Dehali News: ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿದಿದೆ. ಇದು ವರೆಗೂ ಯಮುನೆ ಮಳೆ ಕಡಿಮೆ ಹರಿದಿದ್ದರೂ ಇಂತಹ ಪರಿಸ್ಥಿತಿ ತಂದಿರಲಿಲ್ಲ. ಈ ಬಾರಿ ಮೈ ದುಂಬಿ ಹರಿದು ದೆಹಲಿಗೆ ಜಲದಿಗ್ಬಂಧನ ಹಾಕಿದ್ದಾಳೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹರಿಯಾಣದ ಹಥಿನಿಕುಂಡ್ ಬ್ಯಾರೇಜ್ ನಿಂದ ಬಿಡುಗಡೆಯಾದ ನೀರು ದೆಹಲಿ ತಲುಪಲು ಕಡಿಮೆ ಸಮಯ ತೆಗೆದುಕೊಳ್ಳುತ್ತಿತ್ತು. ದೆಹಲಿಯಿಂದ 180 ಕಿಮೀ ದೂರದಲ್ಲಿರುವ ಹಥಿನಿ ಕುಂಡ್ ಬ್ಯಾರೇಜ್‌ನಿಂದ ರಾಜಧಾನಿಗೆ ನೀರು ಬರಲು ಸುಮಾರು ಎರಡು ಮೂರು ದಿನಗಳು ಬೇಕಾಗುತ್ತಿತ್ತು, ಆದರೆ ಈ ಬಾರಿ ಅದು ಕೇವಲ ಒಂದು ದಿನದಲ್ಲಿ ನೀರು ತಲುಪುತ್ತಿದೆ ಎಂಬುದೇ ವಿಶೇಷ.
ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿ ಒತ್ತುವರಿ, ಅತಿಕ್ರಮಣ ನಡೆದಿದೆ ಎಂಬುವುದು ವಾದ. ಹಾಗಾಗಿ ಹಥಿನಿ ಕುಂಡ್ ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರು ಹಾದುಹೋಗಲು ಕಿರಿದಾದ ಪ್ರದೇಶ ಸೃಷ್ಟಿಯಾಗಿದೆ. ನದಿಯ ತಳದಲ್ಲಿ ಹೂಳು ತುಂಬಿಕೊಂಡಿದೆ ಹೀಗಾಗಿ ಕಡಿಮೆ ಮಳೆ ಇದ್ದರೂ ಕೂಡ ಯುಮುನೆ ಮುನಿಸಿಕೊಂಡು ದೆಹಲಿಗೆ ಜಲದಿಗ್ಬಂಧನ ಹೇರಿದೆ ಎನ್ನಲಾಗಿದೆ.