Hassan News : ಅರಸೀಕೆರೆ ತಾಲೂಕಿನ (ಪನ್ನಸಮುದ್ರ ಬಳಿ) ಹೊನ್ನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಋಷಿ ಮುನಿಗಳು ಉಪಯೋಗಿಸಿರುವ ವಸ್ತುಗಳು ಜೋಡಿಸಿಟ್ಟಿರುವ ರೀತಿ ವಿಸ್ಮಿಯ ಘಟನೆ ನಡೆದಿದೆ.
ಹಾಸನ ಜಿಲ್ಲೆ ಅರಸೀಕೆರೆ ತಿಪಟೂರು ನ್ಯಾಷನಲ್ ಹೈವೇ 206 ಹೋಗುವ ರಸ್ತೆ ಪಕ್ಕ ಹೊನ್ನ ಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗುವ ಬೋರೇಗೌಡರಿಗೆ ಸೇರುವ ಜಮೀನಿನಲ್ಲಿ ಋಷಿಮುನಿಗಳು ಉಪಯೋಗಿಸುವಂತ ವಸ್ತುಗಳು ಸರಿಸಮಾನವಾಗಿ ಜೋಡಿಸಿರುವ ರೀತಿಯಲ್ಲಿ ಕಂಡುಬಂದಿದ್ದು ಇಂದು ಬೆಳಿಗ್ಗೆ 7ಗಂಟೆಗೆ ಗ್ರಾಮಸ್ಥರು ರಸ್ತೆಯಲ್ಲಿ ಹೋಗುವಾಗ ಕಂಡು ಶೆಟ್ಟಿಹಳ್ಳಿ ಗ್ರಾಮಸ್ಥರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ನಂತರ ಈ ವಿಚಾರವನ್ನು ಗ್ರಾಮಾಂತರ ಠಾಣೆ ಅವರು ನೋಡಿಕೊಂಡು ಹೋಗಿರುವುದಾಗಿ ಮೂಲಗಳು ತಿಳಿಸುವೆ.
ಈ ವಿಷಯವನ್ನು ತಿಳಿದ ಕೂಡಲೇ ಅಕ್ಕ ಪಕ್ಕ ಗ್ರಾಮಗಳಾದ,, ಪನ್ ಸಮುದ್ರ ,, ಆದಿಹಳ್ಳಿ ,,ಎಚ್ ಎಸ್ ಬಿ ಕಾಲೋನಿ ,,ಸುಳೆಕೆರೆ ,,ಗ್ರಾಮದಿಂದ ನೂರಾರು ಜನರು ವಿಷಯ ತಿಳಿದು ಜಮಾಯಿಸಿದರು
ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಅಲ್ಲಿರುವ ಜನರು ಕೆಲವು ಋಷಿಮುನಿಗಳು ರಾತ್ರಿ ಸಮಯದಲ್ಲಿ ತಪಸ್ಸು ಮಾಡಿ ಹೋಗಿರಬಹುದು ಎಂದು ಇನ್ನು ಕೆಲವರು ಇದರ ಬಗ್ಗೆ ನಮಗೆ ಏನು ಗೊತ್ತಿಲ್ಲ ಎಂದು ವಿಷಯ ತಿಳಿಸಿದ್ದು ಇನ್ನು ಕೆಲವರು ಕೆರೆ ಕೋಡಿ ಶ್ರೀಗಳಿಗೆ ವಿಚಾರ ತಿಳಿಸುವುದಾಗಿ ತಿಳಿಸಿದರು
ಸುಮಾರು 12 ಜೊತೆ ಪಾದುಕೆಗಳು ಹಾಗೂ 28 ಕಮಂಡಲಗಳು ಇವೆ..
ಇಷ್ಟೊಂದು ಬೆಲೆಬಾಳುವ ಮರಗಳಿಂದ ತಯಾರಿಸುವಂತಹ ವಸ್ತುಗಳನ್ನು ನೋಡಿ ಜನರು ರಾತ್ರಿ ಹೊತ್ತಿನಲ್ಲಿ ಋಷಿಮುನಿಗಳು ತಪಸ್ಸು ಮಾಡಿ ಹೋಗಿರಬಹುದು ಎಂದು ಮಾತಾಡಿಕೊಂಡು ಇದು ಒಂದು ವಿಸ್ಮಯ ಎಂದುಕೊಂಡಿದ್ದಾರೆ.
ಹಾಸನದಲ್ಲಿ ಆಪರೇಷನ್ ಹಸ್ತ: ಕಾಂಗ್ರೆಸ್‌ಗೆ ಬಂದ 20ಕ್ಕೂ ಹೆಚ್ಚು ಜೆಡಿಎಸ್ ಮುಸ್ಲೀಂ ಮುಖಂಡರು..
ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದು, ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು