ಹಾವೇರಿ: ದೇವಗಿರಿ ಗ್ರಾಮದಲ್ಲಿರುವ ಬ್ಯಾಂಕ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರೂದ್ಯೋಗಿ ಯುವತಿಯರಿಗೆ 30 ದಿನಗಳ “ಮಹಿಳಾ ಹೋಲಿಗೆ ” ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಊಟ-ವಸತಿಯೊಂದಿಗೆ ತರಬೇತಿ ಉಚಿತವಾಗಿದ್ದು, ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು.
ನಾಂಕ 07-07-2022 ರಿಂದ 05-08-2022 ರವರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಡಿಸೈನ್ಸ್, ಚೂಡಿದಾರ, ಪಟಿಯಾಲ, ಸೆಮಿಪಟಿಯಾಲ ಪ್ಯಾಂಟ್, ಶಾಲಾ ಸಮವಸ್ತ್ರ, ನೈಟ್ ಡ್ರೇಸ್ ಸೇರಿದಂತೆ ಮಹಿಳಾ ಉಡುಪುಗಳ ಹೊಲಿಗೆ ತರಬೇತಿ ನೀಡಲಾಗುವುದು. ಜೊತೆಗೆ ಬ್ಯಾಂಕಿಂಗ್ ವ್ಯವಹಾರ, ಉದ್ಯಮ ಮುನ್ನಡೆಸುವ ವಿಧಾನ, ಸಮಯದ ನಿರ್ವಹಣೆ ಮುಂತಾದವುಗಳ ಕುರಿತಾಗಿ ತರಬೇತಿ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ಇತ್ತೀಚಿನ ಭಾವಚಿತ್ರ, ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರದ ಝೆರಾಕ್ಸ್ ಪ್ರತಿಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ, ನಿರ್ದೇಶಕರು, ವಿಜಯ ಬ್ಯಾಂಕ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ದೇವಗಿರಿ, ಮೊ 9110865650, 8660219375 ಸಂಪರ್ಕಿಸಲು ಕೋರಲಾಗಿದೆ.




