Tuesday, October 14, 2025

Latest Posts

ಬಂಡೆ ಕನಸಿಗೆ ಹೆಬ್ಬಂಡೆ! ಡಿಕೆ ಶಿವಕುಮಾರ್‌ಗೆ ಡೇಂಜರ್ ಅಂದಿದ್ದೇಕೆ HDK?

- Advertisement -

ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲೇಬೇಕು ಅನ್ನೋ ಮಹತ್ವಾಕಾಂಕ್ಷೆಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಇಳಿಸೋದಕ್ಕೆ ಶತ ಪ್ರಯತ್ನ ನಡೆಸುತ್ತಿರುವ ವಿಚಾರ ಕಾಂಗ್ರೆಸ್ ವಲಯದಲ್ಲಿ ಬಹುದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಇದೇ ನವೆಂಬರ್ ತಿಂಗಳಲ್ಲಿ ಡಿ.ಕೆ ಶಿವಕುಮಾರ್ ಕರ್ನಾಟಕದ 24ನೇ ಮುಖ್ಯಮಂತ್ರಿ ಆಗಲಿದ್ದಾರೆ ಅನ್ನೋ ಗಟ್ಟಿ ವಾದವೂ ಡಿಕೆ ಬಣದ ಕಡೆಯಿಂದ ಕೇಳಿ ಬರುತ್ತಿದೆ. ಇದೇ ಹೊತ್ತಿಗೆ ಸರಿಯಾಗಿ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಅವರಿಗೆ ಹೆಬ್ಬಂಡೆಯೊಂದು ಸವಾಲು ಎಸೆಯುತ್ತಿದೆ.

ಒಂದು ಕಡೆ ಡಿ.ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿ ಪ್ರಕರಣ ಇದೀಗ ಸುಪ್ರೀಂಕೋರ್ಟ್‌ನ ಹೊಸ ಪೀಠಕ್ಕೆ ವರ್ಗಾವಣೆ ಆಗಿದೆ. ಕಳೆದ ಅಕ್ಟೋಬರ್‌ನಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರ ಅನುಮತಿ ಹಿಂಪಡೆದಿತ್ತು. ಸರಕಾರದ ನಿರ್ಧಾರ ಪ್ರಶ್ನಿಸಿ ಕಳೆದ ಅಕ್ಟೋಬರ್‌ನಲ್ಲಿ ಸಿಬಿಐ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿತ್ತು.

ಈ ಮಧ್ಯೆ, ಬಸನಗೌಡ ಪಾಟೀಲ್‌ ಯತ್ನಾಳ್‌ ಸಹ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ನ್ಯಾ. ಸೂರ್ಯಕಾಂತ್‌ ನೇತೃತ್ವದ ಹೊಸ ನ್ಯಾಯಪೀಠವು ಕರ್ನಾಟಕ ಸರಕಾರದ ವಿರುದ್ಧ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ. ಈ ಮುನ್ನ ನ್ಯಾ. ಸೂರ್ಯಕಾಂತ್‌ ನೇತೃತ್ವದ ಮತ್ತೊಂದು ಪೀಠವು ಇವುಗಳನ್ನು ವಿಚಾರಣೆ ನಡೆಸುತ್ತಿತ್ತು. ಸಿಜೆಐ ಬಿ.ಆರ್‌. ಗವಾಯಿ ಮತ್ತು ನ್ಯಾ. ಕೆ. ವಿನೋದ್‌ ನೇತೃತ್ವದ ಪೀಠ ಸೋಮವಾರ ಈ ವಿಷಯ ತಿಳಿಸಿದೆ.

ಬಂಡೆ ಪಾಲಿಗೆ ಸುಪ್ರೀಂ ಕೋರ್ಟ್ ಹೆಬ್ಬಂಡೆ ಆಗಲಿದೆಯೋ? ಅಥವಾ ಡಿಕೆ ಪಾಲಿನ ಸಾಂಪ್ರದಾಯಿಕ ರಾಜಕೀಯ ಎದುರಾಳಿಯಂತೆ ಕಾಣುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯೇ ಹೆಬ್ಬಂಡೆಯಾದರೇ? ಅನ್ನೋ ಅನುಮಾನ ಗಟ್ಟಿಗೊಳ್ಳುತ್ತಿದೆ. ಇದಕ್ಕೂ ಕಾರಣ, ಕುಮಾರಸ್ವಾಮಿ ಅವರ ಹೇಳಿಕೆ.

ಕಾಂಗ್ರೆಸ್ ಸರ್ಕಾರದ ಬಿಡದಿ ಟೌನ್ ಶಿಪ್‌ ಯೋಜನೆಯಿಂದಾಗಿ ರೈತರು ಬೀದಿಪಾಲಾಗಲಿದ್ದಾರೆ ಎಂದು ಆಗ್ರಹಿಸಿ ಜೆಡಿಎಸ್ ರೈತರೊಂದಿಗೆ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯ ವೇಳೆ ಕೇಂದ್ರ ಸಚಿವ ಹೆಚ್​ಡಿಕೆ ವಿಡಿಯೋ ಸಂದೇಶದ ಮೂಲಕ ಡಿಕೆ ಶಿವಕುಮಾರ್ ಕೆಲವೇ ದಿನಗಳಲ್ಲಿ ಜೈಲು ಸೇರಲಿದ್ದಾರೆ ಅನ್ನೋ ಮಹತ್ವದ ಮಾಹಿತಿ ಹೊರಗೆಡವಿದ್ದಾರೆ. ನನ್ನ ಕುಟುಂಬವನ್ನ, ನನ್ನ ಪಕ್ಷವನ್ನ ಮುಗಿಸೋದಕ್ಕೆ ಡಿಕೆ ಶಿವಕುಮಾರ್ ನಡೆಸಿದ ಪಿತೂರಿ ಎಲ್ಲವೂ ಗೊತ್ತಿದೆ. ಡಿಕೆ ಶಿವಕುಮಾರ್ ಜೈಲಿಗೆ ಹೋಗುವ ದಿನಗಳು ದೂರವಿಲ್ಲ ಅನ್ನೋ ಮೂಲಕ ಬಾಂಬ್ ಸಿಡಿಸಿದ್ದಾರೆ. ಅಲ್ಲಿಗೆ ಡಿಕೆ ಶಿವಕುಮಾರ್ ಪಾಲಿಗೆ ಸುಪ್ರೀಂ ಕೋರ್ಟ್ ಆದೇಶ ಹಾಗೂ ಹೆಚ್​ ಡಿಕೆ ಆಡಿದ ಮಾತು ಎರಡೂ ಸಹ ಎರಡು ಹೆಬ್ಬಂಡೆಯಂತೆ ಬಂಡೆ ಸಿಎಂ ಆಗೋ ಕನಸ್ಸಿಗೆ ಅಡ್ಡಿಯಾದಂತೆ ಕಾಣುತ್ತಿದೆ.

- Advertisement -

Latest Posts

Don't Miss