ಹಾಸನ: ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ವಳಲಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಮಾಜಿಶಾಸಕ ಮತ್ತು ಹಾಲಿಶಾಸಕರ ನಡುವೆ ವಾಗ್ವಾದ ನಡೆದಿದೆ. ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಎಂ.ವಿಶ್ವನಾಥ್ ನಡುವೆ ಟಾಕ್‌ಫೈಟ್ ನಡೆದಿದ್ದು, ಪ್ರತಿಭಟನೆ ವೇಳೆ ಶಾಸಕ ಕುಮಾರಸ್ವಾಮಿ ಅವರನ್ನು ಹೆಚ್.ಎಂ. ವಿಶ್ವನಾಥ್ ಟೀಕಿಸಿದ್ದಾರೆ. ಮಾಜಿ ಶಾಸಕರಿಗೆ ಸರ್ಕಾರ 55 ಸಾವಿರ ಪೆನ್ಷನ್, ಓಡಾಡೋದಿಕ್ಕೆ 1 ಲಕ್ಷ ಕೊಡುತ್ತಾರೆ. ಒಂದು ಬಸ್ ಪಾಸ್ ಕೊಟ್ಟಿದ್ದಾರೆ, ಇಬ್ಬರ ಜೊತೆ ರಾಜ್ಯದಲ್ಲಿ ಎಲ್ಲಿ ಬೇಕಾದರು ಸರ್ಕಾರಿ ಬಸ್‌ನಲ್ಲಿ ಓಡಾಡಬಹುದು. ಹಾಲಿ ಶಾಸಕರಿಗೆ 4.5 ಲಕ್ಷ ಪ್ರತಿ ತಿಂಗಳಿಗೆ ಅವರ ಖಾತೆಗೆ ಬರುತ್ತದೆ ಎಂಬ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರು ನಿಜ ಹೇಳಿ ಎಲ್ಲಿಂದ ಬರುತ್ತದೆ ನಾಲ್ಕೂವರೆ ಲಕ್ಷ ರೂಪಾಯಿ ಸತ್ಯ ಹೇಳಿ ಎಂದು ಶಾಸಕ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಲ್ಲ ಬೆರೆಸಿ ಹಾಲು ಕುಡಿದರೆ ಚಳಿಗಾಲದಲ್ಲಿ ಬರುವ ಈ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು..!
ಇದರಿಂದ ಕೆಂಡಾಮಂಡಲರಾದ ಹೆಚ್.ಎಂ.ವಿಶ್ವನಾಥ್ ನಿಮಗೇನು ಕೆಲಸ ಇದೆ ಇಲ್ಲಿ, ಶಾಸಕನಾಗಿ ಕೆಲಸ ಮಾಡಿ. ಜನರು ನಿಮ್ಮನ್ನು ಮಾತಾನಾಡಲು ಕರೆಸಿಲ್ಲ. ಜನ ಚಳುವಳಿ, ಹೋರಾಟ ಮಾಡ್ತಿರೋದು ನಿಮ್ಮಗಳ ವಿರುದ್ದವೇ. ನೀವೇಲ್ಲ ಸರಿಯಿದ್ದರೆ ಆನೆಗಳು ಇಲ್ಲಿ ಬರುತ್ತಿರಲಿಲ್ಲವೆಂದು ತರಾಟೆಗೆ ತೆಗೆದುಕೊಂಡರು. ಇಬ್ಬರ ನಡುವೆ ಮಾತಿನ ಗುದ್ದಾಟ ನಡೆದೇ ಇತ್ತು. ಹಾಲಿ ಶಾಸಕ ಮತ್ತು ಮಾಜಿ ಶಾಸಕರ ನಡುವಿನ ಕಿತ್ತಾಟ ಕಂಡು ಪ್ರತಿಭಟನಾಕಾರರು ಮೂಕ ಪ್ರೇಕ್ಷಕರಾದರು.
ನಾನ್ ವೆಜ್ ನಲ್ಲಿ ಯಾವುದು ಉತ್ತಮ..ಸೀ ಫುಡ್ಸ್ ನ ಆರೋಗ್ಯಕಾರಿ ಲಾಭಗಳು..!