ಹಾವೇರಿ: ಇಂದಿನಿಂದ ರಾಣೇಬೆನ್ನೂರ ಘಟಕದಿಂದ ಪೂನಾಗೆ ರಾಜಹಂಸ ಸಾರಿಗೆ ಸಂಚಾರ ಆರಂಭ

ಹಾವೇರಿ: ಕೋವಿಡ್ ಹಿನ್ನಲೆಯಲ್ಲಿ ರಾಣೇಬೆನ್ನೂರು ಘಟಕದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ರಾಣೇಬೆನ್ನೂರು-ಪೂನಾ ವೇಗತ ಸಾರಿಗೆ ಬದಲಾಗಿ ದಾವಣಗೆರೆ-ರಾಣೇಬೆನ್ನೂರು-ಪೂನಾ ರಾಜಹಂಸ ಪ್ರತಿಷ್ಟಿತ ಸಾರಿಗೆಯನ್ನು ಇಂದಿನಿಂದ ಆರಂಭಿಸಲಾಗುತ್ತಿದೆ ಎಂದು ವಾಕರಸಾಸಂ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಬಸ್ ಸೇವೆ ಉದ್ಘಾಟನೆಯಲ್ಲಿ ಶಾಸಕರು, ವಾಕರಸಾ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಭಾಗವಹಿಸಲಿದ್ದಾರೆ.
ಸದರಿ ಬಸ್ ದಾವಣಗೆರೆಯಿಂದ ಮಧ್ಯಾಹ್ನ 2-15ಕ್ಕೆ ಹೊರಟು ಪೂನಾಗೆ ಮರುದಿನ ಬೆಳಗ್ಗೆ 4-30ಕ್ಕೆ ತಲುಪುವುದು. ದಾವಣಗೆರೆಯಿಂದ ಪೂನಾಗೆ ರೂ.965/-, ರಾಣೇಬೆನ್ನೂರಿನಿಂದ ರೂ.895/-, ಹಾವೇರಿಯಿಂದ ರೂ.848/-, ಹುಬ್ಬಳ್ಳಿಯಿಂದ ರೂ,722 ಪ್ರಯಾಣ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಈ ಸಾರಿಗೆ ಸದುಪಯೋಗ ಪಡೆಯಲು ಕೋರಲಾಗಿದೆ.

About The Author