ಸಕಲೇಶಪುರ: ಆನೆ ದಾಳಿಗೆ ಒಂಟಿ ಮನೆ ಧ್ವಂಸ ಮನೆಗಳ ಮೇಲಿನ ದಾಳಿ ತೀವ್ರಗೊಳಿಸಿದ ಒಂಟಿ ಕಾಡಾನೆ…!

Hassan News:

ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆ ಸುತ್ತಮುತ್ತ ಒಂಟಿ ಕಾಡಾನೆಯ ಉಪಟಳ ಹೆಚ್ಚಾಗಿದ್ದು ಭತ್ತಕ್ಕಾಗಿ ಮನೆಯನ್ನು ಧ್ವಂಸಗೊಳಿಸಿರುವ ಘಟನೆ ನೆಡೆದಿದೆ.ಬಾಳ್ಳುಪೇಟೆ ಸಮೀಪದ ಹಸುಗವಳ್ಳಿ(ಕೊಪ್ಪಲು) ಗ್ರಾಮದ ಧರ್ಮಪ್ರಕಾಶ್ ರವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತವನ್ನು ತಿನ್ನಲು ಮನೆಯ ಬಾಗಿಲು, ಕಿಟಕಿ, ಮೇಲ್ಚಾವಣಿ, ಶಿಟ್ ಗಳನ್ನು ಸಂಪೂರ್ಣ ಹೊಡೆದು ನಾಶ ಪಡಿಸಿದೆ.

ಭಾನುವಾರ ರಾತ್ರಿ ಘಟನೆ ನೆಡೆದಿದ್ದು ಮನೆಯ ಮೇಲೆ ಕಾಡಾನೆ ದಾಳಿ ವೇಳೆ ಮನೆಯಲ್ಲಿದ್ದವರು ಓಡಿ ಹೋಗಿ ಮನೆಯ ಅಟ್ಟದ ಮೇಲೆ ಆಶ್ರಯ ಪಡೆದುಕೊಂಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಇದೆ ಮನೆಯ ಹತ್ತಿರ ಬಂದು ಹೋಗಿದ್ದ ಆನೆ ಪುನಃ ಬಂದು ಮನೆ ಮೇಲೆ ದಾಳಿ ನೆಡೆಸಿದೆ. ಸುಮಾರು 1 ಲಕ್ಷ ರೂಪಾಯಿ ಖರ್ಚುವಾಗುವಷ್ಟು ಮಟ್ಟಿಗೆ ಕಾಡಾನೆ ಮನೆಯನ್ನು ಧ್ವಂಸಗೊಳಿಸಿದೆ ಎಂದು ರೈತ ಧರ್ಮ ಪ್ರಕಾಶ್ ತಿಳಿಸಿದ್ದಾರೆ.ಈ ಮಕ್ನ ಆನೆಯು ಕಳೆದ 10 ದಿನಗಳಿಂದ ಮೆಣಸಮಕ್ಕಿ, ಹಸುಗವಳ್ಳಿ, ಚಿಕ್ಕನಾಯಕನಹಳ್ಳಿ, ನೀಡನೂರು ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದು ಅಪಾರ ಪ್ರಮಾಣದ ಭತ್ತದ ಬೆಳೆಯನ್ನು ನಾಶ ಮಾಡಿದೆ. ಆಕ್ರಮಣಕಾರಿ ಮನೋಭಾವವುಳ್ಳ ಈ ಒಂಟಿ ಕಡೆನೇನು ಸರಿ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾಡಾನೆಯಿಂದ ದಾಳಿಗೊಳಗಾದ ಮನೆಗೆ ಭೇಟಿ ನೀಡಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಎದುರೇ ಕೈ ಕೈ ಮಿಲಾಯಿಸಿದ ಗ್ರಾಮಸ್ಥರು

ಕೋಲಾರದಲ್ಲಿ ಜೆ.ಡಿ.ಎಸ್ ಗೆಲ್ಲೋದು ಪಕ್ಕಾ..!: ಹೆಚ್.ಡಿ.ಕೆ

About The Author