Hostle: ಹೇಳತೀರದಾಗಿದೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಅವ್ಯವಸ್ಥೆ: ಸಚಿವರೇ ಕಣ್ಣುತೆರೆದು ನೋಡಿ..

ಹುಬ್ಬಳ್ಳಿ: ಅದು ಹುಬ್ಬಳ್ಳಿಯ ಆಯಕಟ್ಟಿನ ಜಾಗೆಯಲ್ಲಿರುವ ಹಾಸ್ಟೆಲ್. ಈ ಹಾಸ್ಟೆಲ್ ಗಾಗಿ ಸರ್ಕಾರ ಸಾಕಷ್ಟು ಹಣವನ್ನು ವ್ಯಯಿಸುತ್ತಿದೆ. ಆದರೆ ಇಲ್ಲಿನ ಅವ್ಯವಸ್ಥೆ ನೋಡಿದರೆ ನಿಜಕ್ಕೂ ವಿದ್ಯಾರ್ಥಿಗಳ ಕಷ್ಟ ಅರ್ಥವಾಗುತ್ತದೆ. ಅಷ್ಟಕ್ಕೂ ಏನಿದು ವಿದ್ಯಾರ್ಥಿಗಳ ಕಷ್ಟದ ಕಹಾನಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..

ವಾಣಿಜ್ಯನಗರಿ ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದ ಶೋಚನೀಯ ಸ್ಥಿತಿ ನೋಡಿದವರಿಗೆ ಅರ್ಥವಾಗುತ್ತದೆ. ಇಲ್ಲಿನ ಅವ್ಯವಸ್ಥೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದರೆ ಸಮಸ್ಯೆಗಳ ಸರಮಾಲೆಯೇ ಬಿಚ್ಚಿಕೊ­ಳ್ಳುತ್ತದೆ. ಹೌದು.. ಈ ನಿಲಯದಲ್ಲಿ ಒಟ್ಟು 18 ಮಲಗುವ ಕೋಣೆಗಳಿದ್ದು, ಅದರಲ್ಲಿರುವ 4 ಕೋಣೆಗಳನ್ನು ಬೀಗ ಹಾಕಿ ಬಂದ್ ಮಾಡಲಾಗಿದೆ. ಇನ್ನುಳಿದ 14 ಕೋಣೆಗಳಲ್ಲಿ 150 ವಿದ್ಯಾರ್ಥಿಗಳು ಇರಬೇಕಾಗಿದೆ. ಪಿಯುಸಿ, ಡಿಪ್ಲೊಮಾ, ಬಿ.ಎಡ್‌, ಪದವಿ ಹಾಗೂ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 150 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಆದರೆ ಸರಿಯಾದ ವ್ಯವಸ್ಥೆ ಇಲ್ಲದೇ ಸಾಕಷ್ಟು ಸಮಸ್ಯೆಗಳ ಮಧ್ಯದಲ್ಲಿಯೇ ವ್ಯಾಸಂಗ ಮಾಡುವಂತಾಗಿದೆ. ಬಯೋಮೆಟ್ರಿಕ್‌ ಹಾಜರಾತಿ ಇದೆ. ಆದರೆ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ದೂರದರ್ಶನ ಸೌಲಭ್ಯವಿಲ್ಲ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಎರಡು ಮೂರು ಕಡೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ ಆದರೆ ಅವುಗಳು ಕೂಡ ಕೆಲಸ ಮಾಡುತ್ತಿಲ್ಲ. ಇನ್ನೂ ಭದ್ರತಾ ದೃಷ್ಟಿಯಿಂದ ನೋಡುವುದಾದರೆ ಇಲ್ಲಿ ಭದ್ರತಾ ವ್ಯವಸ್ಥೆ ಇಲ್ಲ. ಇಲ್ಲಿನ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳೇ ತಮ್ಮ ಮನದ ಮಾತನ್ನು ಬಿಚ್ಚಿಟ್ಟಿದ್ದಾರೆ.

ಇನ್ನೂ ಒಂದು ರೂಮಿನಲ್ಲಿ ನಾಲ್ವರು ವಿದ್ಯಾರ್ಥಿನಿಯರು ಇರ­ಬಹುದಾದ ಕಡೆಯಲ್ಲಿ 8ರಿಂದ 10 ಮಂದಿ ಇದ್ದಾರೆ. ಅವರಿಗೆ ನೀಡಿರುವ ಅಲ್ಯುಮಿನಿಯಂ ಪೆಟ್ಟಿಗೆಯನ್ನು ಇಡಲು ಸ್ಥಳಾವಕಾಶ ಇಲ್ಲದೇ ಮಂಚದ ಅಡಿಗೆ ತುರುಕಲಾಗಿದೆ. ವಿದ್ಯಾರ್ಥಿಗಳು ತಮ್ಮ ಬಟ್ಟೆ ಹಾಗೂ ಪುಸ್ತಕಗಳನ್ನು ಒಪ್ಪವಾಗಿ ಜೋಡಿಸಿಟ್ಟುಕೊಳ್ಳಲು ಸಹ ಅಲ್ಲಿ ಸ್ಥಳದ ಅಭಾವ ಇದೆ. ಇನ್ನೂ ನಿಲಯದಲ್ಲಿ 4 ಶೌಚಾಲಯ ಹಾಗೂ 4 ಸ್ನಾನಗೃಹಗ­ಳಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿ­ಸಿದರೆ ಇದು ತೀರಾ ಕಡಿಮೆ ಇದೆ. ಕೆಲವು ಬಾಗಿಲು ಹಾಳಾಗಿವೆ ಈ ಬಗ್ಗೆ ಪರಿಶೀಲನೆ ನಡೆಸಬೇಕಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇತ್ತ ತಲೆ ಕೂಡ ಹಾಕದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.

ಒಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡುವುದಿಲ್ಲ. ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸುವುದಿಲ್ಲ ಸರ್ಕಾರದಿಂದ ಎಷ್ಟೇ ಸೌಲಭ್ಯ ಕೊಟ್ಟರು ಇಲ್ಲಿರುವ ವಿದ್ಯಾರ್ಥಿಗಳಿಗೆ ತಲುಪುವುದಿಲ್ಲ. ಹೀಗಾದರೇ ವಿದ್ಯಾರ್ಥಿಗಳ ಗತಿ ಏನು ಇಲಾಖೆಯ ಸಚಿವರೇ ಇತ್ತ ಗಮನ ಹರಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಒತ್ತನ್ನು ನೀಡಿ..

Kajol: ಕೊನೆಗೂ ರೂಲ್ಸ್ ಗೆ ಬ್ರೇಕ್ ಹಾಕಿದ ಕಾಜೋಲ್..! ಏನಿದು ರೂಲ್ಸ್ ?

Tomato-ಟೋಮಾಟೊ ಹಣ್ಣಿಗೆ ಪೋಲಿಸರ ಬಿಗಿ ಬಂದೋಬಸ್ತ್

Bison : ರಸ್ತೆ ಮಧ್ಯೆ ಕಾಡುಕೋಣ ಪ್ರತ್ಯಕ್ಷ…!

 

About The Author