ಅವರದು ಇಟಲಿ ರಕ್ತ ಅಲ್ವೇ? ಸೋನಿಯಾ-ಕುಮಾರಸ್ವಾಮಿ ವಾರ್!

ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ವಿಚಾರವಾಗಿ ಶುರುವಾದ ರಾಜಕೀಯ ಜಂಜಾಟ ಈಗ ತಾರಕಕ್ಕೇರಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ನೀಡಿರುವ “ಇಟಲಿ ರಕ್ತ” ಎಂಬ ಹೇಳಿಕೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬಿರುಗೌಳಿ ಎಬ್ಬಿಸಿದೆ. ಈ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ವಾಕ್ಸಮರ ಮುಂದುವರಿದಿದೆ ಅಂತ ಹೇಳಬಹುದು!

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಗೆ ಸೋನಿಯಾ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾದ ವಿಚಾರವನ್ನು ಕಟುವಾಗಿ ಟೀಕಿಸಿದ್ದ ಕುಮಾರಸ್ವಾಮಿ, “ಸೋನಿಯಾ ಗಾಂಧಿ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಅವರು ನಮ್ಮ ದೇಶದವರೇ? ಮದುವೆಯಾದ ನಂತರ ನಮ್ಮ ದೇಶಕ್ಕೆ ಬಂದವರು. ಅವರ ದೇಹದಲ್ಲಿ ಹರಿಯುತ್ತಿರುವುದು ಇಟಲಿ ರಕ್ತ ಅಲ್ವೇ?” ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ಗೆ ‘ವಂದೇ ಮಾತರಂ’ ಎಂದರೆ ಎಂದಿಗೂ ಇಷ್ಟವಿಲ್ಲ ಎಂದು ಆರೋಪ ಮಾಡಿದ್ದಾರೆ.

ಹೌದು ‘ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಕರ್ನಾಟಕದ ಸಚಿವ ‘ರಿಜ್ವಾನ್ ಅರ್ಷದ್’ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿರೋದು ಸಹ ಬೆಳಕಿಗೆ ಬಂದಿದೆ. ಎಸ್ “ಕುಮಾರಸ್ವಾಮಿ ಒಬ್ಬ ಹತಾಶ ನಾಯಕ. ಸೋನಿಯಾ ಗಾಂಧಿ ಅವರು ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಜೀವ್ ಗಾಂಧಿಯವರ ಪತ್ನಿ. ಅನೇಕ ಭಾರತೀಯರಿಗಿಂತಲೂ ಹೆಚ್ಚಿನ ಭಾರತೀಯತೆಯನ್ನು ಅವರು ಹೊಂದಿದ್ದಾರೆ” ಎಂದು ಅರ್ಷದ್ ಸಮರ್ಥಿಸಿಕೊಂಡಿದ್ದಾರೆ.

ಆದರೆ ಈ ಟೀಕೆಗಳಿಗೆ ಜಗ್ಗದ ಎಚ್.ಡಿ. ಕುಮಾರಸ್ವಾಮಿ ಮಂಗಳವಾರವೂ ತಮ್ಮ ಮಾತಿಗೆ ಬದ್ಧರಾಗಿದ್ದಾರೆ. “ಅವರ ಪತಿ ತ್ಯಾಗ ಮಾಡಿದ್ದು ಹೌದು, ಆದರೆ ಸೋನಿಯಾ ಗಾಂಧಿ ಏನು ತ್ಯಾಗ ಮಾಡಿದ್ದಾರೆ? ಅವರು ಭಾರತೀಯ ಭಾವನೆಗಳಿಗೆ ವಿರೋಧವಾಗಿದ್ದಾರೆ” ಎಂದು ಮರುಪ್ರಶ್ನಿಸಿದ್ದಾರೆ. ಮಹಾತ್ಮ ಗಾಂಧೀಜಿ ಹಾಗೂ ರವೀಂದ್ರನಾಥ ಟ್ಯಾಗೋರ್ ಕಾಲದಿಂದಲೂ ವಂದೇ ಮಾತರಂಗೆ ಇರುವ ಮಹತ್ವವನ್ನು ಅವರು ಈ ವೇಳೆ ನೆನಪಿಸಿದ್ದಾರೆ.

ವಂದೇ ಮಾತರಂ ವಿವಾದದ ಸುತ್ತ ಹುಟ್ಟಿಕೊಂಡಿರುವ ಈ ವೈಯಕ್ತಿಕ ಹಾಗೂ ರಾಜಕೀಯ ವಾಗ್ದಾಳಿ ಮುಂಬರುವ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ..

About The Author