Thursday, December 12, 2024

Latest Posts

ನ.26 ರಂದು ರೋಟರಿ ಪ್ರತಿಷ್ಠಾನ-ಪೋಲಿಯೋ ಪ್ಲಸ್ ಜಿಲ್ಲಾ ಮಟ್ಟದ ವಿಚಾರ ಸಂಕೀರಣ

- Advertisement -

ಹಾಸನ: ನಗರದ ಹೊರವಲಯದಲ್ಲಿರುವ ಪವನಪುತ್ರ ರೆಸಾರ್ಟ್ ನಲ್ಲಿ ನವೆಂಬರ್ 26ರ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ರೋಟರಿ ಜಿಲ್ಲೆ 3,182ರ ವಲಯ ಒಂಭತ್ತರ ಹನ್ನೊಂದು ರೋಟರಿ ಕ್ಲಬ್ಬುಗಳು ಜಂಟಿಯಾಗಿ ಜಿಲ್ಲಾ ಗವರ್ನರ್, ಗೌರವಾನ್ವಿತ ಡಾ ಎಚ್ ಜಿ ಗೌರಿಯವರ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಆಸಿಸ್ಟೆಂಟ್ ಗವರ್ನರ್ ಡಾ. ಪ್ರೀತಿ ಮೋಹನ್ ರವರ ನೇತೃತ್ವದಲ್ಲಿ ರೋಟರಿ ಪ್ರತಿಷ್ಠಾನ ಮತ್ತು ಪೋಲಿಯೋ ಪ್ಲಸ್ ಜಿಲ್ಲಾ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ರೋಟರಿ ಜಿಲ್ಲಾ ಜಂಟಿ ಕಾರ್ಯದರ್ಶಿ ಡಾ. ಸುದೀರ್ ಮತ್ತು ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೀತಿ ಮೋಹನ್ ತಿಳಿಸಿದರು.​ ​ ​

​ ​ ​ ​ದೆಹಲಿಯ ಜಾಮಾ ಮಸೀದಿಯಲ್ಲಿ ‘ಹುಡುಗಿಯರ’ ಪ್ರವೆಶಕ್ಕೆ ನಿಷೇಧ

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಹಾಸನದ ಪವನಪುತ್ರ, ರೆಸಾರ್ಟ್ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ 800 ಕ್ಕೂ ಹೆಚ್ಚು ರೋಟರಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ರೋಟರಿಯ ಮಾಜಿ ಅಂತಾರಾಷ್ಟ್ರೀಯ ಅಧ್ಯಕ್ಷರೂ, ರೋಟರಿ ಫೌಂಡೇಶನ್ನಿನ ಪೂರ್ವಧ್ಯಕ್ಷರೂ ಆದ ರೊ. ಕೆ.ಕೆ. ರವೀಂದ್ರನ್ ನೆರೆಯ ಶ್ರೀಲಂಕಾದಿಂದ ಆಗಮಿಸಿ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ತರಬೇತುದಾರರಾದ ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿಯವರು ಸಮನ್ವಯಕಾರರಾಗಿ ಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ. ನಮ್ಮ ಪರಿಸರದಲ್ಲಿ ವಿವಿಧ ಮಾನವೀಯ ಮೌಲ್ಯದ ಶಾಶ್ವತ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಈ ಅರ್ಪಣಾ ರೋಟರಿ ಫೌಂಡೇಶನ್ ಮತ್ತು ಪೋಲಿಯೋ ಪ್ಲಸ್ ಜಿಲ್ಲಾ ವಿಚಾರ ಸಂಕಿರಣ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರೀತಿ ಮೋಹನ್ ಹೇಳಿದರು.

ನಿಮ್ಮ ಮನೆಯಲ್ಲಿ ಸಂತೋಷವನ್ನು ನೀವು ಬಯಸಿದರೆ, ತಕ್ಷಣವೇ ಈ ಹೂವುಗಳನ್ನು ತೆಗೆದುಹಾಕಿ..!

ಪ್ರತಿಷ್ಠಾನದ ಯಶೋಗಾಥೆ ಮತ್ತು ಸಾರ್ಥಕ್ಯದ ಕ್ಷಣಗಳನ್ನು ಮೆಲುಕು ಹಾಕುತ್ತಾ ಇನ್ನಷ್ಟು ಸ್ಫೂರ್ತಿ ಪಡೆಯುವುದು ಮತ್ತು ಪ್ರತಿಷ್ಠಾನದ ಜನೋಪಯೋಗಿ ಕಾರ್ಯಯೋಜನೆಗಳನ್ನು ಕೃತಜ್ಞತೆಯಿಂದ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಲಯದ ಅಸಿಸ್ಟೆಂಟ್ ಗವರ್ನರ್ ಡಾ. ಪ್ರೀತಿ ಮೋಹನ್,​ ​ ಕಾರ್ಯದರ್ಶಿ ಡಾ ತೇಜಸ್ವಿ ಹೆಚ್ . ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳ ಅಧ್ಯಕ್ಷರಾದ ರೊ ರಘುನಂದನ್, ಮೋಹನ್, ಲಲಿತಕುಮಾರ್ ಇತರರು ಉಪಸ್ಥಿತರಿದ್ದರು.

ಐಹೊಳೆಯ ಚರಿತ್ರೆ ಸಾರುವ ‘ಐಹೊಳೆ’ ಚಿತ್ರದ ಹಾಡುಗಳು

- Advertisement -

Latest Posts

Don't Miss