ರಾಜ್ಯದಲ್ಲಿ ಬೈ ಎಲೆಕ್ಷನ್ ಹೊಸ್ತಿಲಲ್ಲೇ ಮೇಕೆದಾಟು ಪಾಲಿಟಿಕ್ಸ್ ಶುರುವಾಗಿದೆ.. ಈ ಹಿಂದೆ ಕಾಂಗ್ರೆಸ್ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ಮಾಡಿತ್ತು. ಈಗ ಮೇಕೆದಾಟು ಕ್ರೆಡಿಟ್ಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಫೈಟ್ ಮಾಡ್ತಿವೆ.. ಈ ನಡುವೆ ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನ ಹಾಡಿ ಹೊಗಳಿದ್ದಾರೆ.. ತಮ್ಮ ಕಡೆಯ ಆಸೆಯೊಂದನ್ನ ಹೇಳಿಕೊಂಡಿದ್ದು, ಚನ್ನಪಟ್ಟಣದ ಜನರ ಮುಂದೆ ಶಪಥವೊಂದನ್ನ ಮಾಡಿದ್ದಾರೆ.
ಚನ್ನಪಟ್ಟಣ ಉಪಚುನಾವಣಾ ಕಣ, ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಒಂದೆಡೆ ಹೆಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಳೆದ ಎರಡು ಚುನಾವಣೆಯಲ್ಲಿ ಸೋತು ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೀಗ ಅವರನ್ನು ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ಅಖಾಡಕ್ಕಿಳಿದು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ದೇವೇಗೌಡರು ಕಾಂಗ್ರೆಸ್‌ಗೆ ಇದೀಗ ಮೇಕೆದಾಟು ಯೋಜನೆಯ ಪಂಚ್ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ ಮಾತನಾಡಿರೋ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ನಾನು ನನ್ನ ಕೊನೆ ಉಸಿರು ಎಳೆಯುವ ಮುನ್ನ ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿಯಿಂದ ಒಪ್ಪಿಗೆ ಕೊಡಿಸುತ್ತೇನೆ ಎಂದಿದ್ದಾರೆ.. ಮೇಕೆದಾಟು ಯೋಜನೆ ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ. ಕೊನೆ ಉಸಿರು ಎಳೆಯುವ ಮುನ್ನ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಹೆಚ್ ಡಿ ದೇವೇಗೌಡರು ಶಪಥ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ನೀರಿನ ವಿಚಾರದಲ್ಲೇ ಪಾಲಿಟಿಕ್ಸ್ ಇದೆ… ಇಗ್ಗಲೂರು ಅಣೆಕಟ್ಟೆ ಹಾಗೇ ನೀರು ಹರಿಸೋ ವಿಚಾರದಲ್ಲೂ ಜೆಡಿಎಸ್ ಹಾಗೇ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ನಡುವೆ ಕ್ರೆಡಿಟ್ ವಾರ್ ಇದೆ.. ಚನ್ನಪಟ್ಟಣಕ್ಕೆ ನೀರು ತಂದಿದ್ದು ನಾನೇ ಅಂತ ಸಿಪಿ ಯೋಗೇಶ್ವರ್ ಹೇಳಿಕೊಳ್ತಿದ್ರೆ, ಇಗ್ಗಲೂರು ಅಣೆಕಟ್ಟೆ ಕಟ್ಟಿಸಿದ್ದೇ ನಾನು ಅಂತ ದೇವೇಗೌಡರು ಹೇಳಿಕೊಳ್ತಿದ್ದಾರೆ.. ಇಗ್ಗಲೂರು ಅಣೆಕಟ್ಟೆಯಿಂದಲೇ ಚನ್ನಪಟ್ಟಣಕ್ಕೆ ನೀರು ಬರೋಕೆ ಸಾಧ್ಯ ಆಯ್ತು ಅಂತ ಇಲ್ಲಿ ದೇವೇಗೌಡರು ಹೇಳ್ತಿದ್ದಾರೆ..
ಇನ್ನೊಂದ್ಕಡೆ ನಾನು ಇಗ್ಗಲೂರು ಅಣೆಕಟ್ಟು ಕಟ್ಟಿದ್ದು ದೊಡ್ಡ ವಿಷಯವೇ ಅಲ್ಲ, ಬರೀ ಇಗ್ಗಲೂರು ಡ್ಯಾಮ್ ಅಷ್ಟೇ ಅಲ್ಲ, ಆಲಮಟ್ಟಿ, ಹಾರಂಗಿ, ಹೇಮಾವತಿ, ಯಗಚಿ ಅಣೆಕಟ್ಟು ಕಟ್ಟಿದವರು ಯಾರು ? ಅದನ್ನು ಸಿದ್ದರಾಮಯ್ಯ ಬಳಿ ನೀವು ಕೇಳಿ. ನಾನು ಪ್ರಧಾನಿ ಆಗಿದ್ದೇ ದೈವದ ಆಟ ಅಂತ ದೇವೇಗೌಡರು ಹೇಳಿದ್ದಾರೆ.. ಚನ್ನಪಟ್ಟಣ ಜನರ ಮತ ಪಡೆಯೋಕೆ ಈಗ ಮತ್ತೆ ಮೇಕೆದಾಟು ಯೋಜನೆ ಮುನ್ನಲೆಗೆ ಬಂದಿದೆ.. ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಿದ್ದು ನಾವೇ ಅಂತ ದೇವೇಗೌಡರು ಹೇಳ್ತಿದ್ದಾರೆ.. ಅದರಂತೆ
ಪ್ರಧಾನಿ ಮೋದಿಗೆ ಯೋಜನೆ ಬಗ್ಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಹಲವಾರು ಸಲ ಅವರು ನನ್ನ ಮನವಿ ಆಲಿಸಿದ್ದಾರೆ. ಆದರೆ, ತಮಿಳುನಾಡಿನವರು ನಮ್ಮ ಕುತ್ತಿಗೆ ಹಿಡಿದಿದ್ದಾರೆ. ಮೋದಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ ಅಂತ ದೇವೇಗೌಡರು ಚನ್ನಪಟ್ಟಣದ ಜನತೆಗೆ ಹೊಸ ಭರವಸೆ ಕೊಟ್ಟಿದ್ದಾರೆ..
ಇನ್ನು ಚನ್ನಪಟ್ಟಣ ಜನರನ್ನ ನೋಡ್ತಿದ್ರೆ, 92 ವರ್ಷದ ನನಗೆ 18ರ ಶಕ್ತಿ ಬರುತ್ತದೆ. ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ಅಷ್ಟರಲ್ಲಿ ಮೇಕೆದಾಟು ಯೋಜನೆಗೆ ಮೋದಿಯಿಂದ ಸೈನ್ ಹಾಕಿಸಿಯೇ ಹಾಕಿಸ್ತೀನಿ ಅಂತ ದೇವೇಗೌಡ್ರು ಶಪಥ ಮಾಡಿದ್ದಾರೆ..