Sunday, September 8, 2024

Latest Posts

ಕಾಡಾನೆಯಿಂದ ದಾಳಿಗೊಳಗಾದ ಮನೆಗೆ ಭೇಟಿ ನೀಡಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ

- Advertisement -

Hassan News:

ಸಕಲೇಶಪುರ : ಕಳೆದ ಎರಡು ದಿನಗಳ ಹಿಂದೆ ಒಂಟಿ ಕಾಡಾನೆ(ಮಕನ) ತಾಲೂಕಿನ ಬಾಳುಪೇಟೆಯ ಹಸುಗವಳ್ಳಿ ( ಕೊಪ್ಪಲು) ಗ್ರಾಮದ ಧರ್ಮ ಪ್ರಕಾಶ್ ಎಂಬುವರ ಮನೆಗೆ ದಾಳಿ ನಡೆಸಿ ಧ್ವಂಸಗೊಳಿಸಿದ ಮನೆಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ಮಂಗಳವಾರ ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಾಡಾನೆಗಳ ಉಪಟಳ ತಾಲೂಕಿನ ಎಲ್ಲೆಡೆ ಮಿತಿಮೀರಿದು ಸರ್ಕಾರ ಕೇವಲ ಭರವಸೆಗಳನ್ನು ನೀಡಿದರೆ ಸಾಲದು ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ಹಳೆ DFO ವರ್ಗಾವಣೆಯಾಗಿದ್ದಾರೆ ಇದೀಗ ಹೊಸಬರು ಬಂದಿದ್ದಾರೆ ಯಾರೇ ಬಂದರೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಎಂದು ಒತ್ತಾಯಿಸಿದರು.
ಹಾನಿಗೊಳಗಾಗಿರುವ ಮನೆಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ರಾತ್ರಿ ವೇಳೆ ಉಪಟಳ ನೀಡುತ್ತಿರುವ ಒಂಟಿ ಕಾಡನೆ ಕಳೆದು ಒಂದು ವಾರದಿಂದ ಈ ಭಾಗದಲ್ಲಿ ಬೀಡು ಬಿಟ್ಟಿದ್ದು ಸಾರ್ವಜನಿಕರು ಭಯ ಬೀತರಾಗಿದ್ದಾರೆ ಆದ್ದರಿಂದ ಕೂಡಲೇ ಈ ಉಪಟಳ ನೀಡುತ್ತಿರುವ ಮಕ್ನ ಆನೆಯನ್ನು ಸೆರೆ ಹಿಡಿಯುವಂತೆ ಈ ವೇಳೆ ಆಗ್ರಹಿಸಿದರು.
ಒಂಟಿ ಕಾಡಾನೆಯಿಂದ ಬೆಳೆ ನಾಶ, ಮನೆ ದ್ವಂಸ ಹಾಗೂ ಪ್ರಾಣ ಭೀತಿಯು ಹೆಚ್ಚಾಗಿದ್ದು ಈ ವಿಚಾರವಾಗಿ ಇಂದು ಬೆಂಗಳೂರಿಗೆ ತೆರಳುತ್ತಿದ್ದು ಮುಖ್ಯಮಂತ್ರಿ ಹಾಗೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸುತ್ತೇನೆ ಎಂದರು.ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ ಈ ಸಭೆಗೆ ಯಾವುದೇ ಜನಪ್ರತಿನಿಧಿಗಳನ್ನು ಕರೆಯದೆ ಸಭೆ ನಡೆಸುವುದರಿಂದ ಯಾವ ಪ್ರಯೋಜನವಿದೆ ಎಂದು ಅಸಮಾಧಾನ ಹೊರಹಾಕಿದರು.

ಈಗಾಗಲೇ ಪ್ರಧಾನ ಸಂರಕ್ಷಣಾಧಿಕಾರಿಗಳ ಕಚೇರಿಯನ್ನು ಹಾಸನಕ್ಕೆ ವರ್ಗಾವಣೆ ಮಾಡಿದ್ದಾರೆ ಆದರೆ ಇದುವರೆಗೂ ಅವರು ಅಧಿಕಾರ ವಹಿಸಿಕೊಂಡು ಕಚೇರಿಯನ್ನು ತೆರೆದಿಲ್ಲ ಸಕಲೇಶಪುರದಲ್ಲಿ ಪ್ರವಾಸಿ ಮಂದಿರಗಳಿವೆ ಅಲ್ಲಿಗೆ ಬಂದು ತಾತ್ಕಾಲಿಕವಾಗಿ ಕಚೇರಿ ತೆರೆದು ಇಲ್ಲಿರುವ ಸಮಸ್ಯೆಯನ್ನು ವಾಸ್ತವವಾಗಿ ಅಧಿಕಾರಿಗಳು ಅರಿತು ಕೊಳ್ಳುವುದು ಉತ್ತಮ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಈ ವೇಳೆ ಸ್ಥಳದಲ್ಲೇ ಉಪ ಸಂರಕ್ಷಣಾಧಿಕಾರಿಗಳಿಗೆ ದೂರವಾಣಿ ಕರೆ ಮುಖಾಂತರ ಮಾತನಾಡಿದ ಶಾಸಕರು ತಕ್ಷಣವೇ ಸ್ಥಳಕ್ಕೆ ಧ್ವಂಸಗೊಂಡಿರುವ ಮನೆಯನ್ನು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆಸೂಚಿಸಿದರು.ಈ ಸಂದರ್ಭದಲ್ಲಿ ಬಾಳ್ಳುಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸ್ವಾಮಿ, ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಲೋಕೇಶ್, ಜೆಡಿಎಸ್ ಯುವ ಮುಖಂಡ ಉದೀಶ್ ಸೇರಿದಂತೆ ಮುಂತಾದವರಿದ್ದರು.

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಎದುರೇ ಕೈ ಕೈ ಮಿಲಾಯಿಸಿದ ಗ್ರಾಮಸ್ಥರು

ಕೋಲಾರದಲ್ಲಿ ಜೆ.ಡಿ.ಎಸ್ ಗೆಲ್ಲೋದು ಪಕ್ಕಾ..!: ಹೆಚ್.ಡಿ.ಕೆ

ಕರ್ನಾಟಕದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

- Advertisement -

Latest Posts

Don't Miss