ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯಲ್ಲಿ ವಿವಿಧ ಕೌಶಲ್ಯಾಧಾರಿತ ತರಬೇತಿಗೆ ನಿರುದ್ಯೋಗ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೆಪ್ಟೆಂಬರ್ ಮಾಹೆಯಲ್ಲಿ ತರಬೇತಿಗಳು ಆರಂಭವಾಗಲಿದ್ದು, ತರಬೇತಿ ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ. 30 ದಿನಗಳ “ಮೊಬೈಲ್ ಫೋನ್ ದುರಸ್ತಿ”, “ಹೌಸ್ ವಾಯರಿಂಗ್”, 10 ದಿನಗಳ “ಕುರಿ ಸಾಕಾಣಿಕೆ” ಹಾಗೂ ತರಕಾರಿ ನರ್ಸರಿ ನಿರ್ವಹಣೆ ತರಬೇತಿ ನೀಡಲಾಗುವುದು. ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು. ಗ್ರಾಮೀಣ ಭಾಗದವರಿಗೆ ಹಾಗೂ ಮೊದಲ ಬಂದವರಿಗೆ ಆದ್ಯತೆ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸದೊಂದಿಗೆ ದಿನಾಂಕ 25-08-2022ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಹಳಿಹಾಳ, ಉತ್ತರ ಕನ್ನಡ ಜಿಲ್ಲೆ, ದೂ.08284-295307, ಮೊ.9483485489, 9482188780, 8197022501 ಹಾಗೂ 9844796998 ಸಂಪರ್ಕಿಸಲು ಕೋರಲಾಗಿದೆ.




