Wednesday, February 5, 2025

Latest Posts

ಹಾಸ್ಟೆಲ್ ವಿದ್ಯಾರ್ಥಿನಿಯನ್ನು ಮದುವೆ ಆಗುತ್ತೀನಿ ಎಂದು ನಂಬಿಸಿ ಮೋಸ ಮಾಡಿದ ಹಾಸ್ಟೆಲ್ ವಾರ್ಡನ್..!

- Advertisement -

 

ಹಾಸ್ಟೆಲ್ ವಿದ್ಯಾರ್ಥಿನಿಯನ್ನು ಮದುವೆ ಆಗುತ್ತಿನೆಂದು ಹಾಸ್ಟೆಲ್ ವಾರ್ಡನ್ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಾಸ್ಟೆಲ್ ವಾರ್ಡನ್ ಸತೀಶ್ ಎಂಬಾತ ಓರ್ವ ವಿಧ್ಯಾರ್ಥಿನಿ ಮೇಲೆ ಪ್ರಸಂಗ ಎಸಗಿರುವ ಕಾರಣ ಮದ್ದೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಎಂಗೇಜ್ ಮೆಂಟ್ ಎಂದು ಮನೆಯಲ್ಲಿ ಒತ್ತಾಯ ಮಾಡುತ್ತಿದ್ದಾರೆ ಎಂದು ಹುಡುಗಿಗೆ ಸುಳ್ಳು ಹೇಳಿ ಹುಡುಗಿಗೆ ಮೋಸ ಮಾಡಿದ್ದಾನೆ.ಈ ಹಿಂದೆ ಲೈಂಗಿಕ ಸಂಪರ್ಕ ಹೊಂದಿದ್ದ ವಾರ್ಡನ್ ಸತೀಶ್ ಯುವತಿಗೆ ಮೂರು ಭಾರಿ ಅಬಾರ್ಷನ್ ಮಾಡಿಸಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ, ಮದುವೆಯಾಗುವಂತೆ ಯುವತಿ ಒತ್ತಾಯ ಮಾಡುತಿದಂತೆ ಸತೀಶ್ ಉಲ್ಟಾ ಹೊಡೆದಿದ್ದಾನೆ ನೋಡಿ, ಸರ್ಕಾರಿ ನೌಕರರನ್ನು ಮದುವೆ ಯಾಗು ಎಂದು ಬೇಜವಾಬ್ದಾರಿಯ ಹೇಳಿಕೆಯನ್ನು ನೀಡಿ ಹಾಸ್ಟಲ್ ವಾರ್ಡನ್ ಸತೀಶ್ ಯುವತಿಗೆ ಮೋಸ ಮಾಡಿದ್ದಾನೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳಿಗೆ ನೊಂದ ಯುವತಿ ದೂರು ನೀಡಿದ್ದಾಳೆ .ಮದ್ದೂರು ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು,ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ,ಚಿಂತಿಸದ ಸತೀಶ್ ನನಗೆ ರಾಜಕಾರಣಿಗಳು ಗೊತ್ತು ನಿನ್ನನ್ನು ಜೀವ ಸಮೇತ ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದಾನೆ ಎಂದು ಯುವತಿಗೆ ಬೆದರಿಕೆಯನ್ನು ಹಾಕಿದ್ದಾನೆ. ಹಣ ಪಡೆದು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಯುವತಿಯ ತಂದೆ ತಾಯಿ ಆರೋಪ ಮಾಡಿದ್ದಾರೆ.

ಮಧುಸೂಧನ್, ಕರ್ನಾಟಕ ಟಿವಿ

 

 

- Advertisement -

Latest Posts

Don't Miss