State News:
ಪ್ರಶಾಂತ್ ನಾಗರಾಜ್ ಸಾವಿನಿಂದ ತೆರವಾಗಿದ್ದ ಹಾಸನ ನಗರಸಭೆ ೧೬ನೇ ವಾರ್ಡ್ ಸದಸ್ಯ ಸ್ಥಾನದ ಉಪ ಚುನಾವಣೆ ಕುರಿತು ಅದ್ಯಕ್ಷ ಆರ್.ಮೋಹನ್ ನೇತೃತ್ವದಲ್ಲಿ ವಾರ್ಡ್ ಪ್ರಮುಖರ ಸಭೆ ಮತ್ತು ನಗರಸಭೆ ಸದಸ್ಯರ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಆರೋಗ್ಯಕರ ಮುಕ್ತ ಚರ್ಚೆಯಾಗಿ, ಪ್ರಶಾಂತ್ ನಾಗಾರಾಜ್ ಕುಟುಂಬದವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಕ್ತ ಅವಕಾಶ ಕೊಡಬೇಕು ಎಂಬ ಚರ್ಚೆಗಳಾದವು. ರಾಜಕಾರಣ ಮೀರಿ ಆ ಕುಟುಂಬಕ್ಕೆ ಸಹಕಾರ ನೀಡಬೇಕು ಎಂಬ ಅಭಿಪ್ರಾಯಗಳೂ ಬಂದವು.
ಆ ಕುಟುಂಬದವರಿಗೆ ಸಹಕಾರಿಯಾಗಿ ನಿಲ್ಲಲು ಸಿದ್ಧವಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರಿಗೂ ಇದೇ ಮನವಿ ಮಾಡುತ್ತೇವೆ. ಪ್ರಶಾಂತ್ ಕುಟುಂಬದ ಒಬ್ಬರು ಆ ವಾರ್ಡ್ ಸದಸ್ಯರಾಗಲು ಮುಕ್ತ ಅವಕಾಶ ಕಲ್ಪಿಸಬೇಕಿದೆ. ಸಾವಿನ ವಿಚಾರದಲ್ಲಿ ಯಾರೂ ರಾಜಕಾರಣ ಮಾಡುವುದು ಬಿಟ್ಟು ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕಿದೆ.. ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಅವಿರೋಧ ಆಯ್ಕೆ ಆಗುವಂತೆ ಮಾಡಬೇಕಿದೆ. ನಮ್ಮ ನಿರ್ಧಾರ ಪ್ರಕಟಿಸಿದ್ದೇವೆ. ಉಳಿದ ನಿರ್ಧಾರ ಜೆಡಿಎಸ್, ಕಾಂಗ್ರೆಸ್ ಪಕ್ಷದವರಿಗೆ ಬಿಡುತ್ತೇವೆ. 16ನೇ ವಾರ್ಡ್ ವ್ಯಾಪ್ತಿಯ ಜನರ ಒಮ್ಮತದ ಅಭಿಪ್ರಾಯ ಇದೇ ಆಗಿದ್ದರೆ ಆ ಕುಟುಂಬಕ್ಕೆ ಗೌರವ ಸಿಗಬೇಕು. ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಶಕ್ತಿ ಪ್ರದರ್ಶನ ಮಾಡುವ ಅನಿವಾರ್ಯತೆ ಬಿಜೆಪಿಗರಿಗಿಲ್ಲ. ಪ್ರಿತಂ ಗೌಡನಿಗೂ ಇಲ್ಲ. ಗೆಲುವೇ ಮಾನದಂಡ ಅಲ್ಲ. ಮಾನವೀಯತೆಯೂ ಮುಖ್ಯವಾಗುತ್ತದೆ.ಶಾಸಕನಾಗಿ ನಾನೇ ಚುನಾವಣೆ ಬೇಡ ಎಂದು ಹೇಳುತ್ತಿರುವಾಗ ಜೆಡಿಎಸ್ ವಿರೋಧ ಮಾಡುತ್ತದೆ ಎಂದು ಅನಿಸುತ್ತಿಲ್ಲ.ಅದರಲ್ಲೂ ಚುನಾವಣೆ ನಡೆದರೆ ಗೆಲ್ಲೋದು ನಾವೇ. ಆದರೆ ಆ ಕುಟುಂಬದ ಮೇಲಿನ ಕಾಳಜಿಯಿಂದ ಈ ನಿರ್ಧಾರಕ್ಕೆ ಬಂದಿದ್ದು ಎಲ್ಲ ಪಕ್ಷದವರು ಸಹಮತ ನೀಡುತ್ತಾರೆ ಎಂಬ ವಿಶ್ವಾಸವಿದೆ.16ನೇ ವಾರ್ಡ್ ಉಪ ಚುನಾವಣೆ ಸಂಬಂಧ ನಮ್ಮ ಪಕ್ಷ ತೆಗೆದುಕೊಂಡಿರುವ ನಿರ್ದಾರದ ಹಿಂದೆ ರಾಜಕೀಯ ತಂತ್ರಗಾರಿಕೆ ಇಲ್ಲ.ನಮ್ಮ ನಿರ್ಧಾರ ಸರಿ ಇಲ್ಲ ಎಂದು ಜೆಡಿಎಸ್ ಸೇರಿ ಯಾರೇ ಅಭಿಪ್ರಾಯ ಪಟ್ಟು ಚುನಾವಣೆ ನಡೆಸಬೇಕು ಅನ್ನುವುದಾದರೆ ನಾವು ಅಭ್ಯರ್ಥಿ ಹಾಕಿ ಗೆಲ್ಲಿಸೊಂಡು ಬರುತ್ತೇನೆ.ಆ ಕುಡುಂಬದ ಮೇಲೆ ರಾಜಕಾರಣ ಮೀರಿದ ಸಂಬಂಧ ಇರುವ ಕಾರಣ ಈ ನಿರ್ಧಾರಕ್ಕೆ ಬಂದಿದ್ದೇವೆ.ಅದೇ ಕಾರಣಕ್ಕೆ ಆ ಕುಡುಂಬದ ವಿರುದ್ಧ ಅಭ್ಯರ್ಥಿ ಹಾಕಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಎಂದು ಹಾಸನದಲ್ಲಿ ಶಾಸಕ ಪ್ರೀತಂ ಗೌಡ ಹೇಳಿಕೆ ನೀಡಿದರು.