ಅವ್ರು IAS ಮಾಡಿದ್ರೆ? ಎಂದ ರೇವಣ್ಣ- ಡಿಸಿ ವಿರುದ್ಧ ರೊಚ್ಚಿಗೆದ್ದಿದ್ದೇಕೆ?

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಜಟಾಪಟಿ ಜೋರಾಗಿದೆ. ಅದರಲ್ಲೂ ವಿಶೇಷವಾಗಿ, ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಜಿಲ್ಲಾಧಿಕಾರಿ ಲತಾಕುಮಾರಿ ನಡುವಿನ ವಾಕ್ಸಮರ ಸಖತ್ ಸೌಂಡ್ ಮಾಡ್ತಿದೆ. ಐಎಎಸ್ ಅಧಿಕಾರಿಯ ವರ್ತನೆ ವಿರುದ್ಧ ರೇವಣ್ಣ ಅವರು ಸಿಡಿದೆದ್ದಿದ್ದು ಹೇಗೆ? ಅವರು ಮಾಧ್ಯಮಗಳ ಮುಂದೆ ಏನೆಲ್ಲಾ ಆರೋಪ ಮಾಡಿದ್ದಾರೆ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ. ರೇವಣ್ಣ, ಡಿಸಿ ವಿರುದ್ಧ ನೇರವಾಗಿ ಹರಿಹಾಯ್ದಿದ್ದಾರೆ. ‘ಅವರು ಐಎಎಸ್ ಮಾಡಿದ್ರೆ, ಜನ ನನ್ನನ್ನು ಆರು ಬಾರಿ ಗೆಲ್ಲಿಸಿ ಶಾಸಕನನ್ನಾಗಿ ಮಾಡಿದ್ದಾರೆ’ ಅಂತಾ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಮೀಸಲಾತಿ ಪಟ್ಟಿ ವಿಚಾರದಲ್ಲಿ ಅಧಿಕಾರಿಗಳು ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿರುವ ರೇವಣ್ಣ, ‘ನಾನು ಮೂವತ್ತು ವರ್ಷದ ರಾಜಕಾರಣದಲ್ಲಿ ಎಂಥೆಂಥಾ ಸೀನಿಯರ್ ಆಫೀಸರ್ಸ್‌ಗಳನ್ನೆಲ್ಲಾ ನೋಡಿದ್ದೀನಿ. ಡಿಸಿ ಅಷ್ಟು ನಾನು ಐಎಎಸ್ ಓದಿಲ್ಲ, ಆದ್ರೆ ಜನರಿಗಾಗಿ ಕೆಲಸ ಮಾಡೋ ಅನುಭವ ನನಗಿದೆ. ನಾನೊಬ್ಬ ಆರ್ಡಿನರಿ ಶಾಸಕ, ಎರಡು ಕಾಲು ಲಕ್ಷ ಜನರಿಗೆ ಕೂಲಿ ಮಾಡ್ತಿದ್ದೀನಿ’ ಅಂತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮೀಸಲಾತಿ ಪಟ್ಟಿ ತಯಾರಿಸೋದ್ರಲ್ಲಿ ದೊಡ್ಡಮಟ್ಟದ ಗೋಲ್‌ಮಾಲ್ ನಡೆದಿದೆ ಅಂತಾ ರೇವಣ್ಣ ಆರೋಪಿಸಿದ್ದಾರೆ. ‘ಒಬ್ಬ ರಾಜಕಾರಣಿ ಹೇಳಿದಂತೆ ಮೀಸಲಾತಿ ಪಟ್ಟಿ ನಿಗದಿ ಮಾಡಿದ್ದಾರೆ, ಸಣ್ಣಪುಟ್ಟ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳಿಗೆ ನರಕಯಾತನೆ ಕೊಡ್ತಿದ್ದಾರೆ. ಇದರ ಬಗ್ಗೆ ಮುಂದಿನ ಸೋಮವಾರ ಎಲೆಕ್ಷನ್ ಕಮಿಷನ್ ಹಾಗೂ ಮುಖ್ಯ ಕಾರ್ಯದರ್ಶಿಗೆ ದೂರು ನೀಡ್ತೀನಿ. ಸಿಎಸ್‌ ಮುಂದೆ ಎಲ್ಲವನ್ನೂ ಬಿಚ್ಚಿಡ್ತೀನಿ’ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ.

ಕಳೆದ ಬಾರಿ ಹಾಸನಾಂಬೆ ಉತ್ಸವಕ್ಕೂ ಸೌಜನ್ಯಕ್ಕಾದ್ರೂ ಕರೆಯಲಿಲ್ಲ, ಈ ಸಾರಿ ನಾನೇ ದೇವಾಲಯಕ್ಕೆ ಹೋಗಲ್ಲ ಅಂತಾ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ದುರಹಂಕಾರ ಇದ್ದರೆ ಅವರ ಮನೆಯಲ್ಲಿಟ್ಟುಕೊಳ್ಳಲಿ ಅಂತಾ ಖಡಕ್ ಆಗಿ ವಾರ್ನ್ ಮಾಡಿದ್ದಾರೆ. ಮಹಿಳೆಯರ ಬಗ್ಗೆ ತಮಗೆ ಗೌರವ ಇದೆ, ಆದ್ರೆ ಅಧಿಕಾರಿಗಳ ಈ ವರ್ತನೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗ್ತಿದೆ ಅನ್ನೋದೇ ರೇವಣ್ಣ ಅವರ ವಾದ.

ಒಟ್ಟಿನಲ್ಲಿ, ಹಾಸನ ರಾಜಕಾರಣದಲ್ಲಿ ಈ ಐಎಎಸ್ ವರ್ಸಸ್ ರಾಜಕಾರಣಿ ಫೈಟ್ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕು.

About The Author