ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿನ ಬಗ್ಗೆ ದೇವೇಗೌಡರು ಪ್ರತಿಕ್ರಿಯಿಸಿದ್ದು ನಾನು ಮತ್ತೆ ಮಣ್ಣಿನಿಂದ ಎದ್ದು ಬರೋ ಶಕ್ತಿ ಹೊಂದಿರುವೆ ಅಂತ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡ, ನಾನು ಸುಖದ ಸುಪ್ಪತ್ತಿಗೆಯಲ್ಲಿ ನಾನು ಬಿಳಿ ಕನ್ನಡಕವೂ ಹಾಕಿಲ್ಲ, ಕರಿ ಕನ್ನಡಕವೂ ಹಾಕಿಲ್ಲ. ಪಕ್ಷಕ್ಕೆ ನಿಷ್ಠೆಯಿಂದಿರಿ ದ್ರೋಹ ಬಗೆಯಬೇಡಿ ಲಿಂಗಾಯತ, ಕುರುಬ, ಒಕ್ಕಲಿಗ ಯಾರೇ ಇದ್ದರೂ ನಿಷ್ಠಾವಂತರಾಗಿರಿ. ನಿಷ್ಠಾವಂತ ಕಾರ್ಯಕರ್ತರನ್ನು ನಾನು ಗುರುತಿಸ್ತೀನಿ. ನಮ್ಮ ಪಕ್ಷವನ್ನು ರಾಜ್ಯದ ಮಹಾನುಭಾವರಾದ ರೈತರು ಉಳಿಸುತ್ತಾರೆ ಅನ್ನೋ ನಂಬಿಕೆ ನನಗಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.
ಇನ್ನು ತುಮಕೂರಿನಲ್ಲಿ ತಮ್ಮ ಸೋಲಿನ ಬಗ್ಗೆ ಮಾತನಾಡಿದ ದೇವೇಗೌಡ, ನಾನು ಸೋತಿರಬಹುದು ನಿಜ. ಆದ್ರೆ ಸೋತರೂ ಸುಮ್ಮನೆ ಕೂತಿಲ್ಲ. ಪಕ್ಷ ಸಂಘಟನೆಗೆ ವಯಸ್ಸು ಮುಖ್ಯವಲ್ಲ. ನನಗೆ ಇನ್ನೂ ಶಕ್ತಿ ಇದೆ. ಯಾರೇ ಪಕ್ಷ ಬಿಟ್ಟು ಹೋದ್ರೂ ಹೆದರುವ ಪ್ರಶ್ನೆಯೇ ಇಲ್ಲ ಅಂತ ದೇವೇಗೌಡರು ಖಡಕ್ ಮಾತುಗಳನ್ನಾಡಿದ್ರು.
ಸೋತುಬಿಟ್ಟಿದ್ದಾರೆ, ಮನೆಗೆ ಹೋಗ್ತಾರೆ ಅಂತ ಹೇಳ್ತಾರೆ. ಸೋತು ಮತ್ತೆ ಮಣ್ಣಿಂದ ಎದ್ದು ಬರೋದು ನನಗೆ ಗೊತ್ತು. ನಾನು ಸೋತಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಪಕ್ಷಕ್ಕೆ ಎಲ್ಲಿ ಪೆಟ್ಟು ಬಿದ್ದಿದೆಯೋ ಅದನ್ನು ಸರಿಪಡಿಸಿ ಪಕ್ಷ ಸಂಘಟನೆ ಮಾಡ್ತೀನಿ ಅಂತ ದೇವೇಗೌಡ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ ಕೊಡೋ ಅಕ್ಕಿ ಕಡಿಮೆಯಾಗುತ್ತಾ…? ಮಿಸ್ ಮಾಡದೇ ಈ ವಿಡಿಯೋ ನೋಡಿ