ್,ಕಳೆದ 15 ವರ್ಷಗಳಿಂದ ಶಾಸಕರಾಗಿರುವ ಎಚ್.ಕೆ ಕುಮಾರಸ್ವಾಮಿಯವರು ಪಟ್ಟಣದ ನಿವಾಸಿಗಳಿಗೆ ನಿವೇಶನ ಹಾಗೂ ವಸತಿ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.ಇದೂವರೆಗೂ ಅಧಿಕಾರ ನಡೆಸಿದ್ದಿರಾ ಅ ಋಣಕ್ಕೆ ,ಮನುಷತ್ವಕ್ಕೆ ಬೆಲೆ ನೀಡುವುದ್ದಾರೆ ಮೊದಲು ಪಟ್ಟಣದ ನಿವಾಸಿಗಳಿಗೆ ನಿವೇಶನ ಹಾಗೂ ವಸತಿ ನೀಡಿ ಎಂದು ಶಾಸಕರ ವಿರುದ್ದ ಕಿಡಿಕಾರಿದರು.15 ವರ್ಷ ಅಧಿಕಾರ ನಡೆಸಿರುವ ಶಾಸಕರು ತಮ್ಮ ಸಾಧನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಪಡಿಸಿ ಎಂದು ಸವಾಲು ಎಸೆದರು. ಇನ್ನಿರುವ ನಾಲ್ಕು ತಿಂಗಳ ಅಧಿಕಾರದ ಅವಧಿಯೊಳಗೆ ನಿರಾಶ್ರಿತರಿಗೆ ವಸತಿ ಕಲ್ಪಸಿ ಇಲ್ಲದಿದ್ದರೆ ಆ ದೇವರು ಕೂಡ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದರು.

ಸಾವರ್ಕರ್ ಅವರನ್ನು ಅವಮಾನಿಸುವುದನ್ನು ನಿಲ್ಲಿಸಿ : ದೇವೇಂದ್ರ ಫಡ್ನವಿಸ್

ಕಾಂಗ್ರೇಸ್ ಮುಖಂಡ ಡಿ.ಸಿ ಸಣ್ಣಸ್ವಾಮಿ ಮಾತನಾಡಿ.ಪಟ್ಟಣದಲ್ಲಿ ಹಲವಾರು ಮಂದಿ ನಿವೇಶನ ರಹಿತರಿದ್ದಾರೆ,ಈಗಲೂ ಮೂರ್ನಾಲ್ಕು ಕುಟುಂಬಗಳು ಒಂದೇ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಅನಿವಾರ್ಯಯತೆಯಿದೆ.ನೆನ್ನೆ ಪುರಸಭೆಯವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ ಪಟ್ಟಣದ 5 ಕಿ.ಮೀ ವ್ಯಾಪ್ತಿಯಲ್ಲಿ ನಿವೇಶನವಾಗಿ ಬಡವರಿಗೆ ನೀಡಲು ಪುರಸಭೆಗೆ 5 ಎಕರೆ ಜಾಗ ನೀಡಲು ಮುಂದೆ ಬಂದರೆ ಸೂಕ್ತ ದರ ನೀಡಿ ತೆಗೆಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಅದರಂತೆ ಪಟ್ಟಣ ವ್ಯಾಪ್ತಿಯಲ್ಲಿ ಶಾಸಕರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ 40ಎಕರೆಎ ಜಾಗ ಹೊಂದಿದ್ದಾರೆ ಹಾಗಾಗಿ ನಿಜವಾದ ಜನರ ಬಗ್ಗೆ ಶಾಸಕರಿಗೆ ಕಾಳಜಿ ಇರುವುದಾರೆ 5 ಎಕರೆ ಜಾಗವನ್ನು ಪುರಸಭೆ ನೀಡಲಿ ಎಂದು ಒತ್ತಾಯಿಸಿದರು.

ಪ್ರಾಂತ್ಯವಾರು ಯಾವ ಪಕ್ಷಕ್ಕೆ ಎಷ್ಟು ಸೀಟು.? ಬೆಂಗಳೂರು ನಗರ

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ ಧರಣಿ ನಿರತರ ಜೊತೆ ಮಾತುಕಥೆ ನಡೆಸಿ ನಂತರ ಮಾತನಾಡಿದ ಪುರಸಭಾ ಅಧ್ಯಕ್ಷ ಕಾಡಪ್ಪನವರು,ಪುರಸಭಾ ವ್ಯಾಪ್ತಿಯ 23 ವಾರ್ಡ್ ಗಳಲ್ಲಿ ಕಡುಬಡವರಿಗೆ ನಿವೇಶನ ಹಾಗೂ ವಸತಿ ನೀಡುವ ಸಲುವಾಗಿ 2014 ರಲ್ಲಿ ಸ.ನಂ 119 ಮತ್ತು 200/2 ರಲ್ಲಿ ಒಟ್ಟು 14 ಎಕರೆ ಜಾಗವನ್ನು ಖರೀದಿ ಮಾಡಲಾಗಿತ್ತು.ಆದರೆ ಜಾಗ ನೀಡಿದ ಸಂಬಧಿಕರು ಮಾರಾಟ ಮಾಡಿದ ಜಾಗಕ್ಕೆ ತಕರಾರು ತೆಗೆದ ಹಿನ್ನಲೆಯಲ್ಲಿ ಇಲ್ಲಿವರೆಗೂ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿದೆ ಇದರಿಂದ ನಿವೇಶನ ಹಾಗೂ ವಸತಿ ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ.ನ್ಯಾಯಲಯದಲ್ಲಿರುವ ಪ್ರಕರಣ ಸಂಬಂಧ ಪುರಸಭೆ ಈಗಾಗಲೇ ಜಾಗದ ಸಮಸ್ಯೆ ಇತ್ಯರ್ಥಕ್ಕೆಹೈಕೋರ್ಟ್ ನಲ್ಲಿ ಮತ್ತೊಮ್ಮೆ ದಾವೆ ಹೂಡಲಾಗಿದ್ದು ಪ್ರಕರಣ ಶೀಘ್ರ ಬಗೆಹರಿಯುವ ವಿಶ್ವಾಸವಿದೆ ಎಂದರು.ನಿವೇಶನ ಹಾಗೂ ವಸತಿ ರಹಿತರ ಅಯ್ಕೆ ಪಟ್ಟಿಯನ್ನು ಪುರಸಭೆ ಮಾಡುವುದಿಲ್ಲ ಅದಕ್ಕಾಗಿಯೇ ಆಶ್ರಯ ಸಮಿತಿಯಿಂದ ಸುಖಸುಮ್ಮನೆ ಪುರಸಭೆ ಮೇಲೆ ಆರೋಪ ಹೊರಿಸುವುದು ಸೂಕ್ತವಲ್ಲವೆಂದು ತಿಳಿಸಿದರು.

ಬೂಸ್ಟರ್ ಡೋಸ್ ತೆಗೆದುಕೊಂಡವರಿಗೆ ಮೂಗಿನ ಲಸಿಕೆ ನೀಡಲಾಗುವುದಿಲ್ಲ..!

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಎಡೇಹಳ್ಳಿ ಮಂಜುನಾಥ್,ಪಟ್ಟಣ ವರ್ತಕರ ಸಂಘದ ಅಧ್ಯಕ್ಷ ಎಚ್.ಎಚ್.ಉದಯ್,ಕಾಂಗ್ರೇಸ್ ಜಿಲ್ಲಾ ಕಾರ್ಮಿಕರ ಘಟಕದ ಅಧ್ಯಕ್ಷ ವಿಜಿ ಕುಮಾರ್,ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಕೌಡಳ್ಳಿ ಲೋಹಿತ್,ತಾಲ್ಲೂಕು ಯೂತ್ ಕಾಂಗ್ರೇಸ್ ಅಧ್ಯಕ್ಷ ನದೀಮ್,ಕಾಂಗ್ರೇಸ್ ಮುಖಂಡರುಗಳಾದ,ಜಯರಾಜ್,ಯುನಸ್,ಹೊಸಕೊಪ್ಪಲು ಚರಣ್ ,ಜಗದೀಶ್ ಉಪಸ್ಥಿತರಿದ್ದರು.

ಎತ್ತಿನಹೊಳೆ ಯೋಜನೆಗೆ ಪಡೆದಿರುವ ಜಮೀನಿಗೆ ಬೇಡಿಕೆಯಷ್ಟು ಪರಿಹಾರ ಸಿಗದ ಕಾರಣ ಪ್ರತಿಭಟನೆ..

ಮಧ್ಯಾಹ್ನದ ವೇಳೆ ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಉಪವಿಭಾಗಾಧಿಕಾರಿ ಅನ್ ಮೋಲ್ ಜೈನ್ ಪುರಸಭೆ ಅಧಿಕಾರಿಗಳಿಂದ ಪಟ್ಟಣದ ನಿವೇಶನ ಹಾಗೂ ವಸತಿ ರಹಿತರ ಪಟ್ಟಿ ತರಿಸಿಕೊಂಡು ಪರಿಶೀಲನೆ ನಡೆಸಿದರು.ಈ ವೇಳೆ ಈ ಹಿಂದೆ ಪುರಸಭೆಯಿಂದ ನಿವೇಶನ ರಹಿತರಿಗಾಗಿ ಖರೀದಿಸಿದ ಜಾಗ ದಾಖಲಾತಿಯಲ್ಲಿ ಲೋಪವಿರುವುದು ಕಂಡು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.ಕೆಲ ಸಮಯ ಧರಣಿ ನಿರತರೊಂದಿಗೆ ಸಮಾಲೋಚನೆ ನಡೆಸಿ ತೆರಳಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಪ್ರತಿಭಟನಾಕಾರರು ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಹಿಂಪಡೆಯುವುದಿಲ್ಲ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಮನವಿ ಸ್ವೀಕರಿಸಬೇಕು ಇಲ್ಲದಿದ್ದರೆ ಹೋರಾಟದ ಹಾದಿ ವಿನೂತನವಾಗಲಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

” ಕರಾವಳಿ ದರ್ಶನ ಜಸ್ಟ್ 300 ರೂಪಾಯಿ” ಪ್ರವಾಸ ಅನುಭವ – ಸಂಗಮೇಶ್ ಮೆಣಸಿನಕಾಯಿ

ಕರ್ನಾಟಕ ಟಿವಿ ಡಿಸೆಂಬರ್ ಸಮೀಕ್ಷೆ | ದಾವಣಗೆರೆಯ 7 ಕ್ಷೇತ್ರಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ

- Advertisement -

Latest Posts

Don't Miss