ಅರಸೀಕೆರೆ ಕ್ಷೇತ್ರದ ಗೊಂದಲ ನಿವಾರಿಸಲು ಜೆಡಿಎಸ್ ಕಾರ್ಯಕರ್ತರಿಂದ ಆಗ್ರಹ : ಸಮಾಧಾನಪಡಿಸಲು ಹೆಚ್.ಡಿ. ರೇವಣ್ಣ ಹರಸಾಹಸ

ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ್ರು ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಹಿನ್ನೆಲೆ ಕ್ಷೇತ್ರದ ಗೊಂದಲ ನಿವಾರಣೆ ಮಾಡುವಂತೆ ಜೆಡಿಎಸ್ ಕಾರ್ಯಕರ್ತರು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಮುಂದೆ ತಮ್ಮ ಅಳಲು ತೋಡಿಕೊಂಡಿದಲ್ಲದೇ ಆಗ್ರಹಿಸಿದರು. ನಗರದ ಸಂಸದರ ನಿವಾಸಕ್ಕೆ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಆಗಮಿಸಿದಾಗ ಸ್ಥಳಕ್ಕೆ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಮುಖಂಡರು ನೂರಾರು ಸಂಖ್ಯೆಯಲ್ಲಿ ಆಗಮಿಸಿದರು ಆವರಣದಲ್ಲಿ ಚೇರ್ ಹಾಕಿಕೊಂಡು ಸಮಸ್ಯೆ ಆಲಿಸಿದರು. ಈ ವೇಳೆ ಕೆಲವರು ಏರು ಧ್ವನಿಯಲ್ಲಿಯೇ ಪ್ರಶ್ನೆ ಮಾಡಿದ ಪ್ರಸಂಗವು ಕೂಡ ನಡೆಯಿತು. ಶಿವಲಿಂಗೇಗೌಡರು, ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಊಹಾಪೋಹ ಕ್ಷೇತ್ರದಾದ್ಯಂತ ಹರದಾಡುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಅವರ ನಡೆಯೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಬೇಕಿದ್ದರೆ ಕೆ.ಎಂ. ಶಿವಲಿಂಗೇಗೌಡ ಅವರನ್ನೇ ಉಳಿಸಿಕೊಳ್ಳಲಿ ಇಲ್ಲ ರೇವಣ್ಣ ಅವರ ಕುಟುಂಬದಿಂದ ಯಾರಾದರೂ ಸ್ಪರ್ಧಿಸಲಿ. ಒಟ್ಟಿನಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸುವಂತೆ ಒತ್ತಾಯ ಮಡಲಾಯಿತು.

ಕರ್ಮವನ್ನು ನಂಬಿದ ಕರ್ಣ..!

ಹಲವು ತಿಂಗಳುಗಳಿಂದ ಜೆಡಿಎಸ್ ಪಕ್ಷದ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಅಂತರ ಕಾಯ್ದುಕೊಂಡಿರುವ ಶಿವಲಿಂಗೇಗೌಡ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಗೊಂದಲದಲ್ಲಿದ್ದು, ಇದನ್ನು ನಿವಾರಣೆ ಮಾಡಬೇಕು ಎಂದು ಕೋರಿದರು. ಜೆಡಿಎಸ್ ಸ್ಥಳೀಯ ಮುಖಂಡರಾದ ಗಂಗಾಧರ್, ಕೆ.ಬಿ.ಕೇಶವಮೂರ್ತಿ ಅವರ ನೇತೃತ್ವದಲ್ಲಿ ಆಗಮಿಸಿದ್ದ ನೂರಾರು ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು, ಶಿವಲಿಂಗೇಗೌಡ ಅವರು ಏನೇ ಕಾರ್ಯಕ್ರಮ ಮಾಡಿದರೂ, ಅದರಲ್ಲಿ ಜೆಡಿಎಸ್ ಬಾವುಟ ಬಳಸುತ್ತಿಲ್ಲ ಎಂದು ಆರೋಪಿಸಿದರು. ಹೀಗಿದ್ದರೂ ಅವರ ಬಗ್ಗೆ ಮೃಧು ಧೋರಣೆ ಏಕೆ ಎಂದು ಕೆಲವರು ಪ್ರಶ್ನೆ ಮಾಡಿದರು.

ನಮಗೆ ಸ್ಫೂರ್ತಿ ನೀಡುವ ಕರ್ಣನ ಶ್ರೇಷ್ಠ ಗುಣಗಳು..!

ಜೆಡಿಎಸ್ ಪಕ್ಷದಿಂದ ಗೆದ್ದು, ಯಾವುದೇ ಕಾರ್ಯಕ್ರಮದಲ್ಲೂ ಮಾತೃ ಪಕ್ಷದ ಬಾವುಟ ಬಳಸದ ಶಿವಲಿಂಗೇಗೌಡ ಅವರು, ಜೆಡಿಎಸ್ ಕಾರ್ಯಕರ್ತರಿಗಿಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹೆಚ್ಚು ಸ್ಪಂದಿಸುತ್ತಿದ್ದಾರೆ. ಅಷ್ಟೇ ಅಲ್ಲ ಯಾವುದೇ ಕಾರ್ಯಕ್ರಮಗಳಿಗೂ ಜೆಡಿಎಸ್ ಕಾರ್ಯಕರ್ತರನ್ನು ಆಹ್ವಾನಿಸುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ಮಣೆ ಹಾಕುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಚ್ಚು ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ ಎಂದು ಕಾರ್ಯಕರ್ತರು ತಮ್ಮ ಆಕ್ರೋಶ ಹೊರ ಹಾಕಿದರು. ರೇವಣ್ಣನವರ ಎದುರೇ ಕಾರ್ಯಕರ್ತರು ಕೂಗಾಡಿದರು. ಈವೇಳೆ ಸಮಧಾನ ಮಾಡಲು ರೇವಣ್ಣನವರು ಮುಂದಾದರು. ೨೦೨೩ರ ಚುನಾವಣೆ ಸಮೀಪ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚಾಗುತ್ತಿದ್ದು, ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಒತ್ತಡ ಕಂಡು ಬರುತ್ತಿದೆ.

ಚಳಿಗಾಲದಲ್ಲಿ ಧ್ಯಾನ ಮಾಡಿದರೆ ಅದ್ಭುತ ಫಲಿತಾಂಶ ಸಿಗುತ್ತದೆ.. ವರ್ಕ್ ಔಟ್ ಗಿಂತ ಸೂಪರ್ ಫಲಿತಾಂಶ..

ರೆಡ್ ವೈನ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ..? ಪರಿಶೋದನೆಯಲ್ಲಿ ಸಂಚಲನ ವಿಷಯಗಳು..!

About The Author