Tuesday, August 5, 2025

Latest Posts

ಕೊರಿಯರ್ ಶಾಪ್‌ನಲ್ಲಿ ಮಿಕ್ಸಿ ಸ್ಪೋಟ ಪ್ರಕರಣ : ಎಫ್‌ಎಸ್‌ಎಲ್ ತಂಡ ಪರಿಶೀಲನೆ

- Advertisement -

ಹಾಸನ: ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದ ಕೋರಿಯರ್ ಅಂಗಡಿಯೊoದರಲ್ಲಿ ನಿನ್ನೆ ಸಂಜೆ ಸ್ಫೋಟ ಸಂಭವಿಸಿ, ಅಲ್ಲಿದ್ದ ಹಲವು ವಸ್ತುಗಳಿಗೆ ಹಾನಿಯಾಗಿದೆ. ಮತ್ತು ಅಲ್ಲಿಯ ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಪೋಟದ ಸ್ಥಳದಲ್ಲಿ ಕೆಲವು ವಸ್ತುಗಳನ್ನು ತಂಡ ಸಂಗ್ರಹಿಸಿದೆ. ಮೈಸೂರಿನಿಂದ ಹಾಸನಕ್ಕೆ ಆಗಮಿಸಿ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿದ್ದಾರೆ.
ಹಾಸನ ಎಸ್ಪಿ ಹರಿರಾಂ ಶಂಕರ್ ಕೂಡ ಎಫ್‌ಎಸ್‌ಎಲ್ ತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಶಶಿ ಎಂಬಬುವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇಂದು ಬಾಂಬ್ ಸ್ಕ್ವಾಡ್ ತಂಡ ಬೆಂಗಳೂರಿನಿಂದ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ.

ಹಾಸನದ ಕೋರಿಯರ್ ಅಂಗಡಿಯಲ್ಲಿ ಸ್ಫೋಟ

ಇಂದು ಮಾಕ್ ಡ್ರಿಲ್‌ ನಡೆಸಲಿರುವ ಭಾರತ : ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಭಾಗಿ

ಇಂದಿನಿಂದ ಡಿ. 29ರವರೆಗೆ ಕರ್ನಾಟಕದಲ್ಲಿ ಹಲವೆಡೆ ಮಳೆ..!

- Advertisement -

Latest Posts

Don't Miss